Video: ಪೈಲಟ್ ಪತಿಯ ಕ್ಯೂಟ್ ವಿಡಿಯೋ ನೋಡಿ ಗಂಡ ಅಂದ್ರೆ ಹಿಂಗಿರಬೇಕು ಅಂದ್ರು ಮಹಿಳೆಯರು

Published : Feb 23, 2026, 08:35 AM IST
Indigo Pilot

ಸಾರಾಂಶ

ಪ್ರತಿ ಬಾರಿ ವಿದೇಶ ಪ್ರವಾಸ ಮುಗಿಸಿ ಬಂದಾಗಲೂ, ಪತ್ನಿಗಾಗಿ ಪ್ರೀತಿಯಿಂದ ಹೂವು ತರುವ ಇಂಡಿಗೋ ಪೈಲಟ್ ಒಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕ್ಯೂಟ್ ವಿಡಿಯೋವನ್ನು ಅವರ ಪತ್ನಿಯೇ ಶೇರ್ ಮಾಡಿಕೊಂಡಿದ್ದಾರೆ.

ಪ್ರೀತಿಗೆ ಗಡಿಗಳಿಲ್ಲ ಅನ್ನೋದನ್ನು ಸಾಬೀತುಪಡಿಸುವ ಕ್ಯೂಟ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಕೆಲಸ ಮುಗಿಸಿ ಬೇರೆ ಬೇರೆ ದೇಶಗಳಿಂದ ವಾಪಸ್ ಬರುವಾಗಲೆಲ್ಲಾ, ತನ್ನ ಪ್ರೀತಿಯ ಹೆಂಡತಿಗಾಗಿ ಹೂಗುಚ್ಛ ತರುವ ಪೈಲಟ್ ಪತಿಯ ವಿಡಿಯೋ ಲಕ್ಷಾಂತರ ಜನರ ಮನಗೆದ್ದಿದೆ. ಇಂಡಿಗೋದ ಮಾಜಿ ಫ್ಲೈಟ್ ಅಟೆಂಡೆಂಟ್ ಮೇಘಾ ಝಾ ಅನ್ನೋರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ಮನಮುಟ್ಟುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. 

ಪ್ರತಿಯೊಂದು ದೇಶದಿಂದಲೂ ಸುಂದರ ಹೂವುಗಳು

ವಿಡಿಯೋದಲ್ಲಿ, ಪೈಲಟ್ ಯೂನಿಫಾರ್ಮ್‌ನಲ್ಲಿರುವ ಪತಿ ಕೆಲಸ ಮುಗಿಸಿ ಮನೆಗೆ ಬರುವುದನ್ನು ನೋಡಬಹುದು. ಒಂದು ಕೈಯಲ್ಲಿ ತಮ್ಮ ಕ್ಯಾಬಿನ್ ಸೂಟ್‌ಕೇಸ್ ಎಳೆಯುತ್ತಿದ್ದರೆ, ಇನ್ನೊಂದು ಕೈಯಲ್ಲಿ ನೇರಳೆ ಬಣ್ಣದ ಹೂಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ.

'ನಾನು ಮದುವೆಯಾಗಿರೋ ವ್ಯಕ್ತಿ, ತಾನು ಹೋಗುವ ಪ್ರತಿಯೊಂದು ದೇಶದಿಂದಲೂ ನನಗಾಗಿ ಹೂವುಗಳನ್ನು ತರುತ್ತಾರೆ' ಎಂಬ ಅಡಿಬರಹದೊಂದಿಗೆ ಮೇಘಾ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಯಾಣದ ನಡುವೆಯೂ ತನ್ನ ಸಂಗಾತಿಯನ್ನು ನೆನಪಿಸಿಕೊಳ್ಳುವ ಪೈಲಟ್‌ನ ಮನಸ್ಸನ್ನು ಬಹುತೇಕರು ಹೊಗಳಿದ್ದಾರೆ.

 

 

"ಇದು ಯೂನಿಫಾರ್ಮ್ ಅಥವಾ ಹೂವುಗಳ ಬಗ್ಗೆ ಅಲ್ಲ, ಬದಲಾಗಿ ಅವರು ತೋರಿಸಿದ ಕಾಳಜಿಯ ಬಗ್ಗೆ," ಎಂದು ಒಬ್ಬರು ಬರೆದಿದ್ದಾರೆ. "ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುವುದೇ ನಿಜವಾದ ಪ್ರೀತಿ," ಮತ್ತು "ಇದು ಪ್ರತಿಯೊಬ್ಬ ಹುಡುಗಿಯೂ ಬಯಸುವ ಕ್ಷಣ," ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ಸೊಂಟ ಬಳುಕಿಸುತ್ತಾ ಮಕ್ಕಳನ್ನ ಬಾವಿಗೆ ಬಿಟ್ಟ ಡೇಂಜರ್ ಮಮ್ಮಿ: ವೈರಲ್ ವಿಡಿಯೋ

ಇಂತಹ ಚಿಕ್ಕಪುಟ್ಟ ಕಾಳಜಿಯೇ ಸಾಕು

ದೂರದ ದೇಶಗಳಲ್ಲಿ ಕೆಲಸ ಮಾಡುವ ಮತ್ತು ಸದಾ ಪ್ರಯಾಣದಲ್ಲಿರುವ ದಂಪತಿಗೆ ಈ ವಿಡಿಯೋ ದೊಡ್ಡ ಸ್ಫೂರ್ತಿ ಮತ್ತು ಸಮಾಧಾನ ನೀಡಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಪ್ರೀತಿ ವ್ಯಕ್ತಪಡಿಸಲು ದೊಡ್ಡ ದೊಡ್ಡ ಕೆಲಸಗಳೇ ಬೇಕಿಲ್ಲ, ಇಂತಹ ಚಿಕ್ಕಪುಟ್ಟ ಕಾಳಜಿಯೇ ಸಾಕು ಎಂಬುದನ್ನು ಈ ವಿಡಿಯೋ ನೆನಪಿಸುತ್ತದೆ.

ಇದನ್ನೂ ಓದಿ: ಊರನ್ನೇ ಬೆಚ್ಚಿ ಬೀಳಿಸಿದ 37ರ ಮಹಿಳೆ, 17ರ ಹುಡುಗನ ಲವ್ ಸ್ಟೋರಿ; ಆಂಟಿ ಎಸ್ಕೇಪ್, ಪೋರ ಲಾಕ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲಿವ್‌-ಇನ್‌ ಗೆಳತಿ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಸುರಿದು ಬೆಂಕಿ
ಸಂಸದೆಯರ ಮುಂದೆಬಿಟ್ಟು ಪ್ರಧಾನಿ ಆಗಬೇಕೆ ? : ಮೋದಿ