ಭಾರತೀಯ ರೈಲ್ವೇ ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇದೀಗ ಪ್ರಮುಖ ರೈಲು ನಿಲ್ದಾಣಗಳಲ್ಲಿ ಆಹಾರ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಕೇವಲ 20 ರೂಪಾಯಿಂದ ಶಚಿ ಹಾಗೂ ರುಚಿಯಾದ ಆಹಾರವನ್ನು ಭಾರತೀಯ ರೈಲ್ವೇ ಒದಗಿಸಲಿದೆ.
ನವದೆಹಲಿ(ಏ.25) ಭಾರತೀಯರ ರೈಲ್ವೇಯಲ್ಲಿ ಮಹತ್ವದ ಬದಲಾವಣೆಯಾಗಿದೆ. ವಂದೇ ಭಾರತ್ ರೈಲು ಸೇರಿದಂತೆ ರೈಲು ಅಧುನಿಕರಣ, ವಿದ್ಯುತ್ತೀಕರಣ, ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವಿಕೆ, ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಹಲವು ಮಹತ್ತರ ಬದಾಲಾವಣೆಗಳಾಗಿದೆ.ಇದೀಗ ಪ್ರಯಾಣಿಕರಿಗೆ ಕೇವಲ 20 ರೂಪಾಯಿಯಲ್ಲಿ ಹಲವು ಬಗೆಯ ಶುಚಿ ಹಾಗೂ ರುಚಿಯಾಗ ಆಹಾರವನ್ನು ರೈಲ್ವೇ ಒದಗಿಸಲಿದೆ. ದೇಶದ ಪ್ರಮುಖ ನಿಲ್ದಾಣಗಲ್ಲಿ ಈ ಆಹಾರ ಕೇಂದ್ರಗಳನ್ನು ಭಾರತೀಯ ಭಾರತೀಯ ರೈಲ್ವೇ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ(IRCTC) ಈ ಸೇವೆ ಒದಗಿಸಲಿದೆ.
ಮೊದಲ ಹಂತದಲ್ಲಿ ದೇಶದ ಪ್ರಮುಖ 100 ರೈಲು ನಿಲ್ದಾಣಗಳಲ್ಲಿ 150ಕ್ಕೂ ಹೆಚ್ಚು ಆಹಾರ ಕೇಂದ್ರಗಳನ್ನು ತೆರೆಯಲಿದೆ. ಈ ಆಹಾರ ಕೇಂದ್ರಗಳಲ್ಲಿ ರೈಲ್ವೇ ಪ್ರಯಾಣಿಕರು ಕೇವಲ 20 ರೂಪಾಯಿಯಲ್ಲಿ ಹೊಟ್ಟೆ ತುಂಬಾ ಆಹಾರ ಸವಿಯಲು ಸಾಧ್ಯವಿದೆ. ವೆಸ್ಟರ್ನ್ ರೈಲ್ವೇ ವಕ್ತಾರ ಸುಮಿತ್ ಠಾಕೂರ್ ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಯಾಣಿಕರಿಗೆ ಅನೂಕೂಲವಾಗುವ ರೀತಿಯಲ್ಲಿ ಕೈಗೆಟುಕವ ದರದಲ್ಲಿ ಆಹಾರ ಸೇವೆಯನ್ನು IRCTC ಒದಗಿಸಲಿದೆ ಎಂದಿದ್ದಾರೆ.
ಟಿಕೆಟ್ ವಿಷ್ಯದಲ್ಲಿ ಈ ತಪ್ಪು ಮಾಡಿದ್ರೆ ದಂಡ ವಿಧಿಸುತ್ತೆ ರೈಲ್ವೆ
ರೈಲು ನಿಲ್ದಾಣದಲ್ಲಿನ ಪ್ಲಾಟ್‌ಫಾರ್ಮ್‌ಗಳಲ್ಲಿ ಸೆಕೆಂಡ್ ಕ್ಲಾಸ್ ಕೋಚ್ ನಿಲುಗಡೆ ಜಾಗಗಳಲ್ಲಿ ಈ ಆಹಾರ ಕೇಂದ್ರಗಳನ್ನು ಹೆಚ್ಚಾಗಿ ಸ್ಥಾಪಿಸಲಾಗಿದೆ. ಈ ಆಹಾರ ಕೇಂದ್ರಗಳಲ್ಲಿ ಹಲವು ಖಾದ್ಯಗಳನ್ನು ನೀಡಾಗುತ್ತಿದೆ. ಕೇವಲ 20 ರೂಪಾಯಿಯಲ್ಲಿ ಪ್ರಯಾಣಿಕನೊಬ್ಬ ಹೊಟ್ಟೆ ತುಂಬಾ ಆಹಾರ ಸವಿಯಬಹುದು. 20 ರೂಪಾಯಿಯಿಂದ ಆಹಾರದ ಬೆಲೆ ಆರಂಭಗೊಳ್ಳುತ್ತಿದೆ. ಮಧ್ಯಾಹ್ನದ ಊಟ ಕೇವಲ 20 ರೂಪಾಯಲ್ಲಿ ಲಭ್ಯವಿದೆ. ಇನ್ನು ಉಪಾಹರಗಳು ಬೆಲೆ ಗರಿಷ್ಠ 50 ರೂಪಾಯಿ ಎಂದು ಸುಮಿತ್ ಠಾಕೂರ್ ಹೇಳಿದ್ದಾರೆ.
IRCTC ಅಗ್ಗದ ಬೆಲೆಯ ಆಹಾರ ಕೇಂದ್ರಗಳಲ್ಲಿನ ಖಾದ್ಯಗಳು ಶುಚಿಯಾಗಿ, ರುಚಿಯಾಗಿರಲಿದೆ. ಹೈಜಿನಿಕ್‌ನಲ್ಲಿ ಯಾವುದೇ ರಾಜಿ ಇಲ್ಲ. ಈ ಕುರಿತು ವಿಶೇಷ ಗಮನ ಹರಿಸಲಾಗಿದೆ ಎಂದು ಸುಮಿತ್ ಠಾಕೂರ್ ಹೇಳಿದ್ದಾರೆ.
ಹಿರಿಯ ನಾಗರಿಕರ ಟಿಕೆಟ್ ವಿನಾಯ್ತಿ ರದ್ದು ಬಳಿಕ ರೈಲ್ವೆಗೆ ₹5800 ಕೋಟಿ ಹೆಚ್ಚು ಆದಾಯ
2023ರಲ್ಲಿ IRCTC ಕೈಗೆಟುಕುವ ಬೆಲೆಯಲ್ಲಿ ಪ್ರಯಾಣಿಕರಿಗೆ ಆಹಾರ ಕೇಂದ್ರಗಳನ್ನು ಸ್ಥಾಪಿಸಿತ್ತು. ಆರಂಭಿಕ ಹಂತದಲ್ಲಿ 51 ರೈಲು ನಿಲ್ದಾಣಗಳಲ್ಲಿ ಈ ಸೇವೆ ಒದಗಿಸಲಾಗಿತ್ತು. ಈ ಸೇವೆಯ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೇ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಹೀಗಾಗಿ ಇದೀಗ ಯೋಜನೆಯನ್ನು 100 ನಿಲ್ದಾಣಕ್ಕೆ ವಿಸ್ತರಿಸಲಾಗುತ್ತಿದೆ. 2025ರಲ್ಲಿ ಬಹುತೇಕ ಎಲ್ಲಾ ರೈಲು ನಿಲ್ದಾಣಗಳಲ್ಲಿ ಈ ಆಹಾರ ಕೌಂಟರ್ ವಿಸ್ತರಣೆಯಾಗಲಿದೆ ಎಂದು ಸುಮಿತ್ ಠಾಕೂರ್ ಹೇಳಿದ್ದಾರೆ.