
ಕೋಲ್ಕತಾ(ಏ.14): ಕೊರೋನಾ ವೈರಸ್ ಕಾರಣ ಹೇರಲಾಗಿರುವ ಲಾಕ್‌ಡೌನ್ ಸಮಾಜದ ಕೆಲವು ವರ್ಗಗಳ ಎರಡು ತುತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಸೃಷ್ಟಿಮಾಡಿದೆ. ಇದಕ್ಕೆ ಪುರೋಹಿತರೂ ಹೊರತಲ್ಲ.
ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ಸಮಾರಂಭಗಳು, ಪೂಜೆ ಪುನಸ್ಕಾರ ಕಾರ್ಯಕ್ರಮಗಳನ್ನೇ ನಂಬಿಕೊಂಡು ಅದರಿಂದ ಬರುತ್ತಿದ್ದ ದಕ್ಷಿಣೆಯ ಮೇಲೆಯೇ ಜೀವನ ನಡೆಸುತ್ತಿದ್ದ ಸುಮಾರು 2 ಲಕ್ಷ ಪುರೋಹಿತರಿಗೆ ಈಗ ಲಾಕ್‌ಡೌನ್ ಕಾರಣ ಕೆಲಸ ಇಲ್ಲದಂತಾಗಿದೆ.
ಪ್ರಧಾನಿಗಳಿಗೆ ನಮ್ಮ ಬೆಂಬಲ ಎಂದ ದೇವೇಗೌಡ್ರು, ಆದ್ರೂ ಮೋದಿ ಮೇಲೆ ಮುನಿಸಿಕೊಂಡ್ರು..!
‘ಜನರು ಮದುವೆ, ಮುಂಜಿ, ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ದೇವಸ್ಥಾನಗಳಲ್ಲಿ ಕೇವಲ ಪುರೋಹಿತರು ಪೂಜೆ ಮಾಡಿ ಹೋಗುತ್ತಿದ್ದು, ಭಕ್ತರಿಗೆ ಪ್ರವೇಶ ಇಲ್ಲವಾಗಿದೆ ಅಥವಾ ಕೊರೋನಾಗೆ ಹೆದರಿ ಭಕ್ತರು ದೇಗುಲಗಳಿಗೆ ಬರುತ್ತಿಲ್ಲ. ಹೀಗಾಗಿ ಧಾರ್ಮಿಕ ಆಚರಣೆಗಳನ್ನೇ ಆಧರಿಸಿ ಜೀವನ ನಡೆಸುತ್ತಿದ್ದ ಪುರೋಹಿತರಿಗೆ ಈಗ ಆದಾಯ ನಿಂತು ಹೋಗಿದೆ. ಹೀಗಾಗಿ 2 ಲಕ್ಷ ಅರ್ಚಕರ ಬದುಕೇ ದುಸ್ತರವಾಗಿದೆ’ ಎಂದು ಪ.ಬಂಗಾಳ ಸನಾತನ ಬ್ರಾಹ್ಮಣ ಟ್ರಸ್ಟ್ ಆತಂಕ ವ್ಯಕ್ತಪಡಿಸಿದೆ.
ಹೀಗಾಗಿ ಈ ಸಂದರ್ಭದಲ್ಲಿ ಸಹಾಯ ಮಾಡಬೇಕು ಎಂದು ಕೋರಿ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆಯಲು ಟ್ರಸ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ