
ಇಂದೋರ್ (ಜು.25) ಸರ್ಕಾರಿ ಶಾಲಾ ಶಿಕ್ಷಕಿ ಕುಮಾರಿ ಚಂದ್ರಕಾಂತ ಜೆತಾನಿ ಕಣ್ಣೀರ ಕತೆ ಹಲವರ ಕಣ್ಣಾಲಿ ತೇವಗೊಳಿಸಿದೆ. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕುಮಾರಿ ಚಂದ್ರಕಾಂತ ಜೆತಾನಿ ಆರೋಗ್ಯ ಹದಗೆಟ್ಟಾಗ ತೆಗೆದುಕೊಂಡ ಔಷಧಿಗಳು ಏರುಪೇರಾಗಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಓಡಾಡಲು ಸಾಧ್ಯವಿಲ್ಲ. ವ್ಹೀಲ್‌ಚೇರ್ ಹಾಸಿಗೆ ಹಾಗೂ ಶಾಲಾ ತರಗತಿ ಎಂದು ದಿನ ದೂಡುತ್ತಿರುವ ಶಿಕ್ಷಕಿ ಪ್ರತಿ ದಿನ ಡಯಾಲಿಸಿಸ್ ನೋವು ಸೇರಿದಂತೆ ಹಲವು ಅತೀಯಾದ ನೋವು ಅನುಭವಿಸುತ್ತಿದ್ದಾರೆ. ಈ ನೋವಿನಿಂದ ಮುಕ್ತಿ ನೀಡಲು ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ. ಈ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ. ದಿನ ದೂಡವುದರಲ್ಲಿ ಅರ್ಥವಿಲ್ಲ. ದಯಾಮರಣ ಕರುಣಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನೋವಿನಲ್ಲೇ ವಿದ್ಯಾರ್ಥಗಳಿಗೆ ಪಾಠ
ಮಧ್ಯಪ್ರದೇಶದ ಇಂದೋರ್‌ನ ಶಿಕ್ಷಕಿ ಕುಮಾರಿ ಚಂದ್ರಕಾತ ಜೆತಾನಿ ವ್ಹೀಲ್‌ಚೇರ್‌ನಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಪ್ರತಿ ದಿನ 7 ರಿಂದ 8 ಗಂಟೆ ಪಾಠ ಮಾಡುತ್ತಾರೆ. ಆದರೆ ಹೆಜ್ಜೆ ಹೆಜ್ಜೆಗೂ ಔಷಧಿ ಸೇವಿಸಬೇಕು. ಅತೀಯಾದ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ. ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಪ್ರತಿ ದಿನ ನೋವು ಅನುಭವಿಸುವ ಬದಲು ನನಗೆ ದಯಾಮರಣ ನೀಡಿ ಎಂದು ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಸ್ತಿ ದಾನ
ರಾಷ್ಟ್ರಪತಿಗೆ ಪತ್ರ ಬರೆದಿರುವ ಶಿಕ್ಷಕಿ ಕುಮಾರಿ ಚಂದ್ರಕಾತ್ ಜೆತಾನಿ, ತಮ್ಮ ಆಸ್ತಿಯನ್ನು ತಾವು ಪಾಠ ಮಾಡುತ್ತಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದಾರೆ. ತಮ್ಮಲ್ಲಿರುವ ಭೂಮಿಯನ್ನು ಮಕ್ಕಳಿಗೆ ದಾನ ಮಾಡಿದ್ದಾರೆ. ಇನ್ನು ಸತ್ತ ಬಳಿಕ ತಮ್ಮ ಮೃತದೇಹವನ್ನು ಎಂಜಿಎಂ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ವೈದ್ಯಕೀಯ ಕಾಲೇಜಿನ ಸ್ವಯಂಪ್ರೇರಿತ ಪತ್ರಕ್ಕೆ ಸಹಿ ಹಾಕಿದ್ದಾರೆ.
ತಪ್ಪಾದ ಔಷಧಿಯಿಂದ ಈ ಪರಿಸ್ಥಿತಿ
ಆರೋಗ್ಯ ಹದಗೆಟ್ಟಾಗ ಆಸ್ಪತ್ರೆ ದಾಖಲಾಗಿದ್ದೆ. ಆದರೆ ಆಸ್ಪತ್ರೆಯಲ್ಲಿ ನೀಡಿದ ತಪ್ಪಾದ ಔಷಧಿ ತನ್ನ ದೇಹದ ಸ್ವಾಧೀನ ಕಳೆದುಕೊಳ್ಳುವಂತೆ ಮಾಡಿತು. ಪಾರ್ಶವಾಯುಗಿ ತುತ್ತಾದೆ. ಆರೋಗ್ಯ ಸಮಸ್ಯೆ ಹೆಚ್ಚಾಯಿತು. ಪ್ರತಿ ದಿನದ ನೋವು ಸಹಿಸಲಾಗುತ್ತಿಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ.
ಸರ್ಕಾರದಿಂದ ನೆರವಿಲ್ಲ
ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆಗುತ್ತಿಲ್ಲ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯಾಮಾರಣ ಕರುಣಿಸಿ ಎಂದು ಶಿಕ್ಷಕಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ