ದಿಲ್ಲಿ ಅಬಕಾರಿ ಹಗರಣ : ಸಾಕ್ಷ್ಯ ನಾಶಕ್ಕಾಗಿ ಕೇಜ್ರಿಯಿಂದ 173 ಮೊಬೈಲ್ ಫೋನ್ ನಾಶ ?

By Kannadaprabha NewsFirst Published Apr 25, 2024, 11:32 AM IST
Highlights

ದಿಲ್ಲಿ ಅಬಕಾರಿ ಹಗರಣದ ಆರೋಪದಡಿ ತಿಹಾರ್‌ ಜೈಲಿನಲ್ಲಿರುವ ಅರವಿಂದ್ ಕೇಜ್ರವಾಲ್ ತಮ್ಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಬೆನ್ನಲ್ಲೇ, ಜಾರಿ ನಿರ್ದೇಶಾನಲಯದ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ವಿರುದ್ಧ ಕೋರ್ಟ್‌ಗೆ  ಅಫಿಡವಿಟ್ ಸಲ್ಲಿಸಿದ್ದಾರೆ. 

ನವದೆಹಲಿ: ದಿಲ್ಲಿ ಅಬಕಾರಿ ಹಗರಣದ ಆರೋಪದಡಿ ತಿಹಾರ್‌ ಜೈಲಿನಲ್ಲಿರುವ ಅರವಿಂದ್ ಕೇಜ್ರವಾಲ್ ತಮ್ಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಬೆನ್ನಲ್ಲೇ, ಜಾರಿ ನಿರ್ದೇಶಾನಲಯದ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ವಿರುದ್ಧ ಕೋರ್ಟ್‌ಗೆ  ಅಫಿಡವಿಟ್ ಸಲ್ಲಿಸಿದ್ದಾರೆ.  ಈ ಅಫಿಡವಿಟ್‌ನಲ್ಲಿ 173 ಮೊಬೈಲ್ ಫೋನ್‌ಗಳನ್ನು ನಾಶಪಡಿಸುವ ಮೂಲಕ ಆಪ್ ನಾಯಕ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆಂದು ಇಡಿ ಆರೋಪ ಮಾಡಿದೆ.

ಮೊಬೈಲ್ ಹಾಳು ಮಾಡಿ ಸಾಕ್ಷ್ಯ ನಾಶಕ್ಕೆ ಪ್ರಯತ್ನ?:
ದೆಹಲಿ ಸಿಎಂ ವಿರುದ್ದ ಅಫಿಡವಿಟ್‌ನಲ್ಲಿ ಹಲವು ಆರೋಪ ಮಾಡಿರುವ ಇಡಿ, 'ಅರವಿಂದ್ ಕೇಜ್ರವಾಲ್ ಅವರನ್ನು ದೀರ್ಘಾವಧಿ ಹಗರಣದಲ್ಲಿ ಬಂಧನ ಮಾಡಲಾಗಿದೆ. ಆದರೆ ಈ ವೇಳೆಯಲ್ಲಿ ಕೇಜ್ರಿವಾಲ್ ದೊಡ್ಡ ಪ್ರಮಾಣದಲ್ಲಿ ಸಾಕ್ಷ್ಯ ನಾಶಪಡಿಸಿದ್ದಾರೆ. ಈ
ಅಕ್ರಮವನ್ನು ಎಸಗುವ ಸಮಯದಲ್ಲಿ ಸಿಕ್ಕಿ ಬೀಳಬಾರದು. ಹಗರಣದ ಬಗ್ಗೆ ಯಾವುದೇ ಸುಳಿವು ಸಿಗಬಾರದು ಎನ್ನುವ ಕಾರಣಕ್ಕೆ ಸುಮಾರು 170 ಮೊಬೈಲ್ ಫೋನ್ ಗಳನ್ನು ನಾಶಪಡಿಸಿದ್ದರು. 

ಈ ವಿಚಾರ ದೃಢಪಟ್ಟ ಕಾರಣಕ್ಕಾಗಿ ಅರವಿಂದ್ ಕೇಜ್ರವಾಲ್ ಅವರನ್ನುಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆರವಿಂದ್ ಕೇಜ್ರವಾಲ್ ಅವರನ್ನು ಬಂಧಿಸುವುದಕ್ಕೂ ಮುನ್ನ ಅವರಿಗೆ 9 ಸಲ ಸಮನ್ಸ್ ನೀಡಲಾಗಿತ್ತು. ಆದರೆ ಪ್ರತಿ ಬಾರಿಯೂ ಅವರು ನ್ಯಾಯಾಲಯಕ್ಕೆ ಹಾಜರಾಗದೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ಒತ್ತಿ ಹೇಳಿರುವ ಇಡಿ, ದೆಹಲಿ ಸಿಎಂ ಉಚ್ಚನ್ಯಾಯಾಲಯದಲ್ಲಿ ಬಂಧನದಿಂದ ರಕ್ಷಣೆ ಪಡೆಯುವಲ್ಲಿ ವಿಫಲವಾದ ಕಾರಣಕ್ಕಾಗಿ ಅವರನ್ನು ಬಂಧಿಸಿದ್ದೇವೆ ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಪ್ರಸ್ತಾಪಿಸಿದೆ.

ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೇಮಂತ್ ಸೊರೇನ್ ಮೊರೆ
ನವದೆಹಲಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್, ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸಿದ ಕ್ರಮ ಪ್ರಶ್ನಿಸಿ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ತಮ್ಮ ಬಂಧನ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದು ಅರ್ಜಿ ವಿಚಾರಣೆ ಮಾಡುವಲ್ಲಿ ಹೈಕೋರ್ಟ್ ತಡ ಮಾಡುತ್ತಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಸೊರೇನ್ ಹೇಳಿದ್ದಾರೆ. ಕಳೆದ ಜ.31 ರಂದು  ಅಕ್ರಮ ಹಣ ವರ್ಗಾವಣೆ ಸಂಬಂಧ ಸೊರೇನ್ ಅವರನ್ನು ಇ.ಡಿ. ಬಂಧಿಸಿತ್ತು. ಈ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು.

ಸಹಕಾರ ಹಗರಣ: ಸುನೇತ್ರಾ ಪವಾ‌ರ್ ಪಾರು

ಮುಂಬೈ: ಎನ್‌ಸಿಪಿ ನಾಯಕ ಅಜಿತ್ ಪವಾರ್ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಸೇರಿದ ಬೆನ್ನಲ್ಲೇ ಅವರ ಪತ್ನಿ ಸುನೇತ್ರಾ ಸೇರಿ ಪಕ್ಷದ ಹಲವು ನಾಯಕರಿಗೆ ಮಹಾರಾಷ್ಟ್ರ ಆರ್ಥಿಕ ಅಪರಾಧ ದಳವು 25 ಸಾವಿರ ಕೋಟಿ ರು. ಸಹಕಾರ ಬ್ಯಾಂಕ್ ಹಗರಣದಲ್ಲಿ ದೋಷಮುಕ್ತಗೊಳಿಸಿದೆ. ಸುನೇತ್ರಾ ಅವರಿಗೆ ಸೇರಿದ ಜಾರಂಡೇಶ್ವರ ಸಹಕಾರಿ ಶುಗರ್ ಮಿಲ್ ಗುರು ಕಮೋಡಿಟಿಯಿಂದ ಅತ್ಯಲ್ಪ ಕಡಿಮೆ ಬಾಡಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧ ದಳ 2020ರಲ್ಲಿ ಪ್ರಕರಣ ದಾಖಲಿಸಿತ್ತು. ಇತ್ತೀಚೆಗೆ ಈ ಎರಡು ಸಂಸ್ಥೆಗಳ ನಡುವೆ ಯಾವುದೇ ಅನಧಿಕೃತ ಆರ್ಥಿಕ ವಹಿವಾಟು ನಡೆದಿಲ್ಲ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಕ್ಲೀನ್‌ಚಿಟ್ ನೀಡಿದೆ. ಇದರ ಜೊತೆಗೆ ಅವರ ಸೋದರಳಿಯ ರೋಹನ್ ಪವಾರ್ ಹಾಗೂ ಪಕ್ಷದ ಹಿರಿಯ ನಾಯಕ ಪ್ರಜಕ್ತ್ ತಾನ್‌ಪುರೆ ಅವರಿಗೂ ಸಹಕಾರ ಬ್ಯಾಂಕ್ ಪ್ರಕರಣದಲ್ಲಿ ಕ್ಲೀನ್‌ ಚಿಟ್ ನೀಡಿದೆ.
 

click me!