ಸಂಪೂರ್ಣ ಉಚಿತ ಚಿಕಿತ್ಸೆಯ UMID ಆರೋಗ್ಯ ಕಾರ್ಡ್ ಯೋಜನೆ ಜಾರಿಗೊಳಿಸಿದ ಭಾರತೀ ರೈಲ್ವೇ!

By Chethan Kumar  |  First Published Sep 4, 2024, 3:03 PM IST

ಭಾರತೀಯ ರೈಸ್ವೇ ಇದೀಗ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆ ಜಾರಿ ಮಾಡಿದೆ. ರೈಲ್ವೇ ಉದ್ಯೋಗಿಗಳು, ಅವರನ್ನು ಅವಲಿಂಬಿಸಿದರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಸಲುವಾಗಿ  UMID ಆರೋಗ್ಯ ಕಾರ್ಡ್ ಯೋಜನೆ ಜಾರಿ ಮಾಡಲಾಗಿದೆ. 
 


ನವದೆಹಲಿ(ಸೆ.04) ಭಾರತೀಯ ರೈಲ್ವೇ ಇದೀಗ ಆರೋಗ್ಯ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೊಸ UMID ಆರೋಗ್ಯ ಕಾರ್ಡ್ ಯೋಜನೆ ಜಾರಿ ಮಾಡಿದೆ. ಯೂನಿಕ್ ಮೆಡಿಕಲ್ ಐಡೆಂಟಿಫಿಕೇಶನ್ (UMID) ಆರೋಗ್ಯ ಕಾರ್ಡ್ ಎಲ್ಲಾ ರೈಲ್ವೇ ಉದ್ಯೋಗಿಗಳಿಗೆ, ಪಿಂಚಣಿದಾರರಿಗೆ ಹಾಗೂ ಉದ್ಯೋಗಿಗಳನ್ನು ಅವಲಂಬಿಸಿದವರಿಗೆ ಈ ಯೋಜನೆ ಅನ್ವಯವಾಗಲಿದೆ. UMID ಕಾರ್ಡ್ ಇದ್ದವರಿಗೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ವಿಶೇಷ ಅಂದರೆ 12.5 ಲಕ್ಷ ರೈಲ್ವೇ ಉದ್ಯೋಗಿಗಳು, 15 ಲಕ್ಷ ಪಿಂಚಣಿದಾರರು ಹಾಗೂ 10 ಲಕ್ಷ ಉದ್ಯೋಗಿಗಳ ಅವಲಂಬಿಸಿದವರಿಗೆ ಈ ಯೋಜನೆ ಲಾಭ ಸಿಗಲಿದೆ. 

ಆರಂಭಿಕ ಹಂತದಲ್ಲಿ ಇದೀಗ ರೈಲ್ವೇ ಪ್ಯಾನಲ್ ಆಸ್ಪತ್ರೆಗಳು ಹಾಗೂ ದೇಶದ ಏಮ್ಸ್ ಆಸ್ಪತ್ರೆಗಳನ್ನು ಟೈಅಪ್ ಮಾಡಿಕೊಳ್ಳಲಾಗಿದೆ. ಈ ಆಸ್ಪತ್ರೆಗಳಲ್ಲಿ UMID ಕಾರ್ಡ್ ದಾರರಿಗೆ ಚಿಕಿತ್ಸೆ ಉಚಿತವಾಗಲಿದೆ. ಹಾಲಿ ಇರುವ ಆರೋಗ್ಯ ವಿಮೆ ಸೌಲಭ್ಯದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿದೆ ಅನ್ನೋ ದೂರುಗಳು ದಾಖಲಾಗಿತ್ತು. ಈ ದೂರುಗಳನ್ನು ಆಧರಿಸಿ ಇದೀಗ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ

Tap to resize

Latest Videos

.ಪಿಯು, ಡಿಗ್ರಿ ಪಾಸಾದವರಿಗೆ ರೈಲ್ವೇಯಲ್ಲಿ 8113 ಹುದ್ದೆ, ಸೆ.14ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ!

UMID ಕಾರ್ಡ್ ಮಾಡಿಸಲು ರೈಲ್ವೇ ಉದ್ಯೋಗಿಗಳು 100 ರೂಪಾಯಿ ಪಾವತಿ ಮಾಡಬೇಕು. ಒಮ್ಮೆ ಹಣ ಪಾವತಿ ಮಾಡಿ UMID ಆರೋಗ್ಯ ಕಾರ್ಡ್ ಮಾಡಿಸಿಕೊಂಡರೆ ಸಾಕು. ಬಳಿಕ ಟೈಅಪ್ ಆಗಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತವಾಗಲಿದೆ. ತುರ್ತು ಚಿಕಿತ್ಸೆಗೂ ಈ ಕಾರ್ಡ್  ಬಳಕೆ ಮಾಡಲು ಸಾಧ್ಯವಿದೆ. ಚಿಕಿತ್ಸೆ ಪಡೆಯುವಾಗ ಈ ಕಾರ್ಡ್ ನಂಬರ್ ಇದ್ದರೂ ಸಾಕು. ಕಾರ್ಡ್ ಕೈಯಲ್ಲಿ ಇರಬೇಕು ಎಂದಿಲ್ಲ. 

ಹೊಸ ರೈಲ್ವೇ ಯೋಜನೆಯಿಂದ ರೈಲ್ವೇ ಉದ್ಯೋಗಿಗಳು ಸಂತಸಗೊಂಡಿದ್ದಾರೆ. ಆರೋಗ್ಯ ಸಮಸ್ಯೆಗಳ ವೇಳೆ ಚಾಲ್ತಿಯಲ್ಲಿದ್ದ ಆರೋಗ್ಯ ವಿಮೆಗಳಲ್ಲಿ ಕೆಲ ಸಮಸ್ಯೆಗಳು ಎದುರಾಗಿತ್ತು. ಹೀಗಾಗಿ ಹಲವರು ದೂರು ಸಲ್ಲಿಸಿದ್ದರು. ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿ ಮಾಡಲಾಗಿದೆ.

ಡಿಜಿ ಲಾಕರ್ ಆ್ಯಪ್ ಬಳಸುವವರಿಗೆ ಗುಡ್ ನ್ಯೂಸ್, ರೈಲ್ವೇ ಉದ್ಯೋಗ ಪಡೆಯುವುದು ಸುಲಭ!

ಈ ಯೋಜನೆ ತಕ್ಷಣದಿಂದ ಜಾರಿಯಾಗಿದೆ. UMID ಕಾರ್ಡ್‌ನ್ನು ಡಿಜಿ ಲಾಕರ್ ಮೂಲಕ ಸೇವ್ ಮಾಡಲು ಸಾಧ್ಯವಿದೆ. ಇದರಿಂದ UMID ಆರೋಗ್ ಕಾರ್ಡ್ ಸಂಪೂರ್ಣವಾಗಿ ಡಿಜಿಟಲೈಸೇಶನ್ ಮಾಡಲಾಗಿದೆ. ಈ ವ್ಯವಸ್ತೆಯಿಂದ ಆರೋಗ್ಯ ವಿಮೆ ಕಾರ್ಡ್ ಬಳಕೆಯಲ್ಲೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಕಾರ್ಡ್ ನಂಬರ್, ಅಥವಾ ಡಿಜಿಲಾಕರ್‌ನಲ್ಲಿ ಇಶ್ಯೂ ಆಗಿರುವ UMID ಕಾರ್ಡ್ ಇದ್ದರೆ ಉಚಿತವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಿದೆ.

click me!