Operation Amistad: ವೆನಿಜುವೆಲಾದಲ್ಲಿ ಭಾರತದ 'ಆಪರೇಷನ್ ಅಮಿಸ್ಟಾಡ್'ಗೆ ಭಾರಿ ಮೆಚ್ಚುಗೆ!

Published : Jul 03, 2026, 02:44 PM IST
Indias Operation Amistad in Venezuela

ಸಾರಾಂಶ

ಭೂಕಂಪದಿಂದ ತತ್ತರಿಸಿದ ವೆನಿಜುವೆಲಾದಲ್ಲಿ ಭಾರತ 'ಆಪರೇಷನ್ ಅಮಿಸ್ಟಾಡ್' ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯು ಅಲ್ಲಿನ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Operation Amistad: ವೆನಿಜುವೆಲಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು ಲಕ್ಷಾಂತರ ಜನರು ಗಾಯಗೊಂಡರು ಇಷ್ಟೇ ಸಂಖ್ಯೆಯ ಜನರು ಕಟ್ಟಡಗಳಲ್ಲಿ ಸಿಲುಕಿದರು. ವಿಶ್ವದಲ್ಲಿ ಎಲ್ಲ ಭೂಕಂಪ, ಭೂಕುಸಿತ ಸಂಭವಿಸಿದರೂ ಅಲ್ಲೆಲ್ಲ ಸಂತ್ರಸ್ತರ ರಕ್ಷಣೆಗೆ ಭಾರತ ದಾವಿಸುತ್ತೆ. ಅದೇ ರೀತಿ ವೆನೆಜುವೆಲಾದಲ್ಲಿ ಭೂಕಂಪದಲ್ಲಿ ಸಂತ್ರಸ್ತರಿಗೆ ಭಾರತ ನಡೆಸುತ್ತಿರುವ ಮಾನವೀಯ ನೆರವಿನ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಕ್ಯಾರಕಾಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಭಾರತವು ವೆನಿಜುವೆಲಾದ ಜನರಿಗ ವೈದ್ಯಕೀಯ ಆರೈಕೆ ನೀಡುವುದನ್ನು ಮುಂದುವರಿಸಿದ್ದು, ಭಾರತದ ಈ ಕಾಳಜಿಯು ಭರವಸೆ ಮೂಡಿಸಿದೆ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿದೆ.

'Operation Amistad' ಗೆ ಎಲ್ಲೆಡೆ ಮೆಚ್ಚುಗೆ

ವೆನಿಜುವೆಲಾದಲ್ಲಿ ಭಾರತದ ಮಾನವೀಯ ನೆರವಿನ 'ಆಪರೇಷನ್ ಅಮಿಸ್ಟಾಡ್' ಕಾರ್ಯಾಚರಣೆಗೆ ವೆನೆಜುವೆಲಾ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ವೃತ್ತಿಪರತೆ, ಸಹಾಯ, ಸೇವೆಯ ಗುಣಮಟ್ಟವನ್ನು ಜನರು ಶ್ಲಾಘಿಸಿದ್ದಾರೆ ಎಂದು ರಾಯಭಾರ ಕಚೇರಿ 'X' ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ಪೋಸ್ಟ್‌ ಬರೆದುಕೊಂಡಿದ್ದು,'ಆಪರೇಷನ್ ಅಮಿಸ್ಟಾಡ್' ಎಂದರೆ ಕಾಳಜಿ, ಭರವಸೆ. ನಮ್ಮ ಅರ್ಮಿ ಫೀಲ್ಡ್ ಆಸ್ಪತ್ರೆಯು ಸಮರ್ಪಣೆ, ಸಹಾನುಭೂತಿಯಿಂದ ಭೂಕಂಪ ಪೀಡಿತ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ' ಎಂದು ಹೇಳಿದ್ದಾರೆ. 'ನೆರವಿನ ಹಸ್ತ, ಗುಣಪಡಿಸುವ ಸ್ಪರ್ಶ. ಸೇನಾ ಫೀಲ್ಡ್ ಆಸ್ಪತ್ರೆಯು ವೆನಿಜುವೆಲಾದ ಸಂತ್ರಸ್ತ ಜನರಿಗಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದೆ ಎಂದು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜುಲೈ 6ರಂದು ಸೂರ್ಯನಿಂದ ಅತ್ಯಂತ ದೂರ ಸರಿಯಲಿದೆ ಭೂಮಿ,ಈ ಘಟನೆಯಿಂದ ಆಗೋ ಪರಿಣಾಣವೇನು?
ಕಾನ್‌ಸ್ಟೇಬಲ್ ಪಿಸಿಕಲ್‌ ಟೆಸ್ಟ್‌ನಲ್ಲಿ ಮೃತರಾದರೆ, ಪರಿಹಾರ ಹೇಗೆ ಪಡೆಯುವುದು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!