ಇಂಡಿಗೋ 20ನೇ ವರ್ಷಾಚರಣೆಗೆ ಭರ್ಜರಿ ಗಿಫ್ಟ್, ಪ್ರಯಾಣಿಕರಿಗೆ ಉಚಿತ ಟಿಕೆಟ್, ಪಡೆಯುವುದು ಹೇಗೆ?

Published : Aug 07, 2026, 12:28 PM IST
IndiGo Anniversary Offer

ಸಾರಾಂಶ

ಇಂಡಿಗೋ 20ನೇ ಆ್ಯನಿವರ್ಸರಿ ಆಚರಿಸುತ್ತಿದೆ. 20 ಸಾವಿರ ಲಕ್ಕಿ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡುತ್ತಿದೆ. 10 ರೂಪಾಯಿ ವರೆಗಿನ ಪ್ರಯಾಣ ಟಿಕೆಟ್ ಉಚಿತವಾಗಿ ಸಿಗಲಿದೆ. ಇಂಡಿಗೋದಲ್ಲಿ ಉಚಿತ ಟಿಕೆಟ್ ಪಡೆಯುವುದು ಹೇಗೆ?

ನವದೆಹಲಿ (ಆ.07) ಇಂಡಿಗೋ ವಿಮಾನಯಾನ ಸಂಸ್ಥೆ 20ನೇ ವರ್ಷಾಚರಣೆಯಲ್ಲಿದೆ. ಈ ಸಂಭ್ರವಮ್ನು ತನ್ನ ಪ್ರಯಾಣಿಕರ ಜೊತೆ ಆಚರಿಸಲು ಇಂಡಿಗೋ ಮುಂದಾಗಿದೆ. ಹೀಗಾಗಿ ಬರೋಬ್ಬರಿ 20 ಸಾವಿರ ಲಕ್ಕಿ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡುತ್ತಿದೆ. ಪ್ರತಿ ಟಿಕೆಟ್ 10,000 ರೂಪಾಯಿ ವರೆಗೆ ಉಚಿತವಾಗಿ ನೀಡಲಿದೆ. ಈ ಮೂಲಕ ಪ್ರಯಾಣಿಕರು ಉಚಿತವಾಗಿ ಇಂಡಿಗೋ ವಿಮಾನ ಪ್ರಯಾಣ ಮಾಡಬಹುದು. ಹ್ಯಾಪಿ ಇಂಡಿಗೋ ಡೇ ಆಚರಣೆ ಮೂಲಕ ಉಚಿತ ಟಿಕೆಟ್ ನೀಡಲಾಗುತ್ತಿದೆ.

ಡೊಮೆಸ್ಟಿಕ್ ವಿಮಾನ ಪ್ರಯಾಣಕ್ಕೆ ಈ ಆಫರ್ ಅನ್ವಯ

ಇಂಡಿಗೋ ಡೊಮೆಸ್ಟಿಕ್ ವಿಮಾನ ಪ್ರಯಾಣಕ್ಕೆ ಮಾತ್ರ ಈ ಉಚಿತ ಟಿಕೆಟ್ ಆಫರ್ ಅನ್ವಯವಾಗಲಿದೆ. ವಿದೇಶಿ ಪ್ರಯಾಣಕ್ಕೆ ಸಾಧ್ಯವಿಲ್ಲ. ಭಾರತದ ಯಾವುದೇ ಪ್ರದೇಶಕ್ಕೆ ಇಂಡಿಗೋ ಉಚಿತ ಟಿಕೆಟ್ ಮೂಲಕ ಪ್ರಯಾಣಿಸಬಹುದು. ಈ ಆಫರ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ಗರಿಷ್ಠ 10,000 ರೂಪಾಯಿ ವರೆಗೆ ಸಂಪೂರ್ಣ ಮೊತ್ತ ರಿಫಂಡ್ ಆಗಲಿದೆ.

ಇಂಡಿಗೋ ಉಚಿತ ಟಿಕೆಟ್ ಪಡೆಯುವುದು ಹೇಗೆ?

ಇಂಡಿಗೋ ಉಚಿತ ವಿಮಾನ ಟಿಕೆಟ್ ಪಡೆಯುವುದು ಸರಳ ಹಾಗೂ ಸುಲಭ. ಮೊದಲ ಕಂಡೀಷನ್, ನೀವು ಇಂಡಿಗೋ ವಿಮಾನ ಟಿಕೆಟನ್ನು ಇಂಡಿಗೋ ಅಧಿಕೃತ ವೆಬ್‌ಸೈಟ್, ಆ್ಯಪ್ ಅಥವಾ ಇಂಡಿಗೋ ಎಐ ವರ್ಚುವಲ್ ಅಸಿಸ್ಟೆಂಟ್ 6Eskai ಮೂಲಕವೇ ಮಾಡಿರಬೇಕು. ಅಂದರೆ ಥರ್ಡ್ ಪಾರ್ಟಿ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಇಂಡಿಗೋ ಟಿಕೆಟ್ ಬುಕ್ ಮಾಡಿದರೆ ಉಚಿತ ವಿಮಾನ ಟಿಕೆಟ್ ಪಡೆಯಲು ಅರ್ಹರಾಗುವುದಿಲ್ಲ.

ಆಗಸ್ಟ್ 4 ರಿಂದ 6ರವರೆಗೆ ಬುಕ್ ಮಾಡಿದ ಇಂಡಿಗೋ ಟಿಕೆಟ್‌ಗಳಿಗೆ ಈ ಆಫರ್ ಅನ್ವಯವಾಗಲಿದೆ. ಈಗಾಗಲೇ ನೀವು ಇಂಡಿಗೋ ಟಿಕೆಟ್ ಬುಕ್ ಮಾಡಿದರೆ ಹ್ಯಾಪಿ ಇಂಡಿಗೋ ಡೇ ಆಚರಣೆ ಭಾಗವಾಗಿ ನಿಮ್ಮ ಟಿಕೆಟ್ ಮೊತ್ತ ಸಂಪೂರ್ಣವಾಗಿ ರೀಫಂಡ್ ಆಗಲಿದೆ. ಎಕಾನಮಿಕ್ ಕ್ಲಾಸ್, ಇಂಡಿಗೋ ಸ್ಟ್ರೆಚ್ ವಿಮಾನ ಪ್ರಯಾಣಕ್ಕೆ ಅನ್ವಯವಾಗಲಿದೆ. ಇನ್ನು ಒನ್‌ವೇ ಹಾಗೂ ರಿಟರ್ನ್ ಎರಡೂ ಪ್ರಯಾಣಕ್ಕೆ ಆಫರ್ ಅನ್ವಯವಾಗಲಿದೆ.

ಲಕ್ಕಿ ಡ್ರಾ ಮೂಲಕ ಉಚಿತ ಟಿಕೆಟ್

ಇಂಡಿಗೋ ಬರೋಬ್ಬರಿ 20 ಸಾವಿರ ಉಚಿತ ಟಿಕೆಟ್ ಪ್ರಯಾಣಿಕರಿಗೆ ನೀಡುತ್ತಿದೆ. ಇಂಡಿಗೋ ಕಂಡೀಷನ್ ಮೂಲಕ ಟಿಕೆಟ್ ಖರೀದಿಸಿದವರು, ಪ್ರಯಾಣ ಮಾಡಿದವರ ಟಿಕೆಟ್ ಪಿಎನ್ಆರ್ ನಂಬರ್‌ನ್ನು ಇಂಡಿಗೋ ಕಂಪ್ಯೂಟರ್ ಸಿಸ್ಟಮ್ ರ್ಯಾಂಡಮ್ ಆಗಿ ಸೆಲೆಕ್ಟ್ ಮಾಡಲಿದೆ. ಕಂಪ್ಯೂಟರ್ ಆಧಾರಿತ ಲಕ್ಕಿ ಡ್ರಾ ಮೂಲಕ ಸೆಲೆಕ್ಟ್ ಮಾಡುವ PNR ನಂಬರ್ ಪ್ರಯಾಣಿಕನಿಗೆ ಇಮೇಲ್ ಹಾಗೂ ಮೊಬೈಲ್ ಸಂದೇಶಗಳು ಬರಲಿದೆ. ಬಳಿಕ ನಿಮ್ಮ ಪ್ರಯಾಣಕ್ಕೆ ಸಂಬಂಧಿಸಿದ, ನಿಮ್ಮ ದಾಖಲೆಗಳಿಗೆ ಸಂಬಂಧಿಸಿದ ಒಂದು ಪ್ರಶ್ನೆ ಕೇಳಲಾಗುತ್ತದೆ. ಉತ್ತರಕ್ಕೆ ಮೂರು ಅವಕಾಶ ನೀಡಲಾಗುತ್ತದೆ. ಸರಿ ಉತ್ತರ ಬಳಿಕ ನಿಮ್ಮ ಟಿಕೆಟ್ ದರ ಎಷ್ಟಿತ್ತು (ಗರಿಷ್ಠ 10,000 ರೂಪಾಯಿ)ಅಷ್ಟು ರೀಫಂಡ್ ಆಗಲಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ರೀಫಂಡ್ ಆಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Guidelines for LPG Customers: ಬಿಗ್ ಅಪ್ ಡೇಟ್, ನಿಮ್ಮ ಮನೆಯಲ್ಲಿ LPG ಸಿಲಿಂಡರ್ ಇದ್ದರೆ ಆಗಸ್ಟ್ 16ರ ಡೆಡ್ಲೈನ್ ಮಿಸ್ ಮಾಡಿಕೊಳ್ಳಬೇಡಿ; ಕಟ್ ಆಗುತ್ತೆ ಸಬ್ಸಿಡಿ!
ಪ್ರಸ್ತುತ ಬಿಜೆಪಿಯಲ್ಲಿ ನಿಮ್ಮಿಷ್ಟದ ರಾಜಕಾರಣಿ ಯಾರು? ಸ್ಪೆಷಲ್‌ ಹೆಸರಿನ ಮೂಲಕ ಸರ್‌ಪ್ರೈಸ್‌ ನೀಡಿದ ರಾಹುಲ್‌ ಗಾಂಧಿ