
ನವದೆಹಲಿ (ಅ.20) ದೀಪಾವಳಿಗೆ ಪ್ರತಿ ನಗರಗಳಿಂದ ತಮ್ಮ ತಮ್ಮ ಊರುಗಳಿಗೆ ತೆರಳವುವರ ಸಂಖ್ಯೆ ಲಕ್ಷಕ್ಕೂ ಅಧಿಕ. ಪ್ರತಿ ನಿಲ್ದಾಣಗಳಿಂದ ಪ್ರಯಾಣಿಕರು ಬೇರೆ ಬೆರೆ ಊರು, ನಗರಕ್ಕೆ ತೆರಳುತ್ತಾರೆ.ಹೀಗಾಗಿ ಪ್ರತಿ ದೀಪಾವಳಿ ಹಬ್ಬಕ್ಕೆ ಭಾರತೀಯ ರೈಲ್ವೇ ಹೆಚ್ಚುವರಿ ರೈಲು ಸೇವೆ ನೀಡುತ್ತಿದೆ. ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ಸರಿಸುಮಾರು 7000 ಸ್ಪೆಷಲ್ ರೈಲು ಬಿಡಲಾಗಿತ್ತು. ಅದರೂ ರೈಲಿಗಾಗಿ ಜನರು ಪದಾಡಿದ ಸಂದರ್ಭ ಸೃಷ್ಟಿಯಾಗಿತ್ತು. ಈ ಬಾರಿ ಜನದಟ್ಟಣೆ ಕಡಿಮೆ ಮಾಡಲು ಭಾರತೀಯ ರೈಲಿವೇ ಬರೋಬ್ಬರಿ 12,000 ಸ್ಪೆಷಲ್ ಟ್ರೈನ್ ಸೇವೆ ನೀಡಲಾಗಿದೆ.
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಅಕ್ಟೋಬರ್ 17 ರಿಂದ ಈ ಸಂಖ್ಯೆ ನಿರೀಕ್ಷೆಗೂ ಮೀರಿದೆ. ಪ್ರತಿ ದಿನ ಕೋಟಿಗೂ ಹೆಚ್ಚು ಮಂದಿ ರೈಲು ಪ್ರಯಾಣ ಮಾಡುತ್ತಿದ್ದಾರೆ. ದೀಪಾವಳಿ ಹಾಗೂ ಛಾತ್ ಪೂಜೆ ಶುಭ ಸಂದರ್ಭಕ್ಕಾಗಿ 12,000 ರೈಲು ಸೇವೆ ನೀಡುತ್ತಿದೆ. ಕಳೆದ ವರ್ಷ 7,724 ಸ್ಪೆಷಲ್ ಟ್ರೈನ್ ನೀಡಲಾಗಿತ್ತು. ಲಕ್ಷಾಂತರ ಮಂದಿ ದೀಪಾವಳಿ ಹಬ್ಬ ಆಚರಿಸಲು ತಮ್ಮ ತಮ್ಮ ಮನೆಗೆ ತೆರಳುತ್ತಿದ್ದಾರೆ. ಹೀಗಾಗಿ ಸಮಸ್ಯೆ ಆಗದಿರಲು ಹೆಚ್ಚುವರಿ ರೈಲು ಸೇವೆ ನೀಡಲಾಗಿದೆ.
ಕಳೆದ ಶುಕ್ರವಾರದಿಂದ ಕೆಲವೇ ದಿನದಲ್ಲಿ 1 ಕೋಟಿ ಮಂದಿ ರೈಲು ಪ್ರಯಾಣ ಮಾಡಿದ್ದಾರೆ. ಕಳೆದ ನಾಲ್ಕು ದಿನದಿಂದ ದೆಹಲಿಯಿಂದ 15 ಲಕ್ಷ ಮಂದಿ ರೈಲು ಪ್ರಯಾಣ ಮಾಡಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರೈಲ್ವೇ ಇಲಾಖೆ ತೀವ್ರ ಮುತುವರ್ಜಿ ವಹಿಸಿದೆ. 12 ಲಕ್ಷ ರೈಲ್ವೇ ಉದ್ಯೋಗಿಗಳು ದೀಪಾವಳಿ ಹಬ್ಬದ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಪ್ರಯಾಣಿಕರಿಗೆ ತಕ್ಕ ಸಮಯಕ್ಕೆ ರೈಲು ಸೇರಿದಂತೆ ಇತರ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುತ್ತಿದೆ.
ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ಹಲವು ವಿಶೇಷ ರೈಲು ಸೇವೆ ನೀಡಲಾಗುತ್ತಿದೆ. ಬೆಂಗಳೂರು ಯಶವಂತಪುರ, ಹಬ್ಬಳ್ಳಿ, ಮಂಗಳೂರು ಸೇರಿದಂತೆ ಹಲವೆಡೆ ವಿಶೇಷ ರೈಲು ಸೇವೆ ನೀಡಲಾಗುತ್ತಿದೆ. ಹುಬ್ಬಳ್ಳಿ ಮಂಗಳೂರು 07353, ಮಂಗಳೂರು -ಹುಬ್ಬಳ್ಳಿ 07354 , ಬೆಂಗಳೂರು-ಮಂಗಳೂರು 06229 , ಮಂಗಳೂರು-ಬೆಂಗಳೂರು 06230 ಸೇರಿದಂತೆ ಹಲವು ದೀಪಾವಳಿ ವಿಶೇಷ ರೈಲುಗಳು ಸೇವೆ ನೀಡುತ್ತಿದೆ. ಪ್ರತಿ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ.
ದೀಪಾವಳಿ ಹಬ್ಬಕ್ಕೆ ಭಾರತೀ ರೈಲ್ವೇ ಪ್ರಯಾಣಿಕರಿಗೆ ಕೆಲ ವಿಶೇಷ ಸೌಲಭ್ಯ ನೀಡುತ್ತಿದೆ. ರೌಂಡ್ ಟ್ರಿಪ್ ಟಿಕೆಟ್ ಬುಕಿಂಗ್ ಮಾಡಿದರೆ ಡಿಸ್ಕೌಂಟ್, ರಿಬೇಟ್ ಸೇರಿದಂತೆ ಕೆಲ ವಿಶೇಷ ಸವಲತ್ತು ನೀಡಲಾಗುತ್ತಿದೆ. ಮೊದಲೇ ಪ್ಲಾನ್ ಮಾಡಿರುವ ಹಲವರು ಈ ಸೌಲಭ್ಯ ಬಳಸಿಕೊಂಡಿದ್ದಾರೆ. ರೌಂಡ್ ಟ್ರಿಪ್ ಮೂಲಕ ಶೇಕಡಾ 20 ರಷ್ಟು ಹಣ ಉಳಿತಾಯ ಮಾಡಲು ಸಾಧ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ