ಭಾರತದ ಪ್ರಸ್ತುತ ಇರುವ ಕಾನೂನಿನಡಿ ಶವದೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯೂ ಅಪರಾಧವಲ್ಲ ಎಂದು ಹೇಳುವ ಮೂಲಕ ಛತ್ತೀಸ್‌ಗಢದ ಹೈಕೋರ್ಟ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದೆ.
ಭಾರತದ ಪ್ರಸ್ತುತ ಇರುವ ಕಾನೂನಿನಡಿ ಶವದೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯೂ ಅಪರಾಧವಲ್ಲ ಎಂದು ಹೇಳುವ ಮೂಲಕ ಛತ್ತೀಸ್‌ಗಢದ ಹೈಕೋರ್ಟ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದೆ. 9 ವರ್ಷದ ಬಾಲಕಿಯ ಕೊಲೆಗೈದು ಶವದ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಿದ್ದು, ಬಾಲಕಿಯ ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ.
ಭಾರತದಲ್ಲಿ ಶವದೊಂದಿಗಿನ ಲೈಂಗಿಕ ಕ್ರಿಯೆಗೆ ಶಿಕ್ಷೆಯಿಲ್ಲ ಎಂದು ಹೇಳುವ ಮೂಲಕ ಆರೋಪಿಯನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದೆ. ಆದರೆ ಆತನ ವಿರುದ್ಧ ಇರುವ ಇನ್ನು ಕೆಎಲವು ಗಂಭೀರ ಪ್ರಕರಣಗಳಲ್ಲಿ ಆತ ದೋಷಿಯಾಗಿದ್ದಾನೆ. ಛತ್ತೀಸ್‌ಗಢದ ಗರಿಯಬಾಂದ್ ಜಿಲ್ಲೆಯಲ್ಲಿ 2018ರಲ್ಲಿ ಇಂತಹ ಘಟನೆಯೊಂದು ನಡೆದಿತ್ತು. ಬಾಲಕಿಯ ಕೊಲೆಯಾದ ನಂತರ ಆರೋಪಿ ಬಾಲಕಿಯ ಶವದ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.
undefined
2018ರ ಡಿಸೆಂಬರ್ 18 ರಂದು 9 ವರ್ಷದ ಬಾಲಕಿಯ ಶವ ಗರಿಯಾಬಾದ್‌ನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಪೊಲೀಸ್ ವಿಚಾರಣೆ ವೇಳೆ ಈ ಪ್ರಕರಣದ ಪ್ರಮುಖ ಆರೋಪಿ ನಿತಿನ್ ಯಾದವ್, ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಹಾಗೆಯೇ ಸಹ ಆರೋಪಿ ನೀಲ್‌ಕಾಂತ್ ನಾಗೇಶ್ ಬಾಲಕಿಯ ಕೊಲೆಯಾದ ನಂತರ ಆಕೆಯ ಶವದ ಮೇಲೆ ಅತ್ಯಾಚಾರವೆಸಗಿದ್ದಾಗಿ ಒಪ್ಪಿಕೊಂಡಿದ್ದ. ಹೀಗಾಗಿ ವಿಚಾರಣಾ ನ್ಯಾಯಾಲಯ ಪ್ರಮುಖ ಆರೋಪಿ ನಿತಿನ್ ಯಾದವ್‌ಗೆ ಕೊಲೆ ಹಾಗೂ ಇತರ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹಾಗೂ ಸಹ ಆರೋಪಿ ನೀಲ್‌ಕಾಂತ್ ನಾಗೇಶ್‌ಗೆ 7 ಸಾಕ್ಷ್ಯ ನಾಶ ಮಾಡಿದ ಆರೋಪದಡಿ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಸಂತ್ರಸ್ತೆಯ ತಾಯಿ ಈ ವಿಚಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.
ಆದರೆ ಹೈಕೋರ್ಟ್ ಸ್ಥಳೀಯ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಎತ್ತಿ ಹಿಡಿದಿದ್ದು, ತಾಯಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. ಈ ವೇಳೆ ಹೈಕೋರ್ಟ್ ನ್ಯಾಯಾಧೀಶರು, ಪ್ರಸ್ತುತ ಇರುವ ಭಾರತೀಯ ನ್ಯಾಯ ಕಾಯ್ದೆಯ ಪ್ರಕಾರ, ಭಾರತದಲ್ಲಿ ಶವದ ಮೇಲಿನ ಅತ್ಯಾಚಾರವನ್ನು ಅಪರಾಧ ಎಂದು ಪರಿಣಗಣಿಸಲಾಗುವುದಿಲ್ಲ ಎಂದು ತೀರ್ಪು ನೀಡಿದ್ದಾರೆ. ಛತ್ತೀಸ್‌ಗಢ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ರಮೇಶ್ ಸಿನ್ಹಾ ಮತ್ತೊಬ್ಬ ನ್ಯಾಯಮೂರ್ತಿ ಬಿಡಿ ಗುರು, ಭಾರತದಲ್ಲಿ ನೆಕ್ರೋಫಿಲಿಯಾಕ್ಕೆ(ಶವದೊಂದಿಗೆ ಲೈಂಗಿಕ ಕ್ರಿಯೆ) ಸಂಬಂಧಿಸಿದಂತೆ ಯಾವುದೇ ಕಾನೂನಿಲ್ಲ ಎಂದು ಸ್ಪಷ್ಟಪಡಿಸಿದರು.
ನೆಕ್ರೋಫಿಲಿಯಾ ಎಂದರೆ ಕೇಂಬ್ರಿಡ್ಜ್ ಶಬ್ದಕೋಶದ ಪ್ರಕಾರ ಇದೊಂದು ಮಾನಸಿಕ ಅಸ್ವಸ್ಥತೆಯಾಗಿದ್ದು, ಶವದ ಮೇಲೆ ಲೈಂಗಿಕವಾಗಿ ಆಸಕ್ತರಾಗುವುದು ಹಾಗೂ ಲೈಂಗಿಕ ಕ್ರಿಯೆ ನಡೆಸುವುದಾಗಿದೆ. ಜಾಗತಿಕವಾಗಿ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಇಂತಹ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2023ರಲ್ಲಿ ಕರ್ನಾಟಕ ಹೈಕೋರ್ಟ್, ' ಸತ್ತವರ ಕಡೆಗೆ ವಿಚಿತ್ರ ಮತ್ತು ಅಸ್ವಾಭಾವಿಕ ಆಕರ್ಷಣೆ' ಎಂದು ವಿಶ್ಲೇಷಿಸಿತ್ತು. ಈ ಪ್ರಕರಣದ ನಂತರ, ನೆಕ್ರೋಫಿಲಿಯಾವನ್ನು ಅಪರಾಧೀಕರಿಸಲು ಮತ್ತು ಅದರ ವಿರುದ್ಧ ಕಠಿಣ ಕಾನೂನನ್ನು ಸ್ಥಾಪಿಸಲು ದೇಶದೆಲ್ಲೆಡೆಯಿಂದ ಸಾಮಾಜಿಕ ಹೋರಾಟಗಾರರಿಂದ ಆಗ್ರಹವಿದೆ. ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಗಂಭೀರ ಸಮಸ್ಯೆಯೂ ಕಾನೂನು ಮಾನ್ಯತೆಯ ಕೊರತೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ಗಮನಾರ್ಹ ವೈಫಲ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.