ಭಾರತಕ್ಕೆ ಮರಳಲು ಪಾಕಿಸ್ತಾನ ಸರ್ಕಾದ NOCಗೆ ಕಾಯುತ್ತಿರುವ ಫಾತಿಮಾ ಅಲಿಯಾಸ್ ಅಂಜು!

By Suvarna News  |  First Published Oct 29, 2023, 11:12 PM IST

ಪತಿ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿ ಫೇಸ್‌ಬುಕ್ ಫ್ರೆಂಡ್ ಮದುವೆಯಾದ ಭಾರತದ ಅಂಜು ಬಳಿಕ ಫಾತಿಮಾ ಆಗಿ ಮತಾಂತರವಾಗಿದ್ದಳು. ಇದೀಗ ಅಂಜು ಭಾರತಕ್ಕೆ ಮರಳಲು ಪಾಕಿಸ್ತಾನ ಸರ್ಕಾರದ NOCಗೆ ಕಾಯುತ್ತಿದ್ದಾಳೆ.


ನವದೆಹಲಿ(ಅ.29) ಗಡಿಯಾಚೆಗಿನ ಲವ್ ಭಾರತದಲ್ಲಿ ಭಾರಿ ಟ್ರೆಂಡ್ ಆಗಿತ್ತು. ಪಾಕಿಸ್ತಾನದ ಸೀಮಾ ಹೈದರ್ ಭಾರತಕ್ಕೆ ಆಗಮನ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಈ ಪೈಕಿ ಭಾರತದ ಅಂಜು ಪಾಕಿಸ್ತಾನಕ್ಕೆ ತೆರಳು ಫೇಸ್‌ಬುಕ್ ಫ್ರೆಂಡ್ ನಸ್ರುಲ್ಲಾ ಮದುವೆಯಾದ ಘಟನೆ ಭಾರಿ ಸಂಚಲನ ಸೃಷ್ಟಿಸಿತ್ತು. ತನ್ನ ಪತಿ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ಅಂಜು, ನಸ್ರುಲ್ಲಾ ಜೊತೆ ಮದುವೆಯಾಗಿದ್ದಳು. ಬಳಿಕ ಇಸ್ಲಾಂಗೆ ಮತಾಂತರವಾಗಿ ಫಾತಿಮಾ ಆಗಿ ಬದಲಾಗಿದ್ದಳು. ಇದೀಗ ಇದೇ ಅಂಜು ಭಾರತಕ್ಕೆ ಮರಳಲು ಪಾಕಿಸ್ತಾನ ಸರ್ಕಾರದ ನಿರಪೇಕ್ಷಣಾ ಪತ್ರ(NOC)ಗಾಗಿ ಕಾಯುತ್ತಿದ್ದಾಳೆ.

ಫೇಸ್‌ಬುಕ್ ಮೂಲಕ ಪಾಕಿಸ್ತಾನದ ಖೈಬರ್ ಪಂಖ್ತುಕ್ವಾ ಪ್ರಾಂತ್ಯದ ನಸ್ರುಲ್ಲಾ ಜೊತೆ ಪ್ರೀತಿ ಶುರುವಾಗಿತ್ತು. ಪ್ರೀತಿ ಗಾಢವಾಗುತ್ತಿದ್ದಂತೆ ಸದ್ದಿಲ್ಲದೆ ಪಾಕಿಸ್ತಾನಕ್ಕೆ ತೆರಳು ವೀಸಾ ರೆಡಿ ಮಾಡಿಕೊಂಡಿದ್ದಳು. ಫೇಸ್‌ಬುಕ್ ಗೆಳೆಯನ ಮನೆಯಲ್ಲಿನ ಕಾರ್ಯಕ್ರಮಕ್ಕೆ ತೆರಳುವುದಾಗಿ ಹೇಳಿ ಹೋದ ಅಂಜು ಮರಳಿ ಬರಲೇ ಇಲ್ಲ. ನಸ್ರುಲ್ಲಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು. ಮಕ್ಕಳನ್ನು ಬಿಟ್ಟು ತೆರಳಿದ ಅಂಜು ಇಸ್ಲಾಂಗೆ ಮತಾಂತರವಾಗಿ ಫಾತಿಮಾ ಆಗಿ ಬದಲಾಗಿದ್ದಳು.

Tap to resize

Latest Videos

ಸಾಕಾಯ್ತು ಪಾಕಿಸ್ತಾನ ಸಹವಾಸ, ಅಕ್ಟೋಬರ್‌ನಲ್ಲಿ ಅಂಜು ಭಾರತಕ್ಕೆ ವಾಪಸ್!

ಪಾಕಿಸ್ತಾನ ನನ್ನ ಮನೆ ಎಂದು ಬೀಗಿದ ಅಂಜು ದಂಪತಿಗೆ ಪಾಕಿಸ್ತಾನದ ಉದ್ಯಮಿಗಳು ಉಡುಗೊರೆ ನೀಡಿದ್ದರು. ಇದಾದ ಬೆನ್ನಲ್ಲೇ ಅಂಜು ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ತನ್ನ ಮಕ್ಕಳನ್ನು ಬಿಟ್ಟು ಬಂದು ಮಾನಸಿಕವಾಗಿ ನೊಂದಿದ್ದಳು. ಹೀಗಾಗಿ ಭಾರತಕ್ಕೆ ಮರಳುವುದಾಗಿ ಅಂಜು ಹೇಳಿದ್ದಾಳೆ. ಇದೀಗ ಪಾಕಿಸ್ತಾನ ಸರ್ಕಾರ NOC ಪತ್ರಕ್ಕಾಗಿ ಕಾಯುತ್ತಿದ್ದಾಳೆ. ಆಗಸ್ಟ್ ತಿಂಗಳಲ್ಲಿ ಅಂಜು ವೀಸಾವನ್ನು ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿತ್ತು.

ಮಕ್ಕಳನ್ನು ನೋಡುವ ಸಲುವಾಗಿ ಫಾತಿಮಾ ಭಾರತಕ್ಕೆ ಮರಳುತ್ತಿದ್ದಾಳೆ. ಮಕ್ಕಳನ್ನು ನೋಡಿ, ಕೆಲ ದಿನಗಳ ಕಾಲ ಅವರ ಜೊತೆಗೆ ಕಳೆದು ಮತ್ತೆ ಪಾಕಿಸ್ತಾನಕ್ಕೆ ಮರಳುತ್ತಾಳೆ ಎಂದು ನಸ್ರುಲ್ಲಾ ಹೇಳಿದ್ದಾಳೆ. ಅಂಜು ನಡೆಗೆ ಭಾರತದಲ್ಲಿನ ಮೊದಲ ಪತಿ ಹಾಗೂ ಅಂಜು ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂಜುಗೆ ಫೇಸ್‌ಬುಕ್ ಮೂಲಕ ಪಡೆದ ಪ್ರೀತಿಯೇ ದೊಡ್ಡದಾಯಿತು. ಮಕ್ಕಳ ಪ್ರೀತಿ ಕಾಣಲೇ ಇಲ್ಲ. ನನ್ನ ಮಕ್ಕಳು ತಾಯಿಯ ಬರುವಿಕೆಗಾಗಿ ಕಾಯುತ್ತಿದ್ದರು. ಅವರಿಗೆ ಆಗಿರುವ ಮಾನಸಿಕ ಆಘಾತ ಹೇಗೆ ಸರಿಪಡಿಸಲಿ ಎಂದು ಅಂಜು ಮೊದಲ ಪತಿ ಅಳಲು ತೋಡಿಕೊಂಡಿದ್ದರು.

ಇಬ್ಬರು ಮಕ್ಕಳು ಪತಿಯನ್ನು ಬಿಟ್ಟು ಪ್ರಿಯಕರನಿಗಾಗಿ ಕುವೈಟ್‌ಗೆ ಹಾರಿದ ಮಹಿಳೆ, ಇಸ್ಲಾಂಗೆ ಮತಾಂತರ!

ಅಂಜು ರಾಜಸ್ಥಾನದ ಅರವಿಂದ್ ಜೊತೆ ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. 16 ವರ್ಷದ ಮಗಳು ಹಾಗೂ 6 ವರ್ಷದ ಮಗನ ಬಿಟ್ಟು ಅಂಜು ಪಾಕಿಸ್ತಾನಕ್ಕೆ ತೆರಳಿದ್ದಳು. 

click me!