ವಿಶೇಷ ರೀತಿ ಹೊಸ ವರ್ಷ ಸ್ವಾಗತಿಸಿದ ಭಾರತೀಯ ರೈಲ್ವೇ, ಪ್ರಯಾಣಿಕರಿಂದ ಭರ್ಜರಿ ಚಿಯರ್‌ಅಪ್

By Chethan Kumar  |  First Published Jan 1, 2025, 2:57 PM IST

ಹೊಸ ವರ್ಷವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಸಂಭ್ರಮಾಚರಣೆ, ಪಾರ್ಟಿ ಸೇರಿದಂತೆ ಹಲವು ರೂಪದಲ್ಲಿ ಹೊಸ ವರ್ಷ ಬರಮಾಡಿಕೊಳ್ಳಲಾಗಿದೆ. ಭಾರತೀಯ ರೈಲ್ವೇ ಹೊಸ ವರ್ಷವನ್ನು ಸ್ವಾಗತಿಸಿದ್ದು ಹೇಗೆ? ಈ ಸಂಭ್ರಮದಲ್ಲಿ ನೀವಿದ್ದೀರಾ?
 


ಮುಂಬೈ(ಜ.01) ಹೊಸ ವರ್ಷ ಆರಂಭಗೊಂಡಿದೆ. ಹಲವರು ಅದ್ಧೂರಿಯಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಬಹುತೇಕರು ಪಾರ್ಟಿ, ಮಸ್ತಿ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ದೇವಸ್ಥಾನ ಭೇಟಿ ಸೇರಿದಂತೆ ಶುಭ ಕಾರ್ಯಗಳ ಮೂಲಕ ನ್ಯೂ ಇಯರ್ ಆರಂಭಿಸಿದ್ದಾರೆ. ಇನ್ನು ಭಾರತೀಯ ರೈಲ್ವೇ ಕೂಡ ಹೊಸ ವರ್ಷವನ್ನು ತನ್ನದೇ ಆದ ರೀತಿಯಲ್ಲಿ ಸ್ವಾಗತಿಸಿದೆ. ಭಾರತೀಯ ರೈಲ್ವೇಯ ಹೊಸ ವರ್ಷಾಚರಣೆ ಇದೀಗ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಭಾರತೀಯ ರೈಲ್ವೇ ಹೊಸ ವರ್ಷವನ್ನು ಸ್ವಾಗತ ಮಾಡಿದ್ದು ಹೇಗೆ?

ಮುಂಬೈನ ಛತ್ರಪತಿ ಶಿವಾಜಿ ರೈಲು ನಿಲ್ದಾಣದಲ್ಲಿ ಭಾರತೀಯ ರೈಲ್ವೇ ವಿಶೇಷವಾಗಿ ಹೊಸ ವರ್ಷವನ್ನು ಸ್ವಾಗತಿಸಿದೆ.  ರೈಲು ನಿಲ್ದಾಣಧಲ್ಲಿರುವ ಗಡಿಯಾರದಲ್ಲಿ ಹೊಸ ವರ್ಷಕ್ಕೆ ಕೆಲವೆ ನಿಮಿಷಗಳು ಬಾಕಿ ಇರುವಾಗ ನೆರೆದಿದ್ದ ಪ್ರಯಾಣಿಕರ  ಕೌಂಟ್‌ಡೌನ್ ಶುರುವಾಗಿತ್ತು. 11.59 ಕಳೆದ 00.00ಕ್ಕೆ ಕಾಲಿಡುತ್ತಿದ್ದಂತೆ ಅಂದರೆ 2025ರ ಜನವರಿ 1ನೇ ದಿನಾಂಕಕ್ಕೆ ಕಾಲಿಡುತ್ತಿದ್ದಂತೆ ನಿಲ್ಲಿಸಿದ್ದ ರೈಲಿನ ಲೋಕೋಪೈಲೆಟ್ ಹಾರ್ನ್ ಶಬ್ದ ಮಾಡಿದ್ದಾರೆ. ಎಲ್ಲಾ ರೈಲುಗಳು ಒಂದೇ ಬಾರಿ ಹಾರ್ನ್ ಶಬ್ದ ಮಾಡಿದೆ. 

Tap to resize

Latest Videos

ಕೇವಲ 45 ಪೈಸೆಗೆ 10 ಲಕ್ಷ ರೂಪಾಯಿ ವಿಮೆ, ಇದು ಭಾರತದ ಅತ್ಯಂತ ಅಗ್ಗದ ಇನ್ಶೂರೆನ್ಸ್!

ರೈಲು ನಿಲ್ದಾಣದಲ್ಲಿದ್ದ ಎಲ್ಲಾ ರೈಲುಗಳು ವಿಶೇಷ ಹಾರ್ನ್ ಶಬ್ದದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದೆ. ಈ ವೇಳೆ ನೆರೆದಿದ್ದ ಪ್ರಯಾಣಿಕರು ಭಾರಿ ಶಿಳ್ಳೆ, ಚಪ್ಪಾಳೆಗಳ ಮೂಲಕ ಹುರಿದುಂಬಿಸಿದ್ದಾರೆ. ರೈಲು ನಿಲ್ದಾಣದಲ್ಲಿ ಕಿಕ್ಕಿರಿದು ಪ್ರಯಾಣಿಕರು ತುಂಬಿದ್ದರು. ವಿಶೇಷ ಹೊಸ ವರ್ಷಾಚರಣೆಗೆ ಪ್ರಯಾಣಿಕರು ಪುಳಕಿತರಾಗಿದ್ದಾರೆ. ರೈಲು ನಿಲ್ದಾಣದಲ್ಲೇ ಹ್ಯಾಪಿ ನ್ಯೂ ಇಯರ್ ಶುಭಾಶಯಗಳು ಮೊಳಗಿದೆ. 

ಭಾರತೀಯ ರೈಲ್ವೇಯ ಈ ಹೊಸ ವಿಧಾನದ ಹೊಸ ವರ್ಷಾಚರಣೆ ರೈಲು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ರೈಲು ನಿಲ್ಲಿಸಿದ ಬಳಿಕ ಹಾರ್ನ್ ಶಬ್ದ ಮಾಡುವುದಿಲ್ಲ. ಪ್ರಮುಖವಾಗಿ ರೈಲ್ವೇ ಕ್ರಾಸಿಂಗ್ ಸೇರಿದಂತೆ ಕೆಲ ಪ್ರಮುಖ ಪ್ರದೇಶಗಳು, ಟ್ರಾಕ್‌ಗಳಲ್ಲಿ ಮಾತ್ರ ರೈಲು ಹಾರ್ನ್ ಬಳಕೆ ಮಾಡಲಾಗುತ್ತದೆ. ರೈಲು ಹಾರ್ನ್ ಶಬ್ಧ ಪ್ರಮಾಣ ಹೆಚ್ಚಿರುವ ಕಾರಣ ಎಲ್ಲೆಂದರಲ್ಲಿ ಹಾರ್ನ್ ಬಳಕೆ ಮಾಡುವಂತಿಲ್ಲ. ಹೀಗಾಗಿ ರೈಲು ನಿಲ್ದಾಣದಲ್ಲಿ ರೈಲು ನಿಂತ ಬಳಿಕ ಹಾರ್ನ್ ಬಳಸುವುದಿಲ್ಲ. ಆದರೆ ಹೊಸ ವರ್ಷದ ವಿಶೇಷ ಆಚರಣೆ ಸಲುವಾಗಿ ಭಾರತೀಯ ರೈಲ್ವೇಯ ಲೋಕೋಪೈಲೆಟ್ ಹೊಸ ವಿಧಾನದ ಮೂಲಕ ಹೊಸ ವರ್ಷ ಬರಮಾಡಿಕೊಂಡಿದ್ದು ಮಾತ್ರವಲ್ಲ, ಪ್ರಯಾಣಿಕರ ಮುಖದಲ್ಲಿ ನಗು ತರಿಸಿದ್ದಾರೆ.

 

"Pure Goosebumps" Indian Railways Welcoming 2025 in Style ❤️ pic.twitter.com/SmvfkeOvXi

— Trains of India (@trainwalebhaiya)

 

ಟ್ರೈನ್ಸ್ ಆಫ್ ಇಂಡಿಯಾ ಎಕ್ಸ್ ಖಾತೆಯಲ್ಲಿ ಈ ಹೊಸ ವರ್ಷಾಚರಣೆ ವೀಡಿಯೋ ಹಂಚಿಕೊಂಡಿದೆ. ಭಾರತೀಯ ರೈಲ್ವೇಯ ಹೊಸ ವರ್ಷಾಚರಣೆ ವೀಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ಭಾರತೀಯ ರೈಲ್ವೇಯ ಹೊಸ ವರ್ಷಾಚರಣೆ, ಇದಕ್ಕಿಂತ ಉತ್ತಮವಾಗಿ ಸಂಭ್ರಮಿಸಲು ಸಾಧ್ಯವಿಲ್ಲ. ರೈಲ್ವೇಯ ಕ್ರಿಯೆಟಿವಿಟಿಗೆ ನಮನಗಳು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದು ರೈಲ್ವೇ ಪ್ರಯಾಣಿಕರ ಉತ್ತಮ ಹೊಸ ವರ್ಷಾಚರಣೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದರ ನಡುವೆ ವಿರೋಧಗಳು ವ್ಯಕ್ತವಾಗಿದೆ. ಇಷ್ಟು ಶಬ್ದ ಮಾಡಿದ್ದೇಕೆ? ಇದು ಯಾವ ರೀತಿ ಸಂಭ್ರಮಾಚರಣೆ, ಇದರ ಅವಶ್ಯಕತೆ ಏನಿತ್ತು ಎಂದು ಕೆಲವರು ಪ್ರಶ್ನಿಸಿದ್ದಾರೆ.

ಹೊಸ ವರ್ಷ ಆಚರಿಸಲೇಬೇಕು ಛಲ ಯಾಕೆ? ಪ್ರಯಾಣಿಕರಿಗೆ ಅನಾನುಕೂಲ ಮಾಡಲಾಗಿದೆ. ರೈಲು ಸಮಯಗಳು ವಿಳಂಬವಾಗಿದೆ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಭಾರತೀಯ ರೈಲ್ವೇ ಹೊಸ ವರ್ಷವನ್ನು ತನ್ನದೇ ಆದ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಇತ್ತ ಬೆಂಗಳೂರಿಗರು ಅದ್ಧೂರಿ ಪಾರ್ಟಿ, ಮಸ್ತಿ ಸಂಭ್ರಮಾಚರಣೆ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. 

ಹೊಸ ವರ್ಷದ ಆರಂಭದಲ್ಲೇ 5 ಹೊಸ ರೈಲು ಸೇವೆ ಆರಂಭ, ಯಾವ ಮಾರ್ಗದಲ್ಲಿ ಸಂಚಾರ?

 

click me!