ಕೇಂದ್ರ ಸಚಿವರ ಇಂಗ್ಲಿಷ್‌ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ IPS ಆಫೀಸರ್

By Suvarna NewsFirst Published Jul 9, 2021, 3:06 PM IST
Highlights
  • ಕೇಂದ್ರ ಆರೋಗ್ಯ ಸಚಿವರ ಇಂಗ್ಲಿಷ್ ಟೀಕಿಸಿದ ನೆಟ್ಟಿಗರು
  • ಸೋಷಿಯಲ್ ಮೀಡಿಯಾ ಟ್ರೋಲ್‌ಗೆ ಐಪಿಎಎಸ್ ಆಫೀಸರ್ ಖಡಕ್ ಆನ್ಸರ್

ದೊಡ್ಡ ಹುದ್ದೆಯಲ್ಲಿರುವವರು ಚಿಕ್ಕ ತಪ್ಪು ಮಾಡಿದರೂ ಅದು ಬೇಗ ಹೈಲೈಟ್ ಆಗುತ್ತದೆ. ಮಾತಿನ ಮಧ್ಯೆ ಅಪ್ಪಿತಪ್ಪಿ ಚಿಕ್ಕ ತಪ್ಪು ಮಾಡಿದರೂ ಸಾಕು, ಟ್ರೋಲ್ ಹೊಳೆಯೇ ಹರಿಯುತ್ತದೆ.

ಉಡುಪು, ಮಾತು, ಘಟನೆ, ಹೆಳಿಕೆ ಎಲ್ಲಾ ಬಿಡಿ, ಭಾಷೆಯೂ ಸಾಕು. ಇದೀಗ ಕೇಂದ್ರ ಆರೋಗ್ಯ ಸಚಿವರ ಇಂಗ್ಲಿಷ್ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆರಂಭವಾಗಿದೆ.

55 ದಿನಗಳ ಬಳಿಕ ಸಕ್ರಿಯ ಕೇಸು ಹೆಚ್ಚಳ, ಶುರುವಾಗಿದೆ 3 ನೇ ಅಲೆ ಆತಂಕ

ಬಹಳಷ್ಟು ಟ್ರೋಲ್ ಸಚಿವರ ವಿರುದ್ಧ ಹರಿದಾಡುತ್ತಿರುವ ಸಂದರ್ಭ ಟ್ರೋಲ್‌ಗಳಿಗೆ ಖಡಕ್ ಆನ್ಸರ್ ಕೊಟ್ಟಿದ್ದಾರೆ ಒಬ್ಬ ಅಧಿಕಾರಿ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಇಂಗ್ಲಿಷ್ ಬಗ್ಗೆ ಟ್ರೋಲ್ ಮಾಡಿದ ಜನರಿಗೆ ಮಾತಿನ ಚಾಟಿ ಬೀಸಿದ್ದಾರೆ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ.

ಒಂದು ಸಣ್ಣ ಹಳ್ಳಿಯ ಸರ್ಕಾರಿ ಶಾಲೆಯಿಂದ ಬಂದಿದ್ದೇನೆ. ನಾನು ಇಂಗ್ಲಿಷ್ ಅನ್ನು ಬಹಳ ತಡವಾಗಿ ಕಲಿತಿದ್ದೇನೆ. ಇಲ್ಲಿಯವರೆಗೆ ನನ್ನ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಸಾಧನೆ ಮಾಡಿದ್ದೇನೆ. ತಮ್ಮ ಇಂಗ್ಲಿಷ್ ಭಾಷಾ ಕೌಶಲ್ಯದ ಬಗ್ಗೆ ಜನರನ್ನು ನಿರ್ಣಯಿಸುವಲ್ಲಿ ನಿರತರಾಗಿರುವ ನಿಮಗಿಂತ ಚೆನ್ನಾಗಿ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Coming from a govt school in a small town, I learnt English pretty late. Have done well in my professional and personal life so far. Better than many wokes who are busy judging people on their English language skills.

— Arun Bothra 🇮🇳 (@arunbothra)
click me!