
ವಿಶಾಖಪಟ್ಟಣಂ(ಮೇ.10): ಕೊರೋನಾ ವೈರುದ್ಧ ಭಾರತ ನಿರಂತರ ಹೋರಾಟ ನಡೆಸುತ್ತಿದೆ. ಇದಕ್ಕೆ ಹಲವು ರಾಷ್ಟ್ರಗಳು ನೆರವು ನೀಡುತ್ತಿದೆ. ಇದೀಗ ಸಿಂಗಾಪುರದಿಂದ ಆಕ್ಸಿಜನ್, ಕ್ರಯೋಜೆನಿಕ್ ಟ್ಯಾಂಕ್, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಹಲವು ವೈದ್ಯಕೀಯ ಸಲಕರಣೆ ಹೊತ್ತ INS ಐರಾವತ್ ಇದೀಗ ಭಾರತಕ್ಕೆ ಆಗಮಿಸಿದೆ.
"
ಬಹ್ರೇನ್‌ನಿಂದ 40 MT ಆಕ್ಸಿಜನ್, ರಾಜ್ಯದ ಪ್ರತಿ ಜಿಲ್ಲೆಗೂ ಪ್ರಾಣವಾಯು ಪೂರೈಕೆ!.
COVID-19 ವಿರುದ್ಧದ ರಾಷ್ಟ್ರದ ಹೋರಾಟವನ್ನು ಬೆಂಬಲಿಸಲು ನಡೆಯುತ್ತಿರುವ 'ಸಮುದ್ರ ಸೆತು II' ಕಾರ್ಯಾಚರಣೆಯ ಭಾಗವಾಗಿ, ಐಎನ್‌ಎಸ್ ಐರಾವತ್ ವೈದ್ಯಕೀಯ ಸಲಕರಣೆಯೊಂದಿಗೆ ಭಾರತಕ್ಕೆ ಆಗಮಿಸಿದೆ. ಐಎನ್‌ಎಸ್ ಐರಾವತ್ ಇಂದು(ಮೇ.10) ಬೆಳಿಗ್ಗೆ ವಿಶಾಖಪಟ್ಟಣಂಗೆ ಆಗಮಿಸಿದೆ. 08 ಕ್ರಯೋಜೆನಿಕ್ ಆಮ್ಲಜನಕ ಟ್ಯಾಂಕ್, 3,898 ಆಮ್ಲಜನಕ ಸಿಲಿಂಡರ್‌ಗಳು ಸೇರಿದಂತೆ ಇತರ ನಿರ್ಣಾಯಕ COVID ವೈದ್ಯಕೀಯ ಸಲಕರಣೆಯೊಂದಿಗೆ ಆಗಮಿಸಿದೆ.
ಕೊರೋನಾ ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ದಕ್ಷಿಣ ಕೊರಿಯಾ!
ಸಮುದ್ರ ಸೇತು 11 ಕಾರ್ಯಚರಣೆ ಅಡಿಯಲ್ಲಿ 9 ಐಎನ್‌ಎಸ್ ಐರಾವತ್ ಹಡಗುಗಳನ್ನು ನಿಯೋಜಿಸಲಾಗಿದೆ. ಪರ್ಷಿಯನ್ ಕೊಲ್ಲಿ ಮತ್ತು ಆಗ್ನೇಯ ಏಷ್ಯಾದ ಮಿತ್ರ ರಾಷ್ಟ್ರಗಳ ನೆರವನ್ನು ಭಾರತಕ್ಕೆ ಪೂರೈಕೆ ಮಾಡಲು ಐಎನ್‌ಎಸ್ ಐರಾವತ್ ನಿರಂತರ ಕೆಲಸ ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ