ಇಂದೋರ್‌ನ 32 ಗಂಟೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಮೂವರು ಸಾವು, ಆತಂಕಗೊಂಡ ಸವಾರರು

Published : Jun 29, 2025, 06:35 PM IST
mahakumbh traffic

ಸಾರಾಂಶ

ಟ್ರಾಫಿಕ್ ಪದ ಕೇಳಿದರೆ ಸಾಕು ಅದು ಬೆಂಗಳೂರು ಎಂದು ಕಣ್ಮುಚ್ಚಿ ಹೇಳುತ್ತೇವೆ. ಆದರೆ ಬೆಂಗಳೂರಿಗಿಂತ ದೇಶದ ಇತರ ನಗರಗಳ ಟ್ರಾಫಿಕ್ ತೀರಾ ಹದಗೆಡುತ್ತಿದೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ 32 ಗಂಟೆ ಟ್ರಾಫಿಕ್ ಜಾಮ್ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ.

ಇಂದೋರ್ (ಜೂ.29 ) ಟ್ರಾಫಿಕ್ ವಿಚಾರದಲ್ಲಿ ಬೆಂಗಳೂರು ಅತೀ ಹೆಚ್ಚು ಟ್ರೋಲ್ ಆಗುತ್ತಿರುತ್ತದೆ. ಆದರೆ ಬೆಂಗಳೂರಿಗಿಂತ ದೇಶದ ಇತರ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿದೆ. ಇದೀಗ ಮಧ್ಯಪ್ರದೇಶದ ಇಂದೋರ್ ಟ್ರಾಫಿಕ್ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಇಂದೋರ್- ದೆವಾಸ್ ಹೆದ್ದಾರಿಯಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ಬರೋಬ್ಬರಿ 32 ಗಂಟೆ ತೆಗೆದುಕೊಂಡಿದೆ. ಈ ಟ್ರಾಫಿಕ್‌ನಲ್ಲಿ ಸಿಲುಕಿದ ಮೂವರು ಮೃತಪಟ್ಟ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಸರ್ಕಾರ ಟ್ರಾಫಿಕ್ ಪೊಲೀಸರ, ನಗರಾಭಿವೃದ್ದಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದು, ತಕ್ಷಣವೇ ಸಮಸ್ಸೆ ಬಗೆ ಹರಿಸಲು ಸೂಚಿಸಿದೆ.

ಟ್ರಾಫಿಕ್‌ನಲ್ಲೇ ಪ್ರಾಣ ಬಿಟ್ಟ ಜೀವಗಳು

ಇಂದೋರ್ -ದೆವಾಸ್ ಹೆದ್ದಾರಿಯಲ್ಲಿ ಗುರುವಾರ ಸಂಜೆ ಆರಂಭಗೊಂಡು ಶುಕ್ರವಾರ ತಡ ರಾತ್ರಿವರೆಗೆ ಮುಂದುವರಿದ ಘಟನೆ ನಡೆದಿದೆ. ಈ ವೇಳೆ ಬರೋಬ್ಬರಿ 4,000ಕ್ಕೂ ಹೆಚ್ಚು ವಾಹನಗಳು ಈ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿತ್ತು. ಇದರ ನಡುವೆ ತುರ್ತಾಗಿ ಆಸ್ಪತ್ರೆ ದಾಖಲಾಗಬೇಕಿದ್ದ ಜೀವನಗಳು ಟ್ರಾಫಿಕ್‌ನಲ್ಲೇ ಪ್ರಾಣಬಿಟ್ಟ ಘಟನೆ ನಡೆದಿದೆ.

32 ವರ್ಷದ ಯುವಕ ಸೇರಿ ಮೂವರು ಸಾವು

32 ವರ್ಷದ ಯುವಕ ಸಂದೀಪ್ ಪಟೇಲ್‌ಗೆ ಹೃದಯಾಘಾತ ಸಂಭವಿಸಿತ್ತು. ಈ ರಸ್ತೆಯ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ಕಾರಣ ಸಂದೀಪ್ ಪಾಟೀಲ್ ತಕ್ಕ ಸಮಯಕ್ಕೆ ಆಸ್ಪತ್ರೆ ತಲುಪಲೇ ಇಲ್ಲ. ತುರ್ತು ಚಿಕಿತ್ಸೆ ಸಿಗದೆ ಸಂದೀಪ್ ಪಾಟೀಲ್ ಇದೇ ಟ್ರಾಫಿಕ್ ಜಾಮ್‌ನಿಂದ ಮೃತಪಟ್ಟಿದ್ದಾನೆ. ಇನ್ನು ಇದೇ ಟ್ರಾಫಿಕ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಿಲುಕಿದ 65 ವರ್ಷದ ಕಮಲ್ ಪಾಂಚಲ್ ಹಾಗೂ 55 ವರ್ಷದ ಬಲರಾಂ ಪಟೇಲ್ ಕೂಡ ಮೃತಪಟ್ಟಿದ್ದಾರೆ. ಕಾರಿನಲ್ಲಿ ಕುಳಿತಿದ್ದ ತಂದೆ ಅಸ್ವಸ್ಥಗೊಂಡಿದ್ದರು. ತಕ್ಷಣ ಆಸ್ಪತ್ರೆ ದಾಖಲಿಸಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಹೇಗೋ ಇರುವಂತೆ ಸಾಗುತ್ತಿದ್ದ ಟ್ರಾಫಿಕ್‌ನಲ್ಲಿ ಒಂದೂವರೆ ಗಂಟೆ ಕಳೆದು ಬಳಿಕ ಖಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಮೊದಲೇ ತಂದೆ ಮೃತಪಟ್ಟಿದ್ದಾರೆ ಎಂದು ಕಮಲ್ ಪಾಂಚಲ್ ಪುತ್ರ ವಿಜಯ್ ಪಾಂಚಲ್ ಹೇಳಿದ್ದಾನೆ.

ಹಲವು ಆ್ಯಂಬುಲೆನ್ಸ್‌ಗಳು 32 ಗಂಟೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿತ್ತ. ತಕ್ಕ ಸಮಯಕ್ಕೆ ಆಸ್ಪತ್ರೆ ತಲುಪಲು ಸಾಧ್ಯವಾಗದೆ ರೋಗಿಗಳು ಪರದಾಡಿದ್ದರು ಎಂದು ಈ ಟ್ರಾಫಿಕ್‌ನಲ್ಲಿ ಸುಲುಕಿದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿಢೀರ್ ಟ್ರಾಫಿಕ್ ಜಾಮ್‌ಗೆ ಕಾರಣವೇನು?

ಇಂದೋರ್-ದೆವಾಸ್ ಹೆದ್ದಾರಿಯಲ್ಲಿ ಟ್ರಾಫಿಕ್ ಹೊಸದಲ್ಲ. ಆದರೆ ಈ ರೀತಿ ಜಾಮ್ ಹೊಸದು. ಮೂವಿಂಗ್ ಟ್ರಾಫಿಕ್‌ನಿಂದ ಸಂಪೂರ್ಣ ಸ್ಥಗಿತಗೊಂಡಿದ್ದು ಹೇಗೆ? ಇದಕ್ಕೆ ಮುಖ್ಯ ಕಾರಣ ಹೆದ್ದಾರಿ ಕಾಮಗಾರಿ ಹಾಗೂ ಭಾರಿ ಮಳೆಯಿಂದ ನದಿಯಂತಾಗಿದ್ದ ರಸ್ತೆಗಳು. ಹೆದ್ದಾರಿ ಕಾಮಗಾರಿಯಿಂದ ರಸ್ತೆಯ ನೀರು ಸರಿಯಾಗಿ ಹರಿದು ಹೋಗಲು ಸಾಧ್ಯವಾಗಿಲ್ಲ. ಇತ್ತ ಕಾಮಗಾರಿ ಕಾರಣ ಸರ್ವೀಸ್ ರಸ್ತೆಯಲ್ಲೇ ವಾಹನ ಸಾಗಬೇಕಿದೆ. ಒಂದೆಡೆ ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿಕೊಂಡು ರಸ್ತೆಗಳು ಕಿರಿದಾಗಿದೆ. ಇತ್ತ ಕಾಮಗಾರಿ ಪರಿಣಾಮ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಮುಖ್ಯ ರಸ್ತೆ ಕಾರಣದಿಂದ ಭಾರಿ ಸಂಖ್ಯೆಯಲ್ಲಿ ವಾಹನ ಸಂಚಾರಗಳು ಈ ಟ್ರಾಫಿಕ್ ಮತ್ತಷ್ಟು ಹೆಚ್ಚು ಮಾಡಿದೆ.

ಪರ್ಯಾಯ ಮಾರ್ಗಕ್ಕೆ ಸೂಚನೆ

ಈ ರೀತಿ ಟ್ರಾಫಿಕ್ ಜಾಮ್ ಸಂಭವಿಸಿದರೂ ಟ್ರಾಫಿಕ್ ಪೊಲೀಸರು, ನಗರಾಭಿವೃದ್ಧಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ. ಪರ್ಯಾ ಮಾರ್ಗ ಬಳಕೆ ಮಾಡಿ, ತಕ್ಷಣವೇ ಟ್ರಾಫಿಕ್ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ