ನವದೆಹಲಿ: ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ರಮೇಶಬಾಬು (Praggnanandhaa Rameshbabu) ಅವರು ಮತ್ತೆ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ಅವರನ್ನು ಸೋಲಿಸಿದ್ದಾರೆ. ನಿನ್ನೆ ಮೂರು ತಿಂಗಳ ನಂತರ ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರಾಪಿಡ್ ಚೆಸ್ ಸ್ಪರ್ಧೆಯ (Chessable Masters online rapid chess competition) 5ನೇ ಸುತ್ತಿನಲ್ಲಿ ಪ್ರಗ್ನಾನಂದ ಅವರು ಕಾರ್ಲ್‌ಸೆನ್‌ರನ್ನು ಸೋಲಿಸಿ ಅವರ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡರು. ಪ್ರಗ್ನಾನಂದ ಮತ್ತು ಕಾರ್ಲ್‌ಸನ್ ನಡುವಿನ ಪಂದ್ಯವು ಡ್ರಾದತ್ತ ಸಾಗಿತು. ಆದರೆ ನಂತರ ಕಾರ್ಲ್‌ಸನ್ ಅವರು ಮಾಡಿದ ದೊಡ್ಡ ತಪ್ಪಿನಿಂದಾಗಿ ಪಂದ್ಯವನ್ನು ಕಳೆದುಕೊಂಡರು. ವಿಶ್ವನಾಥನ್ ಆನಂದ್ ಮತ್ತು ಪಿ ಹರಿಕೃಷ್ಣ ನಂತರ ಚೆಸ್ ಆಟದಲ್ಲಿ ಕಾರ್ಲ್‌ಸನ್ ಅವರನ್ನು ಸೋಲಿಸಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಗ್ನಾನಂದ ಪಾತ್ರರಾಗಿದ್ದಾರೆ.
ಈ ಪಂದ್ಯದಲ್ಲಿ ಪ್ರಗ್ನಾನಂದ ಮತ್ತು ಕಾರ್ಲ್‌ಸೆನ್ (Carlsen) ನಡುವೆ ತೀವ್ರ ನಿಕಟವಾದ ಸ್ಪರ್ಧೆ ಇತ್ತು. ಆದರೆ ಕಾರ್ಲ್‌ಸನ್ ಅವರು ತಮ್ಮ 40ನೇ ನಡೆಯಲ್ಲಿ ಪಂದ್ಯವನ್ನು ಕಳೆದುಕೊಂಡರು. ಕಾರ್ಲ್‌ಸೆನ್ ತನ್ನ ಕುದುರೆಯನ್ನು ತಪ್ಪಾಗಿ ನಡೆಸಿದರು. ಈ ಪ್ರಮಾದವನ್ನು ಕೂಡಲೇ ಗಮನಿಸಿದ ಪ್ರಗ್ನಾನಂದ ಅವರು ಚೆಕ್ ಅನ್ನು ಘೋಷಿಸುವಲ್ಲಿ ಸಮಯ ವ್ಯರ್ಥ ಮಾಡಲಿಲ್ಲ. ಪಂದ್ಯದ ನಂತರ, ಪ್ರಗ್ನಾನಂದ ಅವರು ಈವೆಂಟ್‌ನಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದರು. ಆದಾಗ್ಯೂ ಈ 16ರ ಹರೆಯದ ಪ್ರಗ್ನಾನಂದಗೆ ತನ್ನ ಆಟದ ಗುಣಮಟ್ಟದ ಬಗ್ಗೆ ಸಂತೋಷವಾಗಿಲ್ಲ. ಅವರು ತಾನು ಇನ್ನಷ್ಟು ತೀಕ್ಷ್ಣವಾಗಬೇಕಿದೆ ಎಂದು ಹೇಳಿದ್ದಾರೆ.
Magnus Carlsen blunders and Praggnanandhaa beats the World Champion again! https://t.co/J2cgFmhKbT pic.twitter.com/mnvL1BbdVn
— chess24.com (@chess24com)ಇದಕ್ಕೂ ಮೊದಲು, ಪ್ರಗ್ನಾನಂದ ಅವರು ಈ ವರ್ಷದ ಫೆಬ್ರವರಿಯಲ್ಲಿ ಏರ್‌ಥಿಂಗ್ಸ್ ಮಾಸ್ಟರ್ಸ್‌ನಲ್ಲಿ (Airthings Masters) ಕಾರ್ಲ್‌ಸನ್ ಅವರನ್ನು ಸೋಲಿಸಿದ್ದರು. ಇನ್ನೊಂದು ಆನ್‌ಲೈನ್ ಚೆಸ್ ಸ್ಪರ್ಧೆಯಾದ ಏರ್‌ಥಿಂಗ್ಸ್ ಮಾಸ್ಟರ್ಸ್‌ನ 8ನೇ ಸುತ್ತಿನಲ್ಲಿ ಪ್ರಗ್ನಾನಂದ ಕಾರ್ಲ್‌ಸೆನ್‌ರನ್ನು ಸೋಲಿಸಿದ್ದರು. ಈ ಗೆಲುವಿನೊಂದಿಗೆ 2013ರಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಪಡೆದ ನಂತರ ಕಾರ್ಲ್‌ಸೆನ್‌ರನ್ನು ಚೆಸ್ ಆಟದಲ್ಲಿ ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಪ್ರಗ್ನಾನಂದ. ಜನವರಿ 2022ರಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ 2022 ರ ಮಾಸ್ಟರ್ಸ್ ವಿಭಾಗದಲ್ಲಿ ಪ್ರಗ್ನಾನಂದ ಅವರು ಆಂಡ್ರೆ ಎಸಿಪೆಂಕೊ (Andrey Esipenko), ವಿದಿತ್ ಗುಜರಾತಿ (Vidit Gujrathi)ಮತ್ತು ನಿಲ್ಸ್ ಗ್ರ್ಯಾಂಡ್ಲಿಯಸ್ (Nils Grandelius) ವಿರುದ್ಧ ಪಂದ್ಯಗಳನ್ನು ಗೆದ್ದು ಅಂತಿಮ ಸ್ಕೋರ್ 5.5 ಅಂಕಗಳೊಂದಿಗೆ ವಿಶ್ವಮಟ್ಟದಲ್ಲಿ 12ನೇ ಸ್ಥಾನ ಪಡೆದಿದ್ದರು.
ಅಪ್ಪನ ಸವಾಲು ಸ್ವೀಕರಿಸದೆಯೇ ವಿಶ್ವ ಚಾಂಪಿಯನ್ ಆದ ವಿಶ್ವನಾಥನ್ ಆನಂದ್!
ತಮಿಳುನಾಡಿನ ಚೆಸ್ ಪ್ರತಿಭೆ ಪ್ರಗ್ನಾನಂದ ಅವರು 2018 ರಲ್ಲಿ ಅಸ್ಕರ್ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಆ ಸಮಯದಲ್ಲಿ ಗ್ರ್ಯಾಂಡ್ ಮಾಸ್ಟರ್ ಪಟ್ಟವನ್ನು ಸಾಧಿಸಿದ ಎರಡನೇ ಕಿರಿಯ ವ್ಯಕ್ತಿಯಾಗಿದ್ದರು. ಆದರೆ ಪ್ರಸ್ತುತ ಅಭಿಮನ್ಯು ಮಿಶ್ರಾ (Abhimanyu Mishra), ಸೆರ್ಗೆಯ್ ಕರ್ಜಾಕಿನ್ (Sergey Karjakin) ಅವರಿಂದಾಗಿ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಎಲ್ಲವೂ ಸರಿಯಾಗಿಯೇ ಇರುವವರಿಗೆ ಈ 'ಯಶಸ್ವಿ' ಸ್ಫೂರ್ತಿ!
ಇದಕ್ಕೂ ಮೊದಲು ಪ್ರಗ್ನಾನಂದ್ 2013 ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ U-8 ಪ್ರಶಸ್ತಿಯನ್ನು ಗೆದ್ದಿದ್ದರು. ಇದು ಅವರಿಗೆ 7 ನೇ ವಯಸ್ಸಿನಲ್ಲಿ FIDE ಮಾಸ್ಟರ್ ಪ್ರಶಸ್ತಿಯನ್ನು ತಂದುಕೊಟ್ಟಿತು.