ಸತತ ಏಳನೇ ಪ್ರಶಸ್ತಿ ಪಡೆಯುವ ಮೂಲಕ ಇಂದೋರ್ ಇತಿಹಾಸವನ್ನು ನಿರ್ಮಿಸಿದೆ. ಮತ್ತು, ಸೂರತ್ ಸಹ ಮೊದಲನೇ ಸ್ಥಾನ ಪಡೆದಿದ್ದರೆ, ನವಿ ಮುಂಬೈ 3ನೇ ಸ್ಥಾನ ಪಡೆದುಕೊಂಡಿದೆ.
ನವದೆಹಲಿ (ಜನವರಿ 11, 2024): ಇಂದೋರ್ ಮತ್ತು ಸೂರತ್ ಮತ್ತೊಮ್ಮೆ ಭಾರತದ ಸ್ವಚ್ಛ ನಗರಗಳಾಗಿ ಹೊರಹೊಮ್ಮಿದ್ದು, ಸ್ವಚ್ಛತೆಯ ಬದ್ಧತೆಗೆ ಅದ್ಭುತ ವಿಜಯ ದೊರೆತಿದೆ. ಸ್ವಚ್ಛ ಸರ್ವೇಕ್ಷಣ್ 2023 ರ ಪಟ್ಟಿ ಹೊರಬಿದ್ದಿದ್ದು, ಈ ನಗರಗಳು ಕ್ಲೀನ್ ಸಿಟಿ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದೆ.
ಸತತ ಏಳನೇ ಪ್ರಶಸ್ತಿ ಪಡೆಯುವ ಮೂಲಕ ಇಂದೋರ್ ಇತಿಹಾಸವನ್ನು ನಿರ್ಮಿಸಿದೆ. ಮತ್ತು, ಸ್ವಚ್ಛ ಹಾಗೂ ಹಸಿರು ನಗರ ಭೂದೃಶ್ಯವನ್ನು ನಿರ್ವಹಿಸಲು ಚಿನ್ನದ ಗುಣಮಟ್ಟವನ್ನು ಹೊಂದಿಸುವ ಮೂಲಕ ಸೂರತ್ ಅಚಲವಾದ ಸಮರ್ಪಣೆಯನ್ನು ಪ್ರದರ್ಶಿಸಿದೆ. ಹಾಗೂ, ನವಿ ಮುಂಬೈ ಅಖಿಲ ಭಾರತ ಸ್ವಚ್ಛ ನಗರಗಳ ಪೈಕಿ ರ‍್ಯಾಂಕ್ 3 ಅನ್ನು ಪಡೆದುಕೊಂಡಿದೆ, ಇದು ಹಸಿರು ಭವಿಷ್ಯವನ್ನು ಬೆಳೆಸುವ ತನ್ನ ಸಮರ್ಪಣೆಯನ್ನು ಒತ್ತಿಹೇಳುತ್ತದೆ. ಈ ಮನ್ನಣೆಯು ನಗರದ ದೃಢವಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳು, ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ಸುಸ್ಥಿರ ನಗರಾಭಿವೃದ್ಧಿ ಉಪಕ್ರಮಗಳಿಗೆ ಸಾಕ್ಷಿಯಾಗಿದೆ.
undefined
ವಿಶ್ವಕ್ಕೆ ಭಾರತ ಭರವಸೆಯ ಆಶಾಕಿರಣ: ಪ್ರಧಾನಿ ಮೋದಿ; ನಾನು ಹೆಮ್ಮೆಯ ಗುಜರಾತಿ ಎಂದ ಅಂಬಾನಿ
Swachh Survekshan results dashboard launched by the Hon'ble President of India, Smt. Droupadi Murmu () during the
Click on the link below to know the rank of your city!https://t.co/3fxGsIQvra pic.twitter.com/PuY5B9HcyF
ಇನ್ನು, 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ, ಸಾಸ್ವಾದ್ ಆಲ್ ಇಂಡಿಯಾ ಕ್ಲೀನ್ ಸಿಟಿ ವಿಭಾಗದಲ್ಲಿ ರ‍್ಯಾಂಕ್ 1 ಅನ್ನು ಪಡೆದುಕೊಂಡಿದೆ.
ಈ ಮಧ್ಯೆ, MHOW ಕಂಟೋನ್ಮೆಂಟ್ ಬೋರ್ಡ್, ಸ್ವಚ್ಛ ಕಂಟೋನ್ಮೆಂಟ್ ಬೋರ್ಡ್ ಎಂದು ಗುರುತಿಸಲ್ಪಟ್ಟಿದ್ದಕ್ಕಾಗಿ ಪ್ರಶಂಸೆಗೆ ಅರ್ಹವಾಗಿದ್ದು, ಇತರರಿಗೆ ಶ್ಲಾಘನೀಯ ಉದಾಹರಣೆಯಾಗಿದೆ. ಮತ್ತೊಂದೆಡೆ, ಚಂಡೀಗಢವು ಸ್ವಚ್ಛ ಸರ್ವೇಕ್ಷಣ್ 2023 ರಲ್ಲಿ ಅತ್ಯುತ್ತಮ ಸಫಾಯಿಮಿತ್ರ ಸುರಕ್ಷಿತ್ ಶೆಹರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
Setting the gold standard for cleanliness, both Indore and Surat proudly secure the All India Clean City Rank 1 in Swachh Survekshan 2023. A testament to their unwavering commitment to a cleaner, greener future.
— Swachh Survekshan (@SwachSurvekshan)ಗಂಗಾ ನದಿಯ ಉದ್ದಕ್ಕೂ ಶುಚಿತ್ವದ ಪ್ರಾಮುಖ್ಯತೆಯನ್ನು ಗುರುತಿಸಿ, ವಾರಾಣಸಿ ಮತ್ತು ಪ್ರಯಾಗ್‌ರಾಜ್ ಸ್ವಚ್ಛ ಸರ್ವೇಕ್ಷಣಾ 2023 ರಲ್ಲಿ 1 ನೇ ಮತ್ತು 2 ನೇ ಶ್ರೇಯಾಂಕದಲ್ಲಿ ಸ್ವಚ್ಛವಾದ ಗಂಗಾ ಪಟ್ಟಣಗಳಾಗಿ ಅಗ್ರ ಸ್ಥಾನ ಪಡೆದುಕೊಂಡಿವೆ. ಈ ನಗರದ ಪ್ರಯತ್ನಗಳು ಈ ಪವಿತ್ರ ನದಿಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಗಣನೀಯ ಕೊಡುಗೆ ನೀಡುತ್ತವೆ.
400 ಸ್ಥಾನ ಗೆಲ್ಲಲು ಅನ್ಯಪಕ್ಷ ನಾಯಕರಿಗೆ ಬಿಜೆಪಿ ಗಾಳ: ಪಕ್ಷ ದುರ್ಬಲ ಆಗಿರುವ ಕಡೆ ಅನ್ಯರ ಸೇರ್ಪಡೆ
ಸ್ವಚ್ಛ ಸರ್ವೇಕ್ಷಣ್ 2023 ರಲ್ಲಿ ಮಹಾರಾಷ್ಟ್ರವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಲ್ಲಿ 1ನೇ ಸ್ಥಾನವನ್ನು ಪಡೆದುಕೊಂಡಿದೆ. ಮಧ್ಯಪ್ರದೇಶವು 2 ನೇ ಅತ್ಯುತ್ತಮ ಕಾರ್ಯಕ್ಷಮತೆಯ ರಾಜ್ಯವಾಗಿ ಸ್ಥಾನ ಪಡೆದಿದ್ದರೆ, ಛತ್ತೀಸ್‌ಗಢವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ.