ಯೋಧರ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗಬಲ್ಲ ವಿಶೇಷ ಶೂ ಒಂದನ್ನು ಇಂದೋರ್‌ನ ಐಐಟಿ ತಜ್ಞರ ತಂಡ ಅಭಿವೃದ್ಧಿಪಡಿಸಿದೆ. ಈ ಶೂ ಸ್ವಯಂ ವಿದ್ಯುತ್ ಶಕ್ತಿ ಉತ್ಪಾದಿಸುವುದರ ಜೊತೆಗೆ ಅವರಿರುವ ಸ್ಥಳವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ.
ಇಂದೋರ್: ಯೋಧರ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗಬಲ್ಲ ವಿಶೇಷ ಶೂ ಒಂದನ್ನು ಇಂದೋರ್‌ನ ಐಐಟಿ ತಜ್ಞರ ತಂಡ ಅಭಿವೃದ್ಧಿಪಡಿಸಿದೆ. ಈ ಶೂ ಸ್ವಯಂ ವಿದ್ಯುತ್ ಶಕ್ತಿ ಉತ್ಪಾದಿಸುವುದರ ಜೊತೆಗೆ ಅವರಿರುವ ಸ್ಥಳವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ.
ಪ್ರೊ.ಐ.ಎ ಪಳಿನಿ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಮಾದರಿಯ ಹತ್ತು ಜೊತೆ ಶೂಗಳನ್ನು ಈಗಾಗಲೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಕಳುಹಿಸಲಾಗಿದೆ. ಪಾದರಕ್ಷೆಯ ಅಡಿಭಾಗದಲ್ಲಿ ಅಳವಡಿಸಲಾಗಿರುವ ಉಪಕರಣವು, ಯೋಧರು ಸೇರಿದಂತೆ ಯಾವುದೆ ವ್ಯಕ್ತಿ ಪ್ರತಿ ಹೆಜ್ಜೆ ಇಟ್ಟಾಗಲು ವಿದ್ಯುತ್ ಉತ್ಪಾದಿಸಬಲ್ಲದು. ಹೀಗೆ ಉತ್ಪಾದಿಸಿದ ವಿದ್ಯುತ್‌ನಿಂದ ಸಣ್ಣ ಉಪಕರಣಗಳನ್ನು ಬಳಸಬಹುದು. ಜೊತೆಗೆ ಜಿಪಿಎಸ್ ಮತ್ತು ರೇಡಿಯೋ ತರಂಗಾಂತರ ಗುರುತಿಸುವಿಕೆಯಿಂದ (ಆರ್‌ಎಫ್‌ಐಡಿ) ಅಗತ್ಯವಿರುವಾಗ ಅವರಿರುವ ಸ್ಥಳವನ್ನು ಪತ್ತೆ ಮಾಡಬಹುದು ಎಂದು ಐಐಟಿ ತಜ್ಞರ ತಂಡ ಹೇಳಿದೆ.
ಬೆಂಗಳೂರು ಐಐಐಟಿಯಿಂದ ಜೊತೆ ಜೊತೆಗೆ ಡಿಗ್ರಿ ಪಡೆದ ಅಮ್ಮ ಮಗ: ನಮ್ಮ ಸಾಧನೆಯ ರೂವಾರಿ ಅಪ್ಪನೇ ಎಂದ್ರು
ಇದು ಯೋಧರಿಗೆ ಮಾತ್ರವಲ್ಲದೇ, ಮೆದುಳು ಸಂಬಂಧಿ ಕಾಯಿಲೆಗಳಿಂದ ಬಳಲುವ ವೃದ್ಧರು, ವಿದ್ಯಾರ್ಥಿಗಳು ಮತ್ತು ಪರ್ವತಾರೋಹಿಗಳಿರುವ ಸ್ಥಳವನ್ನು ಪತ್ತೆ ಮಾಡಬಹುದಾಗಿದ್ದು, ಕ್ರೀಡಾಪಟುಗಳ, ಕಾರ್ಖಾನೆಗಳಲ್ಲಿ ಕೆಲಸಗಾರರ ಹಾಜರಾತಿ ಮತ್ತು ಕೆಲಸವನ್ನು ಪರಿಶೀಲಿಸಲು ಸಹಕಾರಿಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ವಯನಾಡು ಭೂಕುಸಿತ: ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ನೆರವು
ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ರಿಲಯನ್ಸ್ ಫೌಂಡೇಷನ್ ನೆರವಿಗೆ ಮುಂದಾಗಿದೆ. ಫೌಂಡೇಷನ್‌ನಿಂದ ಸಂತ್ರಸ್ತರಿಗೆ ಆಹಾರ ಪದಾರ್ಥಗಳು, ಹಣ್ಣುಗಳು, ಹಾಲು, ಪಡಿತರ, ಅಡುಗೆ ಪಾತ್ರೆಗಳು, ಕುಡಿಯುವ ನೀರು, ಮೂಲಭೂತ ನೈರ್ಮಲ್ಯ ವಸ್ತುಗಳು, ಟೆಂಟ್‌ಗಳು, ಹಾಸಿಗೆಗಳು, ಸೋಲಾರ್ ಚಾಲಿತ ಸಾಧನಗಳು ಮತ್ತು ಟಾರ್ಚ್‌ಗಳಂತಹ ವಸ್ತುಗಳನ್ನು ಒದಗಿಸುತ್ತಿದೆ. ಮಕ್ಕಳಿಗೆ ಬೇಕಾದ ಶಿಕ್ಷಣ ಸಾಮಾಗ್ರಿಗಳನ್ನು ವಿತರಿಸಿದೆ. ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಮಾತನಾಡಿ, ವಯನಾಡಿನ ದುರಂತ ನಮಗೆ ಅತೀವ ದುಃಖವನ್ನು ಉಂಟು ಮಾಡಿದೆ. ಈ ದುರಂತದಿಂದ ಸಂತ್ರಸ್ತರಾದ ಪ್ರತಿಯೊಂದು ಕುಟುಂಬಕ್ಕೂ ನಮ್ಮ ಫೌಂಡೇಷನ್ ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ವಿಶ್ವದ ಟಾಪ್ 150 ವಿವಿಗಳಲ್ಲಿ ಐಐಟಿ ಬಾಂಬೆ, ದೆಹಲಿಗೆ ಸ್ಥಾನ
ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟ್ ಅಭ್ಯರ್ಥಿಯಾಗಿ ಕಮಲಾ ಸ್ಪರ್ಧೆ ಅಧಿಕೃತ
ವಾಷಿಂಗ್ಟನ್: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಕಮಲಾ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಚುನಾವಣೆಯಲ್ಲಿ ಎದುರಿಸಲಿದ್ದಾರೆ. ಜೋ ಬೈಡನ್ ಚುನಾವಣಾ ರೇಸ್‌ನಿಂದ ಸರಿದ ಬಳಿಕ ಸಹಜವಾಗಿಯೇ ಉಪಾಧ್ಯಕ್ಷೆ ಕಮಲಾ ಹೆಸರು ಮುಂಚೂಣಿಗೆ ಬಂದಿತ್ತು. ಅದರ ಬೆನ್ನಲ್ಲೇ ಪಕ್ಷದ ನೊಂದಾಯಿತ ಸದಸ್ಯರು ಚಲಾಯಿಸಿದ ಮತಗಳಲ್ಲಿ ಶೇ.99ರಷ್ಟು ಪಡೆಯುವ ಮೂಲಕ ಇದೀಗ ಕಮಲಾ ಸ್ಪರ್ಧೆ ಅಧಿಕೃತವಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಪಕ್ಷವೊಂದರ ಅಭ್ಯರ್ಥಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹಿರಿಮೆಯೂ ಕಮಲಾಗೆ ಒಲಿದಿದೆ. ಇದೇ ವೇಳೆ ಕಮಲಾ ಹ್ಯಾರಿಸ್ ತಮ್ಮ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಮಿನ್ನೇಸೋಟ ಗವರ್ನರ್ ಟಿಮ್ ವಾಜ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.