ಒಡಿಶಾ(ಜೂ.06): ಪಾಕಿಸ್ತಾನ, ಚೀನಾ ಸೇರಿದಂತೆ ಭಾರತದ ಶತ್ರುಗಳಿಗೆ ನಡುಕ ಶುರುವಾಗಿದೆ. ಕಾರಣ ಭಾರತ ಅಗ್ನಿ4 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದೆ. ಭಾರತ ಈಗಾಗಲೇ ಹಲವು ಕ್ಷಿಪಣಿಗಳ ಪರೀಕ್ಷೆಯನ್ನು ನಡೆಸಿದೆ. ಆದರೆ ಈ ಬಾರಿ ಪರೀಕ್ಷಿಸಿದ ಅಗ್ನಿ 4 ನ್ಯೂಕ್ಲಿಯರ್ ಸಾಮರ್ಥ್ಯದ ಮಿಸೈಲ್ ಆಗಿದೆ. ಇಷ್ಟೇ ಅಲ್ಲ ಬರೋಬ್ಬರಿ 4,000 ಕಿಲೋಮೀಟರ್ ಗುರಿ ಸಾಮರ್ಥ್ಯ ಹೊಂದಿದೆ.
ಒಡಿಶಾದ ಎಪಿಜೆ ಅಬ್ಬುಲ್ ಕಲಾಂ ಕೇಂದ್ರದಿಂದ ಅಗ್ನಿ 4 ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಇಂದು ಸಂಜೆ 7.30ಕ್ಕೆ ಈ ಕ್ಷಿಪಣಿ ಪರೀಕ್ಷೆ ಮಾಡಲಾಯಿತು. ಡಿಫೆರನ್ಸ್ ರಿಚರ್ಸ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಜೇಶನ್(DRDO) ಅಭಿವೃದ್ಧಿಪಡಿಸಿದ ಈ ಕ್ಷಿಪಣಿ ಅತ್ಯಂತ ಸಾಮರ್ಥ್ಯದ ಮಿಸೈಲ್ ಆಗಿದೆ.
ನೌಕಾಸೇನೆ ಸೇವೆಯಿಂದ ನಿವೃತ್ತವಾದ ಹಡಗಿನಲ್ಲಿ ರಂಧ್ರ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿ!
DRDO ಅಗ್ನಿ ಸೀರಿಸ್‌ನಲ್ಲಿ ಅಭಿವೃದ್ಧಿ ಪಡಿಸಿದ ನಾಲ್ಕನೇ ಕ್ಷಿಪಣಿ ಇದಾಗಿದೆ. ಇದಕ್ಕೂ ಮೊದಲು ಆಗ್ನಿ 2 ಪ್ರೈಮ್ ಅಭಿವೃದ್ಧಿ ಮಾಡಿತ್ತು. ಅಗ್ನಿ 4 ಮಿಸೈಲ್‌ನಿಂದ ಭಾರತದ ರಕ್ಷಣಾ ಬಲ ಹೆಚ್ಚಾಗಿದೆ. ದೆಹಲಿಯಿಂದಲೇ ಕೂತು ಪಾಕಿಸ್ತಾನವನ್ನೇ ಸರ್ವನಾಶ ಮಾಡಲು ಸಾಧ್ಯವಿದೆ.
ಯುದ್ಧನೌಕೆ ಧ್ವಂಸ ಕ್ಷಿಪಣಿ ಪ್ರಯೋಗ ಯಶಸ್ವಿ
ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಹಡಗು ಧ್ವಂಸ (ಆ್ಯಂಟಿ-ಶಿಪ್) ನೌಕಾ ಕ್ಷಿಪಣಿಯು ತನ್ನ ಪರೀಕ್ಷಾರ್ಥ ಹಾರಾಟವನ್ನು ಬುಧವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಜಂಟಿಯಾಗಿ ಒಡಿಶಾದ ಚಂಡೀಪುರ ತೀರದಿಂದ ನೌಕಾ ಹೆಲಿಕಾಪ್ಟರ್ ಮೂಲಕ ಪರೀಕ್ಷಾರ್ಥವಾಗಿ ಕ್ಷಿಪಣಿಯನ್ನು ಉಡಾವಣೆ ಮಾಡಿತ್ತು. ಕ್ಷಿಪಣಿ ನಿಗದಿತ ಗುರಿಯನ್ನು ಯಶಸ್ವಿಯಾಗಿ ತಲುಪಿದೆ ಎಂದು ನೌಕಾಪಡೆ ತಿಳಿಸಿದೆ.
BrahMos missile ಇನ್ನಷ್ಟುದೂರ ಸಾಗಬಲ್ಲ ಬ್ರಹ್ಮೋಸ್ ಪರೀಕ್ಷೆ ಯಶಸ್ವಿ
ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಕ್ಷಿಪಣಿ ವ್ಯವಸ್ಥೆಗಳ ದೇಶೀಯ ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ಭಾರತವು ಉನ್ನತ ಮಟ್ಟದ ಸಾಮರ್ಥ್ಯ ಪಡೆದುಕೊಂಡಿದೆ. ಕ್ಷಿಪಣಿಯು ಭಾರತದ ನೌಕಾಪಡೆಗಳ ಆಕ್ರಮಣಕಾರಿ ಸಾಮರ್ಥ್ಯವನ್ನು ಇನ್ನಷ್ಟುಬಲಪಡಿಸುತ್ತದೆ’ ಎಂದು ಹೇಳಿದ್ದಾರೆ.
ವಿಶೇಷತೆ:
ಆ್ಯಂಟಿ ಶಿಪ್ ನೌಕಾ ಕ್ಷಿಪಣಿಯನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಹೆಲಿಕಾಪ್ಟರ್‌ಗಾಗಿ ಲಾಂಚರ್ ಸೇರಿದಂತೆ ಹಲವು ಹೊಸ ತಂತ್ರಜ್ಞಾನಗಳನ್ನು ಇದು ಒಳಗೊಂಡಿದೆ. ಕ್ಷಿಪಣಿ ಮಾರ್ಗದರ್ಶನ ವ್ಯವಸ್ಥೆಯು ಅತ್ಯಾಧುನಿಕ ಸಂಚಾಲನಾ ವ್ಯವಸ್ಥೆ ಮತ್ತು ಸಂಯೋಜಿತ ಏವಿಯಾನಿಕ್ಸ್ ವ್ಯವಸ್ಥೆಯನ್ನು ಹೊಂದಿದೆ.
ಭಾರತದ ಅಭಿವೃದ್ಧಿ ಪಡಿಸುತ್ತಿರುವ ಹಲವು ಕ್ಷಿಪಣಿಗಳನ್ನು ಈಗಾಗಲೇ ಗಡಿಯಲ್ಲಿ ನಿಯೋಜಿಸಿದೆ. ಭಾರತ ತನ್ನ ಬಳಿ ಇರುವ ಅತ್ಯಾಧುನಿಕ ಕ್ಷಿಪಣಿ ಹೊಡೆದುರುಳಿಸುವ ವ್ಯವಸ್ಥೆಗಳನ್ನು ಗಡಿಯಲ್ಲಿ ನಿಯೋಜನೆ ಮಾಡಿದೆ. ಕ್ಷಿಪಣಿ ದಾಳಿ ಮೂಲಕ ಭಾರತದ ಮೇಲೆ ಆಕ್ರಮಣ ಮಾಡುವ ದುಸ್ಸಾಹಕ್ಕೆ ಚೀನಾ ಇಳಿಯುವ ಸಾಧ್ಯತೆಗಳೂ ಇರುವ ಕಾರಣ, ನೆಲದಿಂದ ಆಗಸಕ್ಕೆ ಚಿಮ್ಮಿ ದಾಳಿಗೆ ಬರುವ ಕ್ಷಿಪಣಿಗಳನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ನಾಶಗೊಳಿಸುವ ವ್ಯವಸ್ಥೆಗಳನ್ನು ಭೂಸೇನೆ ಹಾಗೂ ವಾಯುಪಡೆಗಳೆರಡೂ ನಿಯೋಜಿಸಿವೆ. ಅತ್ಯಧಿಕ ಸಾಮರ್ಥ್ಯದ ಕ್ಷಿಪಣಿ ಹೊಡೆವ ವ್ಯವಸ್ಥೆ ಮಿತ್ರ ರಾಷ್ಟ್ರವೊಂದರಿಂದ ಭಾರತಕ್ಕೆ ಶೀಘ್ರದಲ್ಲೇ ಲಭ್ಯವಾಗಲಿದೆ. ಅದನ್ನೂ ಲಡಾಖ್ ವಲಯಕ್ಕೇ ನಿಯೋಜಿಸಿ, ಚೀನಾ ದಾಳಿಯನ್ನು ಎದುರಿಸಲು ಭಾರತ ಸಜ್ಜಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಗಡಿಯಲ್ಲಿ ಭಾರತೀಯ ಸೇನೆ ಸುಕೋಯ್ ಎಂಕೆಐಎಸ್, ಅಪಾಚೆ ಕಾಪ್ಟರ್, ಬೋಯಿಂಗ್ 47 ಚಿನೂಕ್ ಸೇರಿದಂತೆ ನಾನಾ ರೀತಿಯ ಯುದ್ಧ ವಿಮಾನ ಮತ್ತು ಕಾಪ್ಟರ್‌ಗಳನ್ನು ನಿಯೋಜಿಸಿದೆ.