ಬೈಬಲ್ ವಿದ್ಯಾರ್ಥಿ ಚಳವಳಿಯ ಭಾಗವಾಗಿ 1870ರಲ್ಲಿ ಅಮೆರಿಕದಲ್ಲಿ ಟಿಸಿಲೊಡೆದ ಸಂಘಟನೆಯೇ ಜೆಹೊವ್ಹಾಸ್ ವಿಟ್ನೆಸ್ಸೆಸ್?
ಕೊಚ್ಚಿ: ಕೇರಳದ ಪ್ರಮುಖ ಬಂದರು ನಗರಿ ಕೊಚ್ಚಿ ಸಮೀಪದ ಕಲಮಶ್ಶೇರಿ ಎಂಬಲ್ಲಿ ನಿನ್ನೆ ನಡೆದ ಕ್ರೈಸ್ತ ಧರ್ಮದ ಒಳಪಂಗಡವೊಂದರ ಧಾರ್ಮಿಕ ಸಮಾರಂಭದಲ್ಲಿ ಟಿಫಿನ್ ಬಾಕ್ಸ್‌ನಲ್ಲಿ ಇಡಲಾಗಿದ್ದ ರಿಮೋಟ್ ನಿಯಂತ್ರಿತ ಬಾಂಬ್ ಸ್ಫೋಟಗೊಂಡು, ಇಬ್ಬರು ಸಾವನ್ನಪ್ಪಿ 52 ಮಂದಿ ಗಾಯಗೊಂಡಿದ್ದರು. ಈ ಘಟನೆ ಕೇರಳದಾದ್ಯಂತ ಆಘಾತವನ್ನು ಉಂಟುಮಾಡಿದೆ. ಅಲ್ಲದೆ, ಭಾರತದ ಮುಖ್ಯ ಭೂಮಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಮೊದಲ ಬಾಂಬ್ ಸ್ಫೋಟ ಇದಾಗಿದ್ದು, ದೇಶದಲ್ಲಿ ಸಂಚಲನ ಮೂಡಿಸಿದೆ.
ಯಾವುದಿದು ಜೆಹೊವ್ಹಾಸ್ ವಿಟ್ನೆಸ್ಸೆಸ್?
ಬೈಬಲ್ ವಿದ್ಯಾರ್ಥಿ ಚಳವಳಿಯ ಭಾಗವಾಗಿ 1870ರಲ್ಲಿ ಅಮೆರಿಕದಲ್ಲಿ ಟಿಸಿಲೊಡೆದ ಸಂಘಟನೆ. ಚಾರ್ಲ್ಸ್ ಟೇಜ್ ರಸ್ಸೆಲ್ ಅವರು ಸಂಸ್ಥಾಪಕರು. ರಸ್ಸೆಲ್ ಹಾಗೂ ಅವರ ಅನುಯಾಯಿಗಳು ವಿಚಿತ್ರ ಆಚರಣೆಗಳನ್ನು ರೂಢಿಸಿಕೊಂಡರು. 1916ರಲ್ಲಿ ರಸ್ಸೆಲ್ ಕಾಲಾನಂತರ ಜೋಸೆಫ್ ಫ್ರಾಂಕ್ಲಿನ್ ರುದರ್‌ಫೋರ್ಡ್ ಅವರು ಈ ಸಂಘಟನೆಯ ಮುಖ್ಯಸ್ಥರಾದರು. 1931ರಲ್ಲಿ ಜೆಹೋವ್ಹಾಸ್ ವಿಟ್ನೆಸ್ಸೆಸ್ ಎಂಬ ಹೆಸರನ್ನು ಅಂಗೀಕರಿಸಿದರು. ರುದರ್‌ಫೋರ್ಡ್ ನಾಯಕತ್ವದಲ್ಲಿ ಸಂಘಟನೆ ಕ್ಷಿಪ್ರ ಪ್ರಗತಿಯನ್ನು ಕಂಡಿತು. ನ್ಯೂಯಾರ್ಕ್‌ನ ವಾರ್‌ವಿಕ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಘಟನೆಯಲ್ಲಿ ವಿಶ್ವಾದ್ಯಂತ ಅಂದಾಜು 85 ಲಕ್ಷ ಸದಸ್ಯರಿದ್ದಾರೆ.
ಕೇರಳ ಬಾಂಬ್ ಸ್ಫೋಟದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆ, ಐವರ ಸ್ಥಿತಿ ಚಿಂತಾಜನಕ!
ಕ್ರೈಸ್ತರಿಗಿಂತ ಹೇಗೆ ಭಿನ್ನ?
ಸ್ಫೋಟದ ಬೆನ್ನಲ್ಲೇ ಮಧ್ಯಾಹ್ನ ಡೊಮಿನಿಕ್ ಮಾರ್ಟಿನ್ (Dominic Martin) ಎಂಬ ವ್ಯಕ್ತಿ ತ್ರಿಶ್ಶೂರು ಜಿಲ್ಲೆಯ ಕೊಡಕ್ಕರ ಪೊಲೀಸ್ ಠಾಣೆಗೆ (Kodakkara police station) ಶರಣಾಗಿದ್ದು, ದಾಳಿಯನ್ನು ಮಾಡಿದವ ತಾನೇ ಎಂದು ಹೇಳಿಕೊಂಡಿದ್ದಾನೆ. ವಿಚಿತ್ರವೆಂದರೆ. ಬಾಂಬ್ ಸ್ಫೋಟಗೊಂಡಿದ್ದು ‘ಜೆಹೋವಾಸ್ ವಿಟ್ನೆಸಿಸ್’ (Jehovas Witnesses)ಎಂಬ ಕ್ರೈಸ್ತ ಧರ್ಮದ ಒಳಪಂಗಡವೊಂದರ (ಪಂಥ) ಧಾರ್ಮಿಕ ಸಮಾರಂಭದಲ್ಲಿ ಹಾಗೂ ಬಾಂಬ್ ಸ್ಫೋಟ ಮಾಡಿದ್ದೂ ಕೂಡ ಇದೇ ಪಂಥದ ವ್ಯಕ್ತಿ.
ಕೇರಳ ಸ್ಫೋಟದ ಹೊಣೆಹೊತ್ತು ಪೊಲೀಸರಿಗೆ ಶರಣಾದ ಶಂಕಿತ, ಪ್ರಕರಣಕ್ಕೆ ಟ್ವಿಸ್ಟ್!
ಈತ ಪೊಲೀಸರಿಗೆ ಶರಣಾಗುವ ಮುನ್ನ ಫೇಸ್‌ಬುಕ್‌ನಲ್ಲಿ ತಾನು ಬಾಂಬ್ ಸ್ಫೋಟಿಸಿದ್ದಕ್ಕೆ ಕಾರಣ ನೀಡಿದ್ದು, ‘ಈ ಸಂಘಟನೆ ದೇಶವಿರೋಧಿ ಚಿಂತನೆಗಳನ್ನು ಸಾರುತ್ತಿತ್ತು. ಹೀಗಾಗಿ ಅದನ್ನು ವಿರೋಧಿಸಿ ನಾನು ದಾಳಿ ಮಾಡಿದೆ’ ಎಂದಿದ್ದಾನೆ. ಆದರೆ ‘ದಾಳಿಕೋರ ನಮ್ಮ ಸಂಘಟನೆಯ ವ್ಯಕ್ತಿಯಲ್ಲ’ ಎಂದು ಜೆಹೋವಾಸ್ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಮಾರ್ಟಿನ್ ತನ್ನ ಫೋನ್‌ನಲ್ಲಿನ ರಿಮೋಟ್ ಕಂಟ್ರೋಲ್ ಬಳಸಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಿ ತಯಾರಿಸಲಾಗಿದ್ದ ಬಾಂಬ್ ಸ್ಫೋಟಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಭಾರತದಿಂದ ಇಂಗ್ಲೆಂಡ್‌ಗಿತ್ತು ಲಕ್ಸುರಿ ಬಸ್ : 1970ರವರೆಗೂ ಇದ್ದ ಈ ಬಸ್ ಸೇವೆ ಬಗ್ಗೆ ಇಲ್ಲಿದೆ ಡಿಟೇಲ್ಸ್
ಪಂಥದಿಂದ ದೇಶ ವಿರೋಧಿ ಬೋಧನೆ- ಮಾರ್ಟಿನ್:
ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿರುವ ದಾಳಿಕೋರ ಮಾರ್ಟಿನ್, ‘ಕಳೆದ 16 ವರ್ಷದಿಂದ ನಾನು ಈ ಸಂಘಟನೆಯ ಸದಸ್ಯನಾಗಿದ್ದೆ. ಆದರೆ 6 ವರ್ಷದಿಂದ ಈ ಸಂಘಟನೆಯ ಚಿಂತನೆಗಳು ಬದಲಾಗಿದ್ದವು. ರಾಷ್ಟ್ರಗೀತೆಗಳನ್ನು ಹಾಡದಂತೆ ಜೆಹೋವಾಸ್ ಪಂಥೀಯರಿಗೆ ಬೋಧನೆ ಮಾಡಲಾಗಿತ್ತು. ಅಲ್ಲದೆ 4 ವರ್ಷದ ಮಗವಿಗೆ ಕೂಡ ‘ಇನ್ನೊಬ್ಬ ಮಗುವೊಂದಿಗೆ ಚಾಕೋಲೇಟ್ ಹಂಚಿಕೊಳ್ಳಬೇಡ’ ಎಂದು ಬೋಧಿಸಿ ಮಕ್ಕಳ ನಡುವೆಯೇ ದ್ವೇಷ ಹರಡಿಸಲಾಗುತ್ತಿತ್ತು. ಕೇರಳದಲ್ಲಿ ನೈಸರ್ಗಿಕ ವಿಕೋಪದ ವೇಳೆ ಎಲ್ಲರಿಗೂ ಸಹಾಯ ಮಾಡದೇ ಜೆಹೋವಾ ಪಂಥದ ಮನೆಗಳಿಗೆ ಮಾತ್ರ ಸಂಘಟನೆಯವರು ಸಹಾಯ ಮಾಡಿದರು. ಇದರಿಂದ ಕ್ರುದ್ಧನಾಗಿ ನಾನು ಅಂದಿನಿಂದಲೇ ಇಂಥ ದೇಶದ್ರೋಹಿ ಹಾಗೂ ದ್ವೇಷಕಾರಕ ಬೋಧನೆಗಳನ್ನು ಕೈಬಿಡಿ ಎಂದು ಒತ್ತಾಯಿಸುತ್ತಿದ್ದೆ. ನನ್ನ ಮಾತಿಗೆ ಅವರು ಕಿವಿಗೊಡಲಿಲ್ಲ. ಹೀಗಾಗಿ ನಾನು ಬಾಂಬ್ ಸ್ಫೋಟಿಸಿದೆ ಎಂದಿದ್ದಾನೆ.
ಬಾಂಬ್ ಸಿಡಿದಿದ್ದು ಹೇಗೆ?:
ಜೆಹೋವಾಸ್ ವಿಟ್ನೆಸಿಸ್ 19ನೇ ಶತಮಾನದಲ್ಲಿ ಅಮೆರಿಕದಲ್ಲಿ ಹುಟ್ಟಿಕೊಂಡ ಕ್ರಿಶ್ಚಿಯನ್ ಧಾರ್ಮಿಕ ಒಳಪಂಗಡವಾಗಿದೆ. ಕೇರಳದ ಕೊಚ್ಚಿ ಸನಿಹದ ಕಲಮಶ್ಶೇರಿ ಎಂಬಲ್ಲಿನ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಜೆಹೋವಾಸ್ ವಿಟ್ನೆಸಿಸ್, 3 ದಿನಗಳ ಪ್ರಾರ್ಥನಾ ಸಭೆ ಹಮ್ಮಿಕೊಂಡಿತ್ತು. ಭಾನುವಾರ ಅದರ ಮುಕ್ತಾಯ ಸಮಾರಂಭವಿತ್ತು. ಮುಕ್ತಾಯದ ದಿನದಂದು 2500ಕ್ಕೂ ಹೆಚ್ಚು ಜೆಯೋವಾಸ್ ಅನುಯಾಯಿಗಳು ಸೇರಿದ್ದರು. ಈ ವೇಳೆ ಸಭಾ ಸ್ಥಳದಲ್ಲಿ ಬೆಳಗ್ಗೆ 9.40ಕ್ಕೆ ಬಾಂಬ್ ಸ್ಫೋಟ ಸಂಭವಿಸಿದ್ದು, ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದಾರೆ. ಪೊಲೀಸ್ ಮೂಲವೊಂದು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿ, 3 ಸ್ಫೋಟಗಳು ಸಂಭವಿಸಿವೆ, ಅದರಲ್ಲಿ 2 ಬಲವಾದವು ಮತ್ತು ಮೂರನೆಯದು ಕಡಿಮೆ ತೀವ್ರತೆ ಹೊಂದಿದೆ ಎಂದಿದೆ.
ಸ್ಫೋಟದ ಸ್ಥಳವನ್ನು ಎನ್‌ಐಎ ಹಾಗೂ ರಾಜ್ಯ ಭಯೋತ್ಪಾದನಾ ನಿಗ್ರಹ ದಳ ಸೇರಿದಂತೆ ಹಲವು ಏಜೆನ್ಸಿಗಳು ಪರಿಶೀಲಿಸುತ್ತಿವೆ. ಇದನ್ನು ಈಗಲೇ ಭಯೋತ್ಪಾದಕ ಕೃತ್ಯ ಎನ್ನಲಾಗದು. ಹೆಚ್ಚಿನ ತನಿಖೆ ನಂತರ ಸ್ಪಷ್ಟ ಮಾಹಿತಿ ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆಗೆ ಎಸ್ಐಟಿ (ವಿಶೇಷ ತನಿಖಾ ತಂಡ) ರಚಿಸಲಾಗುವುದು ಎಂದೂ ಹೇಳಿದ್ದಾರೆ. ಜನರು ಗಾಳಿ ಸುದ್ದಿಗೆ ಕಿವಿಗೊಡದೆ ಶಾಂತವಾಗಿರಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಅಥವಾ ದ್ವೇಷಪೂರಿತ ಸಂದೇಶಗಳನ್ನು ಹರಡಬಾರದು. ಹರಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಹನೆಯ ತರಬೇತಿ ನೀಡುತ್ತಿದ್ದ ಸಮಾವೇಶದಲ್ಲಿ ಬಾಂಬ್ ಸ್ಫೋಟ
ಕೊಚ್ಚಿ: ಸಹನೆಯನ್ನು ಗಳಿಸಿಕೊಳ್ಳುವುದರ ಕುರಿತಾಗಿ ಕೇರಳದಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿಯೇ ಬಾಂಬ್ ಸ್ಫೋಟ (Kalamasheri blast) ಸಂಭವಿಸಿದೆ. ಸಹನೆಯ ಕುರಿತಾಗಿ ತರಬೇತಿ ನೀಡಲು ಕಲಮಶ್ಶೇರಿಯಲ್ಲಿ 3 ದಿನಗಳ ಅಂತಾರಾಷ್ಟ್ರೀಯ ಕ್ರಿಶ್ಚಿಯನ್ ವಿಚಾರ ಸಂಕಿರಣವನ್ನು (international Christian seminar) ಹಮ್ಮಿಕೊಳ್ಳಲಾಗಿತ್ತು. ಈ ವಿಚಾರ ಸಂಕಿರಣವನ್ನು ಪ್ರಮುಖವಾಗಿ ಜಗತ್ತಿನಲ್ಲಿ ಸಹನೆ ಕಡಿಮೆಯಾಗುತ್ತಿರುವ ಕಾರಣ ಹಲವು ವಿಧ್ವಂಸಕ ಕೃತ್ಯಗಳು ನಡೆಯುತ್ತಿದ್ದು ಇದನ್ನು ತಡೆಗಟ್ಟುವ ಉದ್ದೇಶದಿಂದ ಸಹನೆಯನ್ನು ಬೆಳೆಸುವ ಸಲುವಾಗಿ ಏರ್ಪಡಿಸಲಾಗಿತ್ತು.