Asianet Suvarna News Asianet Suvarna News

BrahMos missile ಇನ್ನಷ್ಟುದೂರ ಸಾಗಬಲ್ಲ ಬ್ರಹ್ಮೋಸ್‌ ಪರೀಕ್ಷೆ ಯಶಸ್ವಿ

-ವಿಸ್ತರಿತ ಕ್ಷಿಪಣಿ 350 ಕಿ.ಮೀ. ದೂರ ಸಾಮರ್ಥ್ಯ
- ಸುಖೋಯ್‌ ಯುದ್ಧವಿಮಾನದ ಮೇಲಿಂದ ಪರೀಕ್ಷೆ
- ಭಾರತದ ಪರೀಕ್ಷೆಯಿಂದ ಶತ್ರು ರಾಷ್ಟ್ರಗಳಿಗೆ ಆತಂಕ

India Air Force successfully fire extended range BrahMos supersonic cruise missile from  Sukhoi 30MKI fighter jet ckm
Author
Bengaluru, First Published May 13, 2022, 5:01 AM IST

ನವದೆಹಲಿ(ಮೇ.13): ಸುಖೋಯ್‌ ಯುದ್ಧವಿಮಾನದ ಮೇಲಿಂದ ಇನ್ನಷ್ಟುದೂರ ಸಾಗಬಲ್ಲ ವಿಸ್ತರಿತ ಬ್ರಹ್ಮೋಸ್‌ ಕ್ಷಿಪಣಿಯನ್ನು ಭಾರತ ಗುರುವಾರ ಯಶಸ್ವಿಯಾಗಿ ಪ್ರಯೋಗ ನಡೆಸಿದೆ. ಬ್ರಹ್ಮೋಸ್‌ ಮೂಲ ಕ್ಷಿಪಣಿ 290 ಕಿ.ಮೀ. ದೂರ ಸಾಗುತ್ತಿತ್ತು. ವಿಸ್ತರಿತ ಕ್ಷಿಪಣಿ 350 ಕಿ.ಮೀ. ದೂರ ಸಾಗುತ್ತದೆ.

ನೌಕಾಪಡೆಯಿಂದ ಬ್ರಹ್ಮೋಸ್‌ ಕ್ಷಿಪಣಿ ಪ್ರಯೋಗ ಯಶಸ್ವಿ
ಶಬ್ದಕ್ಕಿಂತ ವೇಗವಾಗಿ ನುಗ್ಗಿ ಶತ್ರುಪಡೆಗಳನ್ನು ಸದೆ ಬಡಿಯುವ, ವಿಶ್ವದ ಅತ್ಯಂತ ಅಪಾಯಕಾರಿ ಕ್ಷಿಪಣಿಗಳಲ್ಲಿ ಒಂದಾಗಿರುವ ಬ್ರಹ್ಮೋಸ್‌ ಕ್ಷಿಪಣಿಯ ದೀರ್ಘ ದೂರ ಕ್ರಮಿಸುವ ಆವೃತ್ತಿಯನ್ನು ಭಾರತೀಯ ನೌಕಾಪಡೆ ಶನಿವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.

ಯುದ್ಧದ ನಡುವೆ ಮಾರಕ ಕ್ಷಿಪಣಿ ಪ್ರಯೋಗಿಸಿದ ರಷ್ಯಾ, ಭೂಮಿಯ ಯಾವುದೇ ಭಾಗ ತಲುಪಬಲ್ಲ ಕ್ಷಿಪಣಿ!

ಬಂಗಾಳ ಕೊಲ್ಲಿಯಲ್ಲಿ ಯುದ್ಧನೌಕೆಯೊಂದರಿಂದ ಚಿಮ್ಮಿದ ಬ್ರಹ್ಮೋಸ್‌ ಕ್ಷಿಪಣಿ, ಶರವೇಗದಲ್ಲಿ ಅತ್ಯಂತ ನಿಖರವಾಗಿ ತನ್ನ ಗುರಿಯನ್ನು ಧ್ವಂಸಗೊಳಿಸಿದೆ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. ಈ ಪರೀಕ್ಷೆಯೊಂದಿಗೆ ಯುದ್ಧಸನ್ನದ್ಧತೆಯನ್ನು ಸಾಬೀತುಪಡಿಸಲಾಗಿದೆ. ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ ಎಂದು ನೌಕಾಪಡೆ ಟ್ವೀಟ್‌ ಮಾಡಿದೆ.

ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷೆಯನ್ನು ನೌಕಾಪಡೆ ಕಾಲಕಾಲಕ್ಕೆ ನಡೆಸುತ್ತದೆ. ಇದು ಶಬ್ದಕ್ಕಿಂತ ವೇಗವಾಗಿ ದಾಳಿ ಮಾಡುವ ಸೂಪರ್‌ಸಾನಿಕ್‌ ಕ್ಷಿಪಣಿಯಾಗಿದೆ. ವೇಗವಾಗಿ ಸಾಗುವ ಕಾರಣ ಕ್ಷಿಪಣಿಗಳಿಂದ ಪ್ರತಿದಾಳಿ ನಡೆಸಿ ಇದನ್ನು ಹೊಡೆದುರುಳಿಸುವುದು ಬಹಳ ಕಷ್ಟ.2006ರಲ್ಲೇ ಬ್ರಹ್ಮೋಸ್‌ ಕ್ಷಿಪಣಿಯನ್ನು ನೌಕಾಪಡೆ ಹಾಗೂ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಯುದ್ಧ ನೌಕೆಗಳಲ್ಲಿ ಬಳಸುವ ಕ್ಷಿಪಣಿಗಳಿಗಿಂತ ಯುದ್ಧ ವಿಮಾನಗಳಿಂದ ಪ್ರಯೋಗಿಸುವ ಕ್ಷಿಪಣಿ ತೀವ್ರ ವೇಗ ಹೊಂದಿರುತ್ತದೆ.

ನೌಕಾಸೇನೆ ಸೇವೆಯಿಂದ ನಿವೃತ್ತವಾದ ಹಡಗಿನಲ್ಲಿ ರಂಧ್ರ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿ!

ನೌಕಾ ಮಾದರಿ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ ಯಶಸ್ವಿ
ಅತ್ಯಾಧುನಿಕ ಸೂಪರ್‌ಸಾನಿಕ್‌ ಬ್ರಹ್ಮೋಸ್‌ ನೌಕಾ ಮಾದರಿಯ ಕ್ಷಿಪಣಿ ಪರೀಕ್ಷೆಯನ್ನು ಮಂಗಳವಾರ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಇದನ್ನು ಐಎನ್‌ಎಸ್‌ ವಿಶಾಖಪಟ್ಟಣದದಿಂದ ಪರೀಕ್ಷಿಸಲಾಗಿದೆ. ಕ್ಷಿಪಣಿಯು ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ಡಿಆರ್‌ಡಿಒ ತಿಳಿಸಿದೆ. ಕ್ಷಿಪಣಿಯ ಯಶಸ್ವಿ ಉಡಾವಣೆಯು ಭಾರತೀಯ ನೌಕಾಪಡೆಯ ಸನ್ನದ್ಧ ಸ್ಥಿತಿಯನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದು, ಭಾರತೀಯ ನೌಕಾಪಡೆಗೆ ಅಭಿನಂದನೆ ತಿಳಿಸಿದ್ದಾರೆ. ಭಾರತ ಮತ್ತು ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಈ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಯನ್ನು ತಯಾರಿಸುತ್ತಿವೆ. ಈ ಕ್ಷಿಪಣಿಗಳು ಶಬ್ಧಕ್ಕಿಂತ 3 ಪಟ್ಟು ಹೆಚ್ಚು ವೇಗವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿವೆ.

ರಹ್ಮೋಸ್‌ ವಾಯುಕ್ಷಿಪಣಿ ಪರೀಕ್ಷೆ ಯಶಸ್ವಿ
ಸ್ವದೇಶಿ ನಿರ್ಮಿತ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯ ವಾಯು ಆವೃತ್ತಿಯ ಪರೀಕ್ಷೆ ಗುರುವಾರ ಯಶಸ್ವಿಯಾಗಿದೆ. ಸುಖೋಯ್‌ 30 ಎಂ.ಕೆ-1 ಯುದ್ಧ ವಿಮಾನದ ಮೂಲಕ ಒಡಿಶಾದ ಚಾಂಡಿಪುರ ಕಡಲತೀರದಲ್ಲಿ ಈ ಪರೀಕ್ಷೆ ನಡೆಸಲಾಗಿದೆ.

ಸುಖೋಯ್‌ ವಿಮಾನದಿಂದ ಹಾರಿದ ಕ್ಷಿಪಣಿ ನಿಗದಿತ ಗುರಿ ತಲುಪಲು ಯಶಸ್ವಿಯಾಗಿದೆ. ಈ ಕ್ಷಿಪಣಿಯ ಯಶಸ್ವಿ ಉಡಾವಣೆಯಿಂದ ದೊರೆತ ಯಶಸ್ಸು ಇತರ ಆವೃತ್ತಿಯ ಕ್ಷಿಪಣಿಗಳ ಉತ್ಪಾದನೆಗೆ ಹಾದಿ ಸುಗಮವಾಗಿದೆ. ಇದು ಸಂಪೂರ್ಣವಾಗಿ ಭಾರತದ ಕಾರ್ಖಾನೆಗಳಲ್ಲಿ ತಯಾರಾದ ಕ್ಷಿಪಣಿ ಎಂದು ಡಿಆರ್‌ಡಿಒ ಹೇಳಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಡಿಆರ್‌ಡಿಒ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

Follow Us:
Download App:
  • android
  • ios