ಶತ್ರುಗಳ ನಾಶಕ್ಕೆ ಮರಳುಗಾಡಿನ ಭೂಮಿಯೊಳಗೆ ಯೋಧರು: ಎದೆ ಝಲ್​ ಎನ್ನುವ ವಿಡಿಯೋ ವೈರಲ್​!

By Suchethana D  |  First Published Oct 8, 2024, 4:49 PM IST

ದೇಶದ ರಕ್ಷಣೆಗಾಗಿ  ಮರಳುಗಾಡಿನ ಭೂಮಿಯಲ್ಲಿ ಅವಿತುಕೊಳ್ಳುವ ಭಾರತೀಯ ಯೋಧರ ವಿಡಿಯೋ ವೈರಲ್​ ಆಗಿದ್ದು, ದೇಶಪ್ರೇಮಿಗಳಿಗೆ ಕಣ್ಣೀರು ತರುವಂತಿದೆ.
 
 


ಒಂದೆಡೆ ರಾಷ್ಟ್ರಕ್ಕಾಗಿ, ದೇಶದ ಜನರ ಹಿತಕ್ಕಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಅತ್ಯಂತ ಭಯಾನಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಯೋಧರು, ಇನ್ನೊಂದೆಡೆ ಖುರ್ಚಿಗಾಗಿ ಬೇರೆಯವರ ಪ್ರಾಣವನ್ನೂ ತೆಗೆಯಲು ಹೇಸದ ರಾಜಕಾರಣಿಗಳು... ಮತ್ತೊಂದೆಡೆ, ಯೋಧರನ್ನೇ ಪ್ರಶ್ನಿಸುತ್ತಾ, ಅವರ ತ್ಯಾಗ-ಬಲಿದಾನದ ಬಗ್ಗೆ  ಕುಹಕವಾಡುತ್ತ  ದೇಶದ ರಕ್ಷಣೆಯಲ್ಲಿಯೂ ರಾಜಕೀಯ ತಂದು ದೇಶದ ಮಾನವನ್ನೇ ಹರಾಜಿಗೆ ಇಡುವವರು, ಮಗದೊಂದೆಡೆ ಊಟ-ವಸತಿ ನೀಡುತ್ತಿರುವ ದೇಶವನ್ನೇ ಧ್ವಂಸ ಮಾಡಲು ಸ್ಕೆಚ್​ ಹಾಕುತ್ತಿರುವವರು....! ಒಂದೇ ದೇಶದಲ್ಲಿ ಎಷ್ಟೊಂದು ಬಗೆಯ ಜನರು...? ರಾಜಕೀಯಕ್ಕಾಗಿ ಏನೂ ಮಾಡಲು ಹೇಸದವರ ನಡುವೆಯೇ, ಭಾರತದ ರಕ್ಷಣೆಗೆ ಮುಂದಾಗಿರುವ ಯೋಧರ ಜೀವನಗಾಥೆಯ ಬಗ್ಗೆ ಇದಾಗಲೇ  ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇವೆ. ಆದರೆ ಮರಳುಗಾಡಿನಲ್ಲಿ ಕರ್ತವ್ಯನಿರತ ಯೋಧರ ಜೀವನ ಹೇಗಿರುತ್ತೆ ಗೊತ್ತಾ?

ಎದೆ ಝಲ್​ ಎನ್ನುವ ವಿಡಿಯೋ ಒಂದು ವೈರಲ್​ ಆಗಿದೆ. ಖ್ಯಾತ ಫುಡ್​ ವ್ಲಾಗರ್ ಕಾಮಿನಿ ಜಾನಿ ಅವರು ರಾಜಸ್ಥಾನದ ಮರಳುಗಾಡಿನಲ್ಲಿರುವ ಯೋಧರ ಕುರಿತು ವಿಡಿಯೋ ಮಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಯೋಧರ ತ್ಯಾಗ-ಬಲಿದಾನಕ್ಕೆ ದೇಶಪ್ರೇಮಿಗಳು ಕಣ್ಣೀರಾಗುತ್ತಿದ್ದಾರೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿಯೂ ದೇಶವನ್ನು ಕಾಪಾಡುವ ಯೋಧರ ಇಂಥ ವಿಡಿಯೋ ನಿಜಕ್ಕೂ ಕಲ್ಲೆದೆಯವರನ್ನೂ ಕರಗಿಸುವಂತಿದೆ.  ಹಿಮಪಾತ ಪ್ರದೇಶಗಳಲ್ಲಿ, ಕಲ್ಲು-ಬಂಡೆಗಳ ಮೇಲೆ ಯೋಧರು ಕರ್ತವ್ಯ ನಿರ್ವಹಿಸುವ ಶಾಕಿಂಗ್​ ಎನಿಸುವ ವಿಡಿಯೋಗಳು ಇದಾಗಲೇ ಸಾಕಷ್ಟು ವೈರಲ್​ ಆಗಿರುವ ನಡುವೆಯೇ ಈಗ ಭೂಮಿಯ ಒಳಗೆ ಯೋಧರು ಹೇಗೆ ವಾಸಿಸುತ್ತಾರೆ ಎನ್ನುವ ವಿಡಿಯೋ ಅನ್ನು ಕಾಮಿಯಾ ಮಾಡಿದ್ದಾರೆ.

Tap to resize

Latest Videos

undefined

ಫೇಸ್​ಬುಕ್​, ಇನ್​ಸ್ಟಾ, ಜಿ-ಮೇಲ್​... ಹೀಗೆ ಯಾವುದಾದ್ರೂ ಪಾಸ್​ವರ್ಡ್​ ಮರೆತುಹೋಗಿದ್ಯಾ? ಇಲ್ಲೇ ಇರತ್ತೆ ನೋಡಿ!

ಸೇನಾಪಡೆಯ ಅನುಮತಿಯ ಮೇರೆಗೆ ಈ ವಿಡಿಯೋ ಮಾಡಿರುವ ಕಾಮಿಯಾ, ಭೂಮಿಯಲ್ಲಿ ಅಡಗಿರುವ ಯೋಧರನ್ನು ಮಾತನಾಡಿಸಿದ್ದಾರೆ. ಮರಳುಗಾಡಿನ ಒಂದು ಬಹುದೊಡ್ಡ ಸಮಸ್ಯೆ ಎಂದರೆ ದೂರ ದೂರದವರೆಗೆ ಯಾವುದೇ ಮರಗಿಡಗಳು ಇಲ್ಲದ ಕಾರಣ, ಶತ್ರುಗಳು ಎಷ್ಟೇ ದೂರದಲ್ಲಿ ಇದ್ದರೂ ಅವರನ್ನು ಸುಲಭವಾಗಿ ಕಂಡುಹಿಡಿಯಬಹುದು ಹಾಗೂ ಅವರ ಮೇಲೆ ದಾಳಿ ಮಾಡಬಹುದು. ಇದೇ ಕಾರಣಕ್ಕೆ ಮರಳುಗಾಡಿನಲ್ಲಿ ಯೋಧರು ಭೂಮಿಯ ಒಳಗೆ ರಕ್ಷಣೆ ಪಡೆಯುವುದು ಅನಿವಾರ್ಯವಾಗುತ್ತದೆ. ಕಾಡು-ಮೇಡುಗಳಲ್ಲಿ ಅಲ್ಲಿಯದ್ದೇ ಬಣ್ಣದ ಅಂದರೆ ಹಸಿರಿನ ಬಟ್ಟೆ ತೊಟ್ಟು ತಾವು ಕಾಣದಂತೆ ಸೈನಿಕರು ಅಡಗಿ ಕುಳಿತರೆ, ಮರಳುಗಾಡಿನಲ್ಲಿ ಮರಳಿನ ವೇಷದಲ್ಲಿ ಅವರು ಅಡಗುವುದು ಅನಿವಾರ್ಯ.

ಭೂಮಿಯ ಒಳಗೆ ಹೇಗೆ ಎಲ್ಲಾ ವ್ಯವಸ್ಥೆ ತಮಗೆ ನೀಡಲಾಗುತ್ತದೆ ಎಂಬ ಬಗ್ಗೆ ಯೋಧರೊಬ್ಬರು ವಿವರಿಸಿದ್ದಾರೆ. ಅಲ್ಲಿಯೇ ಆಹಾರ, ನೀರು ಎಲ್ಲ ವ್ಯವಸ್ಥೆ ತಮಗೆ ಇರುತ್ತದೆ ಎಂದು ತಿಳಿಸಿದ್ದಾರೆ.   ಮರಳುಗಾಡಿನ ರೂಪದಲ್ಲಿಯೇ ನಿಂತರೂ, ಗನ್​ ಹಿಡಿದುಕೊಂಡಿದ್ದರೂ ಯಾರೂ ಸುಲಭದಲ್ಲಿ ಅವರನ್ನು ಪತ್ತೆ ಹಚ್ಚುವುದು ಕಷ್ಟವೇ, ಅಂಥ ರೂಪದಲ್ಲಿ ಪ್ರತಿದಿನವೂ ದೇಶರಕ್ಷಣೆಗಾಗಿ ಇವರು ಸಿದ್ಧರಿರುತ್ತಾರೆ. ಆದರೆ ಈ ವಿಡಿಯೋ ವೈರಲ್​ ಮಾಡಬಾರದಿತ್ತು, ಇದು ನಮ್ಮ ಯೋಧರಿಗೆ ಅಪಾಯ ಎಂದೇ ಎಲ್ಲರೂ ಕಮೆಂಟ್​ ಬಾಕ್ಸ್​ನಲ್ಲಿ ತಿಳಿಸಿದ್ದಾರೆ. ಇದಕ್ಕಾಗಿಯೇ ಕಾಮಿಯಾ ಅವರು ಶೀರ್ಷಿಕೆಯಲ್ಲಿಯೇ ಪೂರ್ವಾನುಪತಿ ಪಡೆದೇ ಇದರ ವಿಡಿಯೋ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ. 

ಶೇಕ್​ ಹ್ಯಾಂಡ್‌ ಮಾಡುವುದೂ ಹರಾಮ್‌? ಕೈ ಮುಂದೆ ಮಾಡಿದ ರಾಜಕುಮಾರನಿಂದ ಬಿಸಿಬಿಸಿ ಚರ್ಚೆ ಶುರು!
 

click me!