ಬಸವಣ್ಣನ ವಚನ, ಹಂಪಿಯ ರಥ; ಮೋದಿ ಉದ್ಘಾಟಿಸಿದ ನೂತನ ಸಂಸತ್ ಭವನದಲ್ಲಿ ಕನ್ನಡ ಕಂಪು!

By Suvarna NewsFirst Published May 28, 2023, 3:17 PM IST
Highlights

ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನ ಉದ್ಘಾಟಿಸಿದ್ದಾರೆ. ಭಾರಿ ವಿವಾದದ ನಡುವೆ ವೈಭವೋಪೇತವಾಗಿ ಸಂಸತ್ ಉದ್ಘಾಟನೆಯಾಗಿದೆ. ಹಲವು ವಿಶೇಷತೆ, ವಿವಿಧತೆಯಲ್ಲಿ ಏಕತೆ, ವೈವಿಧ್ಯ ಸಂಸ್ಕೃತಿಗಳಿಂದ ಮೇಳೈಸಿರುವ ಹೊಸ ಸಂಸತ್ತಿನಲ್ಲಿ ಕನ್ನಡದ ಕಂಪು ಕಣ್ಮನಸೆಳೆಯುತ್ತಿದೆ. 

ನವದೆಹಲಿ(ಮೇ.28): ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನ ಉದ್ಘಾಟಿಸಿದ್ದಾರೆ. ದೇಶದ ಹಲವು ರಾಜ್ಯಗಳಿಂದ ಗ್ಯಾನೈಟ್, ಮಾರ್ಬಲ್, ಕಲ್ಲು, ಬಿದಿರಿನ ಚಾವಣಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತರಿಸಿ ಭವನ ನಿರ್ಮಾಣ ಮಾಡಲಾಗಿದೆ. ಇಷ್ಟೇ ಅಲ್ಲ ಈ ಸಂಸತ್ ಭವನದಲ್ಲಿ ಆಯಾ ರಾಜ್ಯದ ವಿಶೇಷತೆಗಳನ್ನು ಕಾಣಬಹುದು. ಅದರಲ್ಲೂ ನೂತನ ಸಂಸತ್ ಭವನದಲ್ಲಿ ಕನ್ನಡ ಕಂಪು ಕಣ್ಮನಸೆಳೆಯುತ್ತಿದೆ.  ಈ ಕುರಿತು ಸಂಸದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ವಿಡಿಯೋ ಪೋಸ್ಟ್ ಮಾಡಿದ್ದು ಭಾರಿ ಮೆಚ್ಚುಗೆ ಪಡೆದಿದೆ.

ಸಂಸತ್ ಭವನದ ಗೋಡೆಯಲ್ಲಿ ಹಂಪಿಯ ಕಲ್ಲಿನ ರಥವನ್ನು ಕೆತ್ತನೆ ಮಾಡಲಾಗಿದೆ. ಈ ಕಲ್ಲಿನ ರಥದ ಮೇಲೆ ಭಾರತದ ಮಹಾನ್ ದಾರ್ಶನಿಕರ ಚಿತ್ರಗಳನ್ನು ಹಾಕಲಾಗಿದೆ. ಈ ಚಿತ್ರಗಳ ಪೈಕಿ ಜಗಜ್ಯೋತಿ ಬಸವೇಶ್ವರ ಚಿತ್ರವೂ ಇದೆ. ಇನ್ನು ಪಕ್ಕದಲ್ಲೇ ಗೋಡೆಯ ಮೇಲೆ ಬಸವಣ್ಣನ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ , ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ,  ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಅನ್ನೋ ವಚನದ ಸಾಲುಗಳನ್ನು ಬರೆಯಲಾಗಿದೆ.

ಹೊಸ ಸಂಸತ್ ಭವನ 140 ಕೋಟಿ ಭಾರತೀಯರ ಕನಸಿನ ಪ್ರತಿಬಿಂಬ, ಬಸವಣ್ಣ ಉಲ್ಲೇಖಿಸಿ ಮೋದಿ ಭಾಷಣ!

ನೂತನ ಸಂಸತ್ ಭವನದಲ್ಲಿರುವ ಈ ಕನ್ನಡ ಕಂಪು ಇದೀಗ ಕನ್ನಡಿಗರ ಹೆಮ್ಮೆಗೆ ಕಾರಣವಾಗಿದೆ. ಈ ಕುರಿತು ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ, ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಸಂಸತ್ತಿನಲ್ಲಿ ಕನ್ನಡದ ಕಂಪು. ಬಸವಣ್ಣರ ವಚನ, ಮಧ್ವರ ಪ್ರೇರಣೆ, ಹಂಪಿಯ ರಥದ ವೈಭವ ಎಂದು ಟ್ವೀಟ್ ಮಾಡಿದ್ದಾರೆ.

 

ಸಂಸತ್ತಿನಲ್ಲಿ ಕನ್ನಡದ ಕಂಪು.

ಬಸವಣ್ಣರ ವಚನ, ಮಧ್ವರ ಪ್ರೇರಣೆ, ಹಂಪಿಯ ರಥದ ವೈಭವ! pic.twitter.com/5jSySyhd91

— Pratap Simha (@mepratap)

 

ನೂತನ ಸಂಸತ್ ಭವನ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾಷಣ ಮಾಡಿದರು. ಈ ವೇಳೆ ಬಸವಣ್ಣ ಉಲ್ಲೇಖಿಸಿದ್ದಾರೆ. ಲೋಕತಂತ್ರ, ಗಣತಂತ್ರ ಅನ್ನೋ ಪದಗಳು ಮಹಾಭಾರತದಲ್ಲೂ ಉಲ್ಲೇಖವಿದೆ. ಭಾರತದ ಕಣಕಣದಲ್ಲೂ ಪ್ರಜಾಪ್ರಭುತ್ವ ಮೇಳೈಸಿದೆ. ಜಗಜ್ಯೋತಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂಲಕ ಭಾರತದ ಶತಶತಮಾನಗಳ ಹಿಂದೆ ಪ್ರಜಾಪ್ರಭುತ್ವ, ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಿತ್ತು ಎಂದರು. 

ಹೊಸ ಸಂಸತ್ ಭವನ ಉದ್ಘಾಟನೆ, 75 ರೂಪಾಯಿ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ!

ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರಗೆ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಹೋಮ ಹಾಗೂ ಧಾರ್ಮಿಕ ಪೂಜೆ ಮೂಲಕ ಉದ್ಘಾಟನಾ ಕಾರ್ಯಕ್ರಮ ಆರಂಭಗೊಂಡಿತು. ಚೋಳರ ಕಾಲದಲ್ಲಿ ಅಧಿಕಾರವನ್ನು ಹಸ್ತಾಂತರಿಸುವ ವೇಳೆ ನೀಡುತ್ತಿದ್ದ ಸೆಂಗೋಲನ್ನು ಅಧೀನಮ್ ಪೀಠದ ಸ್ವಾಮೀಜಿಗಳು ಮೋದಿಗೆ ಹಸ್ತಾಂತರಿಸಿದರು. ಸದನದ ಸ್ಪೀಕರ ಆಸನದ ಬಳಿ ಚಿನ್ನದ ಸೆಂಗೋಲ್(ರಾಜದಂಡ)ವನ್ನು ಪ್ರಧಾನಿ ಮೋದಿ ಪ್ರತಿಷ್ಠಾಪನೆ ಮಾಡಿದರು. 

ಮೊಗಸಾಲೆಯಲ್ಲಿ ಸರ್ವಧರ್ಮ ಪ್ರಾರ್ಥನೆ ನೆರವೇರಿಸಲಾಯಿತು. ಎರಡನೇ ಹಂತದ ಕಾರ್ಯಕ್ರಮದಲ್ಲಿ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ ಅವರಿಂದ ಭಾಷಣ ಮಾಡಿದರು. ಇದೇ ವೇಳೆ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಸಂದೇಶವನ್ನು ಓದಿದರು. ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಭಾಷಣದ ಬಳಿಕ ಪ್ರಧಾನಿ ಮೋದಿ ಮಾತನಾಡಿದರು. ಇದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.  
 

click me!