
ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ದೇಶದ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾಗುವ ದೇಶದ ಅತ್ಯಂತ ದೊಡ್ಡ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಾಳಯ ಜಯಭೇರಿ ಸಾಧಿಸಿದ್ದು ಗೊತ್ತೆ ಇದೆ. ಆದರೆ ಈ ಉತ್ತರ ಪ್ರದೇಶ ಚುನಾವಣೆಯಲ್ಲಿ ಹಲವು ಕುತೂಹಲಕಾರಿ ಘಟನೆಗಳು ನಡೆದಿವೆ. ಅದರ ವಿವರ ಇಲ್ಲಿದೆ ನೋಡಿ...
ಉತ್ತರಪ್ರದೇಶ (Uttara Pradesh) ವಿಧಾನಸಭಾ ಚುನಾವಣೆಯಲ್ಲಿ (Assembly Election) ಕಾಂಗ್ರೆಸ್ (Congress) ಮತ್ತು ಮಾಯಾವತಿ (Mayawati) ನೇತೃತ್ವದ ಬಹುಜನ ಸಮಾಜವಾದಿ (Bahuja Samajavadi Party) ಪಕ್ಷಕ್ಕೆ ಉತ್ತರಪ್ರದೇಶ ಮತದಾರರು (Voters) ಶಾಕ್ ಕೊಟ್ಟಿದ್ದಾರೆ. ಕಾಂಗ್ರೆಸ್ ಮತ್ತು ಬಿಎಸ್‌ಪಿಗೆ ಠೇವಣಿ ಸಹ ಪಡೆಯಲಾಗದಷ್ಟು ಮುಖಭಂಗ ಇಲ್ಲಾಗಿದೆ. ಇಲ್ಲಿ ಸೋಲಿಗಿಂತ ಠೇವಣಿ ಕಳೆದುಕೊಂಡವರೇ ಜಾಸ್ತಿ ಇದ್ದಾರೆ. ಕಾಂಗ್ರೆಸ್ ಅಂತು ಕೇವಲ ಎರಡು ಸೀಟುಗಳಲ್ಲಿ ಗೆದ್ದಿದ್ದು ಕಾಂಗ್ರೆಸ್‌ನ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
Election Result ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾತ್ ರಾಜೀನಾಮೆ!
399 ಕ್ಷೇತ್ರದಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಬಹುತೇಕ 387 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದೆ. ಅಂದರೆ ಶೇ. 97 ರಷ್ಟು ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಹಾಗೆಯೇ ಬಿಎಸ್‌ಪಿಯ ಶೇ. 72ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷ ಒಟ್ಟು ಮತ ಗಳಿಕೆಯಲ್ಲಿ ಆರ್‌ಎಲ್‌ಡಿ ಗಿಂತಲೂ ಕಡಿಮೆ ಮತ ಪಡೆದಿದೆ.
ಕಾಂಗ್ರೆಸ್ ಸರಾಸರಿ ಶೇ 2.4 ಮತ ಪಡೆದಿದ್ದರೆ, ಆರ್‌ಎಲ್‌ಡಿ (RLD) 33 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶೇ 2.6 ರಷ್ಟು ಮತ ಪಡೆದಿದೆ. ಬಿಎಸ್‌ಪಿ 403 ಕ್ಷೇತ್ರಗಳಲ್ಲಿ ಸ್ಪರ್ಧಿಸಿ , 290 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದು ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ದಾಖಲಿಸಿದೆ. ಹಾಗೆಯೇ ಬಿಜೆಪಿ 376 ರಲ್ಲಿ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೂರರಲ್ಲಿ ಠೇವಣಿ ಕಳೆದುಕೊಂಡಿದೆ. 347 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಖಿಲೇಶ್ (Akhilesh) ನೇತೃತ್ವದ ಸಮಾಜವಾದಿ ಪಕ್ಷ (samajawadi Party) 6 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದೆ. ನೊಂದಾಯಿತ ಪಕ್ಷಗಳಿಂದ ಒಟ್ಟು 1610 ಅಭ್ಯರ್ಥಿಗಳಲ್ಲಿ 697 ಜನ ಠೇವಣಿ ಕಳೆದಕೊಂಡರೆ ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿಗಳು ಸೇರಿ ಸ್ಪರ್ಧಿಸಿದ್ದ ಒಟ್ಟು 4,442 ಅಭ್ಯರ್ಥಿಗಳ ಪೈಕಿ, 3,522 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
Yogi Adityanath Swearing: ಹೋಳಿಗೂ ಮೊದಲೇ ಯೋಗಿ ಪ್ರಮಾಣ ವಚನ: ಪ್ರಧಾನಿ ಮೋದಿ, ಬಿಜೆಪಿ ಸಿಎಂಗಳಿಗೆ ಆಹ್ವಾನ?
ಇತ್ತ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಸತತ 2ನೇ ಬಾರಿ ಗದ್ದುಗೆ ಏರಲು ತಯಾರಿ ನಡೆಸುತ್ತಿದೆ. 255 ಸ್ಥಾನಗಳನ್ನು ಗೆದ್ದ ಬಿಜೆಪಿ ಹೊಸ ಇತಿಹಾಸ ರಚಿಸಿದೆ. ರಾಜಭವನದಲ್ಲಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭೇಟಿ ಮಾಡಿದ ಯೋಗಿ ಆದಿತ್ಯಾಥ್, ನಿನ್ನೆ ರಾಜೀನಾಮೆ ಪತ್ರ ನೀಡಿದ್ದಾರೆ. ಮೊದಲ ಅವಧಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ, ಈಗ ಹೊಸ ಸಂಪುಟ ರಚಿಸಲಿದ್ದಾರೆ. ಮಾ.18ರ ಹೋಳಿ ಹುಣ್ಣಿಮೆಗೂ ಮೊದಲೇ ಹೊಸ ಸರ್ಕಾರ ರಚಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ಮಾ.14 ಅಥವಾ 15ರಂದು ಲಖನೌದಲ್ಲಿ ದಾಖಲೆಯ ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
7 ಹಂತಗಳಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟ 273 ಸ್ಥಾನಗಳನ್ನು ಗೆದ್ದುಕೊಂಡಿದೆ. ಉತ್ತರಪ್ರದೇಶದಲ್ಲಿ ಸರ್ಕಾರವೊಂದು ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು 37 ವರ್ಷಗಳ ಬಳಿಕ, ಮುಖ್ಯಮಂತ್ರಿಯೊಬ್ಬರು 5 ವರ್ಷ ಪೂರ್ಣಗೊಳಿಸಿ ಮರಳಿ ಅಧಿಕಾರಕ್ಕೆ ಬಂದಿದ್ದು ಇದೇ ಮೊದಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ