Latest Videos

ಯೋಗಾಭ್ಯಾಸ ಮಾಡಿ ಯುವಕರನ್ನೇ ನಾಚಿಸಿದ 127 ವರ್ಷದ ಗುರು ಸ್ವಾಮಿ ಶಿವಾನಂದ!

By Chethan KumarFirst Published Jun 16, 2024, 5:37 PM IST
Highlights

ಯೋಗ ಗುರು, ಪದ್ಮ ಪ್ರಶಸ್ತಿ ಪುರಸ್ಕೃತ ಸ್ವಾಮಿ ಶಿವಾನಂದ ತಮ್ಮ 127ನೇ ವಯಸ್ಸಿನಲ್ಲಿ ಯೋಗಭ್ಯಾಸ ಮಾಡಿ ಯುವಕರನ್ನೇ ನಾಚಿಸಿದ್ದಾರೆ. ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. 

ಮುಂಬೈ(ಜೂ.16)  ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ತಯಾರಿಗಳು ಆರಂಭಗೊಂಡಿದೆ. ಇದರ ಬೆನ್ನಲ್ಲೇ ಯೋಗ ಗುರು, ಸ್ವಾಮಿ ಶಿವಾನಂದ ತಮ್ಮ 127ರ ಹರೆಯದಲ್ಲಿ ಯೋಗಾಭ್ಯಾಸ ಮಾಡಿ ಯುವಕರನ್ನೇ ನಾಚಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ಸಂಚನಲ ಸೃಷ್ಟಿಸಿಯಾಗಿದೆ.  ಪದ್ಮ ಪ್ರಶಸ್ತಿ ಪುರಸ್ಕೃತ ಯೋಗ ಗುರು ಸ್ವಾಮಿ ಶಿವಾನಂದ ಇಳಿ ವಯಸ್ಸಿನಲ್ಲೂ ಅದೇ ಉತ್ಸಾಹ, ಅದೇ ಹರುಪಿನಲ್ಲಿ ಯೋಗಭ್ಯಾಸ ಮಾಡಿದ್ದಾರೆ. 

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗದಿನಾಚರಣೆ ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಯೋಗ ಗುರು, 127 ವರ್ಷಗ ಸ್ವಾಮಿ ಶಿವಾನಂದ ಆಗಮಿಸಿದ್ದರು. ವೇದಿಕೆಯಲ್ಲಿ ಯೋಗಾಭ್ಯಾಸ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. 

ಚಲಿಸುತ್ತಿರುವ ರೈಲಿನಲ್ಲಿ ಯೋಗ ದಿನಾಚರಣೆ,ರೀಲ್ ಸಾಹಸಕ್ಕೆ ವಿದ್ಯಾರ್ಥಿಗಳಿಬ್ಬರು ಅರೆಸ್ಟ್!

ಶಿವಾನಂದ ಸರಸ್ವತಿ ಗುರುಗಳಿಗೆ 2022ರಲ್ಲಿ ಪ್ರಧಾನಿ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಯೋಗ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಶ್ತಿ ನೀಡಲಾಗಿತ್ತು. ಪ್ರಶಸ್ತಿ ಸ್ವೀಕರಿಸುವ ವೇಳೆ ಯೋಗಗುರು ಶಿವಾನಂದ ಸರಸ್ವತಿ ರಾಷ್ಟ್ರಪತಿ, ಪ್ರಧಾನಿ ಮೋದಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪ್ರಶಸ್ತಿ ಸ್ವೀಕರಿಸಿದ್ದರು.  

 

| Mumbai: 127-year-old yoga guru, Padma Shri Swami Sivananda performs yoga at an event ahead of International Yoga Day on 21 June. pic.twitter.com/qKfoQflRgf

— ANI (@ANI)

 

ಯೋಗ ಪ್ರಪಂಚದಲ್ಲಿ ಪ್ರಸಿದ್ಧ ಹೆಸರು ಸ್ವಾಮಿ ಶಿವಾನಂದ ಸರಸ್ವತಿ ಅವರದು. 1887ರಲ್ಲಿ ದಕ್ಷಿಣ ಭಾರತದ ತಮಿಳುನಾಡಿನ ತಿನಲ್ವೇಲಿಯಲ್ಲಿ ಜನಿಸಿದ ಶಿವಾನಂದರು ಬ್ರಿಟಿಷ್‌ ಆಡಳಿತದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು, ತಮ್ಮ 40ನೇ ವಯಸ್ಸಿನಲ್ಲಿ ಎಲ್ಲವನ್ನು ತೊರೆದು ಯೋಗವನ್ನೇ ಬದುಕಾಗಿಸಿಕೊಂಡರು. 1936ರಲ್ಲಿ ಡಿವೈನ್‌ ಲೈಫ್‌ ಸೊಸೈಟಿಯನ್ನು ಸ್ಥಾಪಿಸಿದರು. ಇದು ಶಿವಾನಂದ ಆಶ್ರಮ ಎಂದು ಜನಪ್ರಿಯವಾಗಿದೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಸ್ತಾಪ ಮಂದಿಟ್ಟಿದ್ದರು. ಈ ವೇಳೆ 177 ದೇಶಗಳು ಮೋದಿಯನ್ನು ಬೆಂಬಲಿಸಿತ್ತು. ಜೂನ್ 21, 2015ರಲ್ಲಿ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. 2015ರಲ್ಲಿ ರಾಜಪಥದ ಮುಂಭಾಗದಲ್ಲಿ ಪ್ರಧಾನಿ ಮೋದಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೋದಿ ಸೇರಿದಂತೆ 84 ದೇಶಗಳ ಅತಿಥಿಗಳು ಸೇರಿದಂತೆ 35 ಸಾವಿರಕ್ಕೂ ಹೆಚ್ಚು ಮಂದಿ ಈ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಭಾರತ ಸೇರಿದಂತೆ ವಿವಧ ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗಿತ್ತು. ಬಳಿಕ ಪ್ರತಿ ವರ್ಷ ಜೂನ್ 21ರಂದು ಹಲವು ದೇಶಗಳು ಯೋಗ ದಿನಾಚರಣೆ ಆಚರಿಸುತ್ತಿದೆ.

ಗ್ಲಾಮರಸ್ ಯೋಗ ಭಂಗಿಯಲ್ಲಿ ಸ್ವೀಟಿ ರಾಧಿಕಾ: ಯೋಗದ ಕಿಚ್ಚು ಹೆಚ್ಚಿಸಿದ್ರು ಮಿಲ್ಕಿ ಬ್ಯೂಟಿ ಪ್ರಣಿತಾ!

click me!