Latest Videos

ರೈಲಿನಲ್ಲಿ ಮಹಿಳೆ ಮೇಲೆ ಕುಡಿದ ಮತ್ತಿನಲ್ಲಿ ಮೂತ್ರವಿಸರ್ಜಿಸಿದ ಯೋಧ, ಪ್ರಧಾನಿ ಕಚೇರಿಗೆ ದೂರು!

By Chethan KumarFirst Published Jun 15, 2024, 10:50 PM IST
Highlights

ಕುಡಿದ ಮತ್ತಿನಲ್ಲಿ ಯೋಧನೋರ್ವ ರೈಲಿನಲ್ಲಿದ್ದ ಮಹಿಳೆ ಮೇಲೆ ಮೂತ್ರವಿಸರ್ಜಿಸಿದ ಘಟನೆ ನಡೆದಿದೆ. ರೈಲ್ವೇ ಅಧಿಕಾರಿಗಳು ಕ್ರಮಕ್ಕೆ ಹಿಂದೇಟು ಹಾಕಿದ ಕಾರಣ ಪ್ರಧಾನಿ ಕಚೇರಿಗೆ ಮಹಿಳೆ ದೂರು ನೀಡಿದ್ದಾಳೆ.
 

ಗ್ವಾಲಿಯರ್(ಜೂ.15) ರೈಲಿನಲ್ಲಿ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಕುಡಿ ಮತ್ತಿನಲ್ಲಿ ಯೋಧನೋರ್ವ ಮೂತ್ರವಿಸರ್ಜನೆ ಮಾಡಿದ ಘಟನೆ ವರದಿಯಾಗಿದೆ.ಕುಡಿದು ತೂರಾಡುತ್ತಿದ್ದ ಯೋಧ ಮಹಿಳೆ ಮೂರ್ತ ವಿಸರ್ಜನೆ ಮಾಡಿ ಆಕೆಯ ಮೇಲೆ ಬಿದ್ದ ಘಟನೆ ದೆಹಲಿಯಿಂದ ಚತ್ತೀಸಘಡದ ದುರ್ಗ್‌ಗೆ ತೆರಳುತ್ತಿದ್ದ ಗೊಂಡ್ವಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ರೈಲು ಗ್ವಾಲಿಯರ್ ರೈಲು ನಿಲ್ದಾಣ ಪ್ರವೇಶಕ್ಕೂ ಮೊದಲೇ ಈ ಘಟನೆ ನಡೆದಿದ್ದು, ಮಹಿಳೆ ದೂರಿಗೆ ಕ್ರಮ ಕೈಗೊಳ್ಳದ ಕಾರಣ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ.

ಮಹಿಳೆ ಹಾಗೂ ಆಕೆಯ ಮಗು 23ನೇ ಸಂಖ್ಯೆ ಸೀಟಿನಲ್ಲಿ ಮಲಗಿತ್ತು. ಇದು ತಳಭಾಗದ ಸೀಟಾಗಿತ್ತು. ಇದರ ಮೇಲಿನ ಅಂದರೆ ಅಪ್ಪರ್ ಸೀಟು 24ರಲ್ಲಿದ್ದ ಯೋಧ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮೇಲಿನಿಂದ ಕೆಳಕ್ಕೆ ಮೂತ್ರವಿರ್ಸಜನೆ ಮಾಡಿದ ಯೋಧ ದಪ್ಪನೆ ಮೇಲಿನಿಂದ ಮಹಿಳೆ ಮೇಲೆ ಬಿದ್ದಿದ್ದಾನೆ. ಯೋಧ ಬಿದ್ದ ರಭಸಕ್ಕೆ ಮಹಿಳೆ ಹಾಗೂ ಮಗು ಎಚ್ಚರಗೊಂಡಿದ್ದಾರೆ. ಇಷ್ಟೇ ಅಲ್ಲ ಮಹಿಳೆಗೆ ಸಣ್ಣ ಗಾಯವಾಗಿದೆ. 

ರೈಲಿನಲ್ಲಿ ಖುಲ್ಲಂ ಖುಲ್ಲಾ ಸೀನ್, ಜೋಡಿಯ ರೋಮ್ಯಾನ್ಸ್‌ಗೆ ಸುಸ್ತಾದ ಪ್ರಯಾಣಿಕರು!

ಚತ್ತೀಸಘಡ ಮೂಲದ ಮಹಿಳೆ ತಕ್ಷಣವೇ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅತ್ತ ಪತಿ ರೈಲ್ವೇ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರೆ. ಗ್ವಾಲಿಯರ್ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಆಗಮಿಸಿ ಫೋಟೋ ತೆಗೆದುಕೊಂಡಿದ್ದಾರೆ. ಕೆಲ ವಿಚಾರಣೆ ಬಳಿಕ ತೆರಳಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಯೋಧನ ಬೇರೆಗೆ ಸ್ಥಳಾಂತರಿಸುವ ಅಥಾವ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬೇಸತ್ತ ಮಹಿಳೆ ಹಾಗೂ ಆಕೆಯ ಪತಿ ಮತ್ತೆ ರೈಲು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಝಾನ್ಸಿ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸರು ಆಗಮಿಸಿ ಕ್ರಮದ ಭರವಸೆ ನೀಡಿದ್ದಾರೆ. ಆದರೆ ಇಡೀ ಪ್ರಯಾಣದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ದೂರಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳದ ಕಾರಣ ಮಹಿಳೆ ಹಾಗೂ ಆಕೆಯ ಪತಿ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ. ಇದೀಗ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಕುರಿತು ಮತ್ತೆ ಚರ್ಚೆಯಾಗುತ್ತಿದೆ. ಅದರಲ್ಲೂ ಯೋಧರೇ ಈ ರೀತಿ ವರ್ತಿಸಿದರೆ ಸಾಮಾನ್ಯರ ಗತಿಯೇನು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಎದ್ದಿದೆ.  ರೈಲು ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ.

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್; ಇನ್ಮುಂದೆ ವೈಟಿಂಗ್ ಲಿಸ್ಟ್‌ ಇಲ್ಲ, ದಟ್ಟಣೆಯೂ ಇರಲ್ಲ!
 

click me!