ಪಾಕ್ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವ ಆಸೀಂ ಮುನೀರ್, ಕಾಶ್ಮೀರದಲ್ಲಿ ಭಾರೀ ದಾಳಿಗೆ ಸಂಚು! ಗುಪ್ತಚರ ವರದಿ ಏನು ಹೇಳಿದೆ?

Kannadaprabha News   | Kannada Prabha
Published : May 02, 2026, 05:41 AM IST
Intelligence Report pakistan Gen Asim Munir Planning Large Scale Attack in Kashmir

ಸಾರಾಂಶ

Intelligence Report ಪಾಕ್ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವ ಆಸೀಂ ಮುನೀರ್, ಕಾಶ್ಮೀರದಲ್ಲಿ ಭಾರೀ ದಾಳಿಗೆ ಸಂಚು ರೂಪಿಸಿದ್ದಾನೆ. ಈ ಕುತಂತ್ರದ ಹಿಂದಿನ ಕಾರಣವೇನು? ಗುಪ್ತಚರ ವರದಿ ಏನು ಹೇಳುತ್ತೆ? ಸಂಪೂರ್ಣ ವಿವರ ಇಲ್ಲಿದೆ ನೋಡಿ

ನವದೆಹಲಿ (ಮೇ.2): ಅಮೆರಿಕ-ಇರಾನ್‌ ನಡುವೆ ಸಂಧಾನ ಯತ್ನ ವಿಫಲವಾಗಿದ್ದರಿಂದ ಹತಾಶನಾಗಿರುವ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸೀಂ ಮುನೀರ್‌, ತನ್ನ ಇಮೇಜ್‌ ಹೆಚ್ಚಿಸಿಕೊಳ್ಳುವ ಯೋಜನೆಯ ಭಾಗವಾಗಿ ಕಾಶ್ಮೀರದಲ್ಲಿ ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದಾನೆ. ಪಾಕ್‌ನ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಈತ ಉಗ್ರಜಾಲಕ್ಕೆ ಮತ್ತೆ ಉತ್ತೇಜನ ನೀಡಲು ಉದ್ದೇಶಿಸಿದ್ದಾನೆ ಎಂದು ಭದ್ರತಾ ಪಡೆಗಳು ಎಚ್ಚರಿಕೆ ನೀಡಿವೆ.

ಈಗಾಗಲೇ ಅಮೆರಿಕ-ಇರಾನ್‌ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸುತ್ತಿರುವ ಪಾಕ್‌, ಸಾಫಲ್ಯ ಕಾಣದೆ ಕಂಗೆಟ್ಟಿದೆ. ಹಾಗಾಗಿ ಕಾಶ್ಮೀರ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದು, ಅಮೆರಿಕದ ಗಮನ ಸೆಳೆಯಲು ಯತ್ನಿಸುತ್ತಿದೆ. ಈ ಮೂಲಕ ಅಮೆರಿಕ ಜೊತೆಗಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವುದು ಮುನೀರ್‌ ಲೆಕ್ಕಾಚಾರ ಎನ್ನಲಾಗಿದೆ.

ಇದಕ್ಕಾಗಿ ಪಾಕ್‌ 2 ರೀತಿಯ ಯೋಜನೆ ಸಿದ್ಧಪಡಿಸಿದೆ. ಒಂದು, ಸ್ಥಳೀಯ ಭಯೋತ್ಪಾದಕ ಜಾಲವನ್ನು ಸಕ್ರಿಯಗೊಳಿಸಿ, ಭಾರತದ ಪ್ರವಾಸೋದ್ಯಮ ನೆಲಕಚ್ಚಿಸುವುದು ಹಾಗೂ ಭದ್ರತಾ ಪಡೆಗಳು ಚದುರುವಂತೆ ಮಾಡುವುದು. 2ನೆಯದು, ಪಾಕಿಸ್ತಾನಿ ಉಗ್ರರನ್ನು ಬಳಸಿ ಗಡಿಯಾಚೆಯಿಂದ ದಾಳಿ ನಡೆಸುವುದು.

ಅಧ್ಯಕ್ಷ ಗಾದಿ ಮೇಲೆ ಮುನೀರ್‌ ಕಣ್ಣು:

ಆಸೀಂ ಮುನೀರ್‌ಗೆ ಇದು ವೈಯಕ್ತಿಕ ಮತ್ತು ರಾಜಕೀಯ ಪ್ರತಿಷ್ಠೆಯ ವಿಷಯವಾಗಿದೆ. ಇತ್ತೀಚೆಗೆ ಅವರು ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕಾಗಿ ಶ್ರಮಿಸಿದ್ದರು, ಆದರೆ ಅದು ವಿಫಲವಾಗಿದೆ. ಇದರಿಂದ ಅವರ ‘ಜಾಗತಿಕ ರಾಜನೀತಿಜ್ಞ’ ಇಮೇಜ್‌ಗೆ ಧಕ್ಕೆ ಬಂದಿದೆ. ಈ ನಡುವೆ ಅವರು ಅಧ್ಯಕ್ಷ ಸ್ಥಾನಕ್ಕೆ ಕಣ್ಣು ಹಾಕಿದ್ದಾರೆ. ಹಾಗಾಗಿ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯಗೊಳಿಸುವ ಮೂಲಕ ತಮ್ಮ ಇಮೇಜ್‌ ಅನ್ನು ಭದ್ರಪಡಿಸಿಕೊಳ್ಳಲು ಮತ್ತು ಅಧ್ಯಕ್ಷ ಪಟ್ಟವೇರಲು ಹಾದಿ ಸುಗಮಗೊಳಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಣ್ಣೆ ಕುಡಿದು ಸದನಕ್ಕೆ ಬರ್ತಾನೆ ಪಂಜಾಬ್‌ ಸಿಎಂ! ಆಲ್ಕೋಹಾಲ್‌ ಟೆಸ್ಟ್ ಮಾಡಿಸಲು ವಿಧಾನಸಭೇಲಿ ಪ್ರತಿಪಕ್ಷ ಸದಸ್ಯರಿಂದ ಬಿಗಿಪಟ್ಟು!
19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ