ಆಕಾಶದಲ್ಲಿ ಹಾರುತ್ತಿದ್ದಾಗ ಇಂಡಿಗೋ ವಿಮಾನದ ತುರ್ತುದ್ವಾರ ತೆರೆಯಲು ಯತ್ನ! ದೆಹಲಿ-ಪುಣೆ ಪ್ರಯಾಣಿಕರು ಸೇಫ್

Gowthami K   | Kannada Prabha
Published : Nov 04, 2026, 08:26 AM IST
IndiGo

ಸಾರಾಂಶ

ದೆಹಲಿಯಿಂದ ಪುಣೆಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ತುರ್ತುದ್ವಾರ ತೆರೆಯಲು ಯತ್ನಿಸಿ ಆತಂಕ ಸೃಷ್ಟಿಸಿದ್ದಾನೆ. ಈ ಕೃತ್ಯದಿಂದ ಇತರರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಆತನ ವಿರುದ್ಧ ಬಿಎನ್‌ಎಸ್ ಸೆಕ್ಷನ್ 125ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಪುಣೆ: ಇಂಡಿಗೋ ವಿಮಾನವೊಂದು ದೆಹಲಿಯಿಂದ ಹೊರಟ ಸ್ವಲ್ಪ ಹೊತ್ತಿಗೇ ಅದರಲ್ಲಿದ್ದ ವ್ಯಕ್ತಿಯೊಬ್ಬರು ತುರ್ತುದ್ವಾರವನ್ನು ತೆರೆಯಲೆತ್ನಿಸಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಪರಿಣಾಮ, ಮಹಾರಾಷ್ಟ್ರದ ಸಾಸ್ವಡ್‌ ನಿವಾಸಿ ಗೌರವ್‌ ಸತ್ಯೇಂದ್ರ ರೌಟೆಲಾ ವಿರುದ್ಧ, ಪ್ರಕರಣ ದಾಖಲಿಸಲಾಗಿದೆ.

ಪುಣೆಗೆ ಹೊರಟಿದ್ದ ವಿಮಾನ ಮಧ್ಯಾಹ್ನ 12.45ಕ್ಕೆ ಟೇಕಾಫ್‌ ಆಗಿತ್ತು. ಅದರ ಎಮರ್ಜೆನ್ಸಿ ದ್ವಾರದ ಬಳಿಯ ಆಸನದಲ್ಲಿ ಕುಳಿತಿದ್ದ ರೌಟೆಲಾ, ಆ ದ್ವಾರವನ್ನು ಮುಟ್ಟಿದ್ದು, ಕೂಡಲೇ ಎಚ್ಚರಿಕೆ ಗಂಟೆ ಮೊಳಗಿದೆ. ಇದರಿಂದ ಅನ್ಯ ಪ್ರಯಾಣಿಕರು ಗಾಬರಿಯಾಗಿದ್ದಾರೆ. ವಿಚಾರಣೆ ವೇಳೆ, ‘ಅದು ತುರ್ತುನಿರ್ಮಗನ ದ್ವಾರ ಎಂದು ತಿಳಿಯದೆ ಮುಟ್ಟಿದೆ’ ಎಂದು ರೌಟೆಲಾ ಹೇಳಿದ್ದಾರೆ.

ಅವರ ಕೃತ್ಯದಿಂದ ಅನ್ಯರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದ್ದುದರಿಂದ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಬಿಎನ್‌ಎಸ್‌ನ 125ನೇ (ಮಾನವನ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವಷ್ಟು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದ ಯಾವುದೇ ಕೃತ್ಯ) ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ.

ನೇಪಾಳದಲ್ಲಿ 2 ಹೆಲಿಕಾಪ್ಟರ್‌ ಡಿಕ್ಕಿ: ಓರ್ವ ಭಾರತೀಯ ಸಾವು

ಎರಡು ಹೆಲಿಕಾಪ್ಟರ್‌ಗಳು ಲ್ಯಾಂಡ್‌ ಆಗುವ ವೇಳೆ ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಭಾರತೀಯ ಮೃತಪಟ್ಟು, ಇನ್ನೋರ್ವ ಭಾರತ ಮೂಲದ ವ್ಯಕ್ತಿ ಗಾಯಗೊಂಡ ಆಘಾತಕಾರಿ ಘಟನೆ ನೇಪಾಳದ ಸೋಲುಖುಂಬು ಜಿಲ್ಲೆಯ ಖುಂಬು ಪಾಸಂಗ್ ಲ್ಹಾಮು ಪುರಸಭೆಯ ಫೆರಿಚೆಯಲ್ಲಿ ಮಂಗಳವಾರ ನಡೆದಿದೆ.

ಆಗಿದ್ದೇನು?:

ಫಿಶ್‌ಟೈಲ್ ಏರ್ ಮತ್ತು ಏರ್ ಡೈನಾಸ್ಟಿ ಸಂಸ್ಥೆಗಳು ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್‌ಗಳು ಸ್ಥಳೀಯ ಕಾಲಮಾನ ಬೆಳಿಗ್ಗೆ 8.11ರ ಸುಮಾರಿಗೆ ಪರಸ್ಪರ ಡಿಕ್ಕಿ ಹೊಡೆದಿವೆ. ಈ ಎರಡೂ ಹೆಲಿಕಾಪ್ಟರ್‌ಗಳು ಮೌಂಟ್ ಎವರೆಸ್ಟ್‌ಗೆ ಪ್ರವೇಶ ದ್ವಾರವೆನಿಸಿರುವ ಲುಕ್ಲಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದವು. ಕಾಠ್ಮಂಡುವಿನ ಈಶಾನ್ಯಕ್ಕೆ 150 ಕಿ.ಮೀ. ದೂರದಲ್ಲಿ, ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹೋಗುವ ದಾರಿಯಲ್ಲಿನ ಫೆರಿಚೆಯಲ್ಲಿ ಇವು ಲ್ಯಾಂಡ್‌ ಆಗಲಿದ್ದವು.

ಭಾರತೀಯ ಮೃತ:

ಘಟನೆಯಲ್ಲಿ ವಸಂತ್ ಕುಮಾರ್ ಬಲರಾಮರಾಮಡು ಎಂಬ ಭಾರತೀಯ ವ್ಯಕ್ತಿ ಮೃತಪಟ್ಟಿದ್ದಾರೆ. ಇವರು ಫಿಶ್‌ಟೇಲ್ ಏರ್ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇವರ ಮೃತದೇಹವನ್ನು ಲುಕ್ಲಾದ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದ್ದು, ಶವಪರೀಕ್ಷೆಗಾಗಿ ಶೀಘ್ರದಲ್ಲೇ ಕಾಠ್ಮಂಡುವಿಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಅದೇ ಹೆಲಿಕಾಪ್ಟರ್‌ನಲ್ಲಿದ್ದ, ಭಾರತ ಮೂಲದ ನ್ಯೂಜಿಲೆಂಡ್‌ ನಿವಾಸಿ ಶೈಲೇಶ್ ಕೃಷ್ಣ ಪಟೇಲ್ (49) ಗಾಯಗೊಂಡಿದ್ದಾರೆ. ಅವರನ್ನು ಕಾಠ್ಮಂಡುವಿನ ಮೆಡಿಸಿಟಿ ಆಸ್ಪತ್ರೆಗೆ ಸಾಗಿಸಲಾಗಿದೆ. ಫಿಶ್‌ಟೇಲ್ ಏರ್‌ನ ರವೀಂದ್ರ ಪ್ರಜಾಪತಿ ಮತ್ತು ಡೈನಾಸ್ಟಿ ಏರ್‌ನ ಪ್ರಜ್ವಲ್ ಕೆ.ಸಿ. ಎಂಬ ನೇಪಾಳಿ ಪೈಲಟ್‌ಗಳು ಕೂಡ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾಠ್ಮಂಡುವಿಗೆ ಕರೆದೊಯ್ಯಲಾಗಿದೆ. ಘಟನೆಯ ಸಮಯದಲ್ಲಿ ಆ 2 ಹೆಲಿಕಾಪ್ಟರ್‌ಗಳಲ್ಲಿದ್ದ ಪ್ರಯಾಣಿಕರ ಸಂಖ್ಯೆ ಇನ್ನೂ ಖಚಿತವಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದಲ್ಲಿ ಇತಿಹಾಸ ಬರೆದ ಬಡತನ ಇಳಿಕೆ, ವಿಶ್ವಬ್ಯಾಂಕ್ ವರದಿಯಿಂದ ವಿಪಕ್ಷಗಳಿಗೆ ಮುಖಭಂಗ
ಭಾರತದ ಬೀದಿ ಬದಿ ವ್ಯಾಪಾರಿಯಾದ ಟ್ರಂಪ್ ಮೀಮ್ಸ್, ಅಮೆರಿಕ ಚುನಾವಣೆ ಫಲಿತಾಂಶ ಬೆನ್ನಲ್ಲೇ ಫುಲ್ ಟ್ರೋಲ್