
ನವದೆಹಲಿ (ನ.12) ದೆಹಲಿ ಕಾರು ಸ್ಫೋಟ ಪ್ರಕರಣದ ಹಿಂದೆ ಉಗ್ರರ ಕೈವಾಡ ಮಾತ್ರವಲ್ಲ, ಪಾಕಿಸ್ತಾನ ಪೋಷಿಸುತ್ತಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ಕೈವಾಡಗಳು ವ್ಯಕ್ತವಾಗುತ್ತಿದೆ. ಭಾರತದಲ್ಲೇ ಇದ್ದು, ಭಾರತೀಯರ ವಿರುದ್ಧವೇ ಬಾಂಬ್ ಇಡಲು ವೈದ್ಯರ ಸೋಗಿನಲ್ಲಿ ಉಗ್ರರು ಸಜ್ಜಾಗಿದ್ದಾರೆ ಅನ್ನೋ ಭಯಾನಕ ಮಾಹಿತಿಯೂ ಬಯಲಾಗಿದೆ. ಈ ಬೆಳವಣಿಗೆ ನಡುವೆ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆಗಳು ಬಂದಿವೆ. ಹಾರಾಟದ ವೇಳೆ ವಿಮಾನ ಸ್ಫೋಟಿಸುವ ಬೆದರಿಕೆ ಇಮೇಲ್‌ಗಳು ಬಂದಿದೆ. ಹೀಗಾಗಿ ದೆಹಲಿ-ಮುಂಬೈ ಸೇರಿದಂತೆ ಪ್ರಮುಖ 5 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಇಂಡಿಗೋ ವಿಮಾನ ಸಂಸ್ಥೆಗೆ ಇಂದು (ನ.12) ಇಮೇಲ್ ಮೂಲಕ ಬೆದರಿಕೆ ಬಂದಿದೆ. ಸಂಜೆ 3.40 ಹಾಗೂ 3.45ರ ಸುಮಾರಿನಲ್ಲಿ ಇಮೇಲ್ ಬಂದಿದೆ. ಇಮೇಲ್ ಗಮನಕ್ಕೆ ಬಂದ ತಕ್ಷಣವೇ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ದೆಹಲಿ , ಮುಂಬೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇತ್ತ ತನಿಖಾ ಎಜೆನ್ಸಿಳು ಇಮೇಲ್ ಮೂಲದ ತನಿಖೆ ಮಾಡುತ್ತಿದ್ದಾರೆ.
ದೆಹಲಿ ಕಾರು ಸ್ಫೋಟ ಪ್ರಕರಣದ ಬೆನ್ನಲ್ಲೇ ದೇಶದ ಪ್ರಮುಖ ನಗರ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಇದೀಗ ಸೋಮವಾರದಿಂದ ಸತತ ಬಾಂಬ್ ಬೆದರಿಕೆಗಳು ಬರುತ್ತಿರುವ ಕಾರಣ ದೆಹಲಿ, ಮುಂಬೈ, ಚೆನ್ನೈ, ತಿರುವನಂಪುರಂ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸದ್ಯ ಇಮೇಲ್ ಬೆದರಿಕೆ ಕುರಿತು ತನಿಖೆ ನಡೆಯುತ್ತಿದೆ, ಇದು ಹುಸಿ ಬಾಂಬ್ ಕರೆಯೇ ಅನ್ನೋದು ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ದೆಹಲಿ ಕಾರು ಸ್ಫೋಟದ ಬಳಿಕ ಪ್ರತಿ ಘಟನೆಯನ್ನು ಭದ್ರತಾ ಪಡೆಗಳು, ತನಿಖಾ ಎಜೆನ್ಸಿಗಳು ಗಂಭೀರವಾಗಿ ಪರಿಗಣಿಸಿದೆ.
ಸೋಮವಾರ ಮುಂಬೈ ವಾರಾಣಾಸಿ ಏರ್ ಇಂಡಿಯಾ ವಿಮಾನ ಹಾರಾಟದಲ್ಲಿ ಬಾಂಬ್ ಬೆದರಿಕೆ ಬಂದಿತ್ತು. ಹೀಗಾಗಿ ವಿಮಾನವನ್ನು ತುರ್ತು ಭೂಸ್ವರ್ಶ ಮಾಡಲಾಗಿತ್ತು. ಬಳಿಕ ವಿಮಾನವನ್ನು ಪ್ರತ್ಯೇಕ ಬೇಯಲ್ಲಿ ನಿಲ್ಲಿಸಿ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗಿತ್ತು. ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ. ಇದು ಹುಸಿ ಬಾಂಬ್ ಕರೆ ಎಂದು ಸ್ಪಷ್ಟವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ