ಹಸೀನಾ ಆಘಾತಗೊಂಡಿದ್ದಾರೆ, ಚೇತರಿಸಿಕೊಂಡು ಮುಂದಿನ ಕ್ರಮ ಅವರೇ ನಿರ್ಧರಿಸಲಿ: ಜೈಶಂಕರ್‌

By Kannadaprabha News  |  First Published Aug 7, 2024, 11:34 AM IST

ಬಾಂಗ್ಲಾದೇಶದ ಅಸ್ಥಿರತೆ ಕಾರಣ ಸೋಮವಾರ ಸಂಜೆ ದಿಲ್ಲಿಗೆ ಬಂದ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಮತ್ತು ಮುಂದಿನ ಕ್ರಮವನ್ನು ನಿರ್ಧರಿಸಲು ಅವರಿಗೆ ಸಮಯ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.


ಪಿಟಿಐ ನವದೆಹಲಿ: ಬಾಂಗ್ಲಾದೇಶದ ಅಸ್ಥಿರತೆ ಕಾರಣ ಸೋಮವಾರ ಸಂಜೆ ದಿಲ್ಲಿಗೆ ಬಂದ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಮತ್ತು ಮುಂದಿನ ಕ್ರಮವನ್ನು ನಿರ್ಧರಿಸಲು ಅವರಿಗೆ ಸಮಯ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ದೇಶದ ಹಿತದೃಷ್ಟಿಯಿಂದ ಬಾಂಗ್ಲಾ ವಿಚಾರವಾಗಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ರಾಹುಲ್‌ ಗಾಂಧಿ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.

ಸಂಸತ್ ಭವನದಲ್ಲಿ ಬಾಂಗ್ಲಾ ವಿದ್ಯಮಾನದ ಕುರಿತು ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಜೈಶಂಕರ್, ಹಸೀನಾ ಭಾರತಕ್ಕೆ ಆಗಮಿಸಿ ಇನ್ನೂ 24 ಗಂಟೆಗಳಾಗಿಲ್ಲ. ಅವರು ಆಘಾತಕ್ಕೊಳಗಾಗಿದ್ದಾರೆ. ತಮ್ಮ ಭವಿಷ್ಯದ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅವರು ನಿರ್ಧರಿಸಲಿದ್ದಾರೆ. ಆದರೆ ಸರ್ಕಾರವು ಚೇತರಿಸಿಕೊಳ್ಳಲು ಸಮಯವನ್ನು ನೀಡುತ್ತಿದೆ ಎಂದರು.

Latest Videos

undefined

ಹಸೀನಾರ ತಕ್ಷಣದ ರಾಜಾಶ್ರಯ ಬೇಡಿಕೆಗೆ ಬ್ರಿಟನ್‌ ತಿರಸ್ಕಾರ? ಅಮೆರಿಕಾದಿಂದಲೂ ವೀಸಾ ನಿರಾಕರಣೆ

ಪಾಕ್‌ ಕೈವಾಡ ತಳ್ಳಿ ಹಾಕಲಾಗದು

ಇದೇ ವೇಳೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ನಾಯಕರು ಬಾಂಗ್ಲಾ ಅಸ್ಥಿರತೆ ಹಿಂದೆ ವಿದೇಶಿ (ಪಾಕ್‌) ಕೈವಾಡವಿರಬಹುದು ಎಂದು ಶಂಕಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ವಿದೇಶಿ ಸರ್ಕಾರಗಳ ಪಾತ್ರವನ್ನು ತಳ್ಳಿಹಾಕಲಿಲ್ಲ. ಯಾವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಢಾಕಾದಲ್ಲಿನ ಪಾಕ್ ರಾಯಭಾರಿ ತಮ್ಮ ಟ್ವೀಟರ್‌ ಡಿಪಿಯಲ್ಲಿ ಬಾಂಗ್ಲಾ ಹೋರಾಟ ಬೆಂಬಲಿಸುವ ಫೋಟೋ ಹಾಕಿಕೊಂಡಿದ್ದಾರೆ ಎಂದು ಸೂಚ್ಯವಾಗಿ ನುಡಿದರು.

ಭಾರತೀಯರ ಸುರಕ್ಷತೆ:

ಬಾಂಗ್ಲಾದೇಶದಲ್ಲಿರುವ 10,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ಬಾಂಗ್ಲಾದೇಶ ಸೇನೆಯೊಂದಿಗೆ ಸಂಪರ್ಕದಲ್ಲಿದೆ. ಅಲ್ಲಿನ ಪರಿಸ್ಥಿತಿ ಮೇಲೆ ನಿಗಾ ಇರಿಸಿದೆ ಎಂದರು.

ರಫೇಲ್‌ ರಕ್ಷಣೆಯಲ್ಲಿ ಭಾರತಕ್ಕೆ ಬಂದಿದ್ದ ಶೇಕ್ ಹಸೀನಾ: ರಾಜೀನಾಮೆ ಬಳಿಕ ಬಾಂಗ್ಲಾದಲ್ಲಿ ಹಿಂಸೆಗೆ 110 ಬಲಿ

 

click me!