ದೀಪಾವಳಿ ಹಬ್ಬಕ್ಕೂ ವಿಶೇಷ ರೈಲುಗಳನ್ನು ಬಿಟ್ಟ ರೈಲ್ವೆ ಇಲಾಖೆ: ಇಲ್ಲಿದೆ ನೋಡಿ ಮಾಹಿತಿ

By Sathish Kumar KH  |  First Published Oct 10, 2024, 6:39 PM IST

ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆ ತಗ್ಗಿಸಲು ನೈಋತ್ಯ ರೈಲ್ವೆ ಹುಬ್ಬಳ್ಳಿ-ಋಷಿಕೇಶ ಮತ್ತು ಬೆಂಗಳೂರು-ಭಗತ್ ಕಿ ಕೋಠಿ ನಡುವೆ ವಿಶೇಷ ರೈಲುಗಳನ್ನು ಘೋಷಿಸಿದೆ. ಹುಬ್ಬಳ್ಳಿ-ಋಷಿಕೇಶ ರೈಲು ಅಕ್ಟೋಬರ್ 14 ರಿಂದ ನವೆಂಬರ್ 4 ರವರೆಗೆ ಮತ್ತು ಬೆಂಗಳೂರು-ಭಗತ್ ಕಿ ಕೋಠಿ ರೈಲು ಅಕ್ಟೋಬರ್ 25 ಮತ್ತು 30 ರಂದು ಸಂಚರಿಸಲಿದೆ.


ಬೆಂಗಳೂರು (ಅ.10): ದೀಪಾವಳಿ ಹಬ್ಬದಲ್ಲಿ ನಿರೀಕ್ಷಿತ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸುವ ಹಿನ್ನೆಲೆಯಲ್ಲಿ, ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ - ಉತ್ತರಾಖಂಡ ರಾಜ್ಯದ ಯೋಗ ನಗರಿ ಋಷಿಕೇಶ ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ -ರಾಜ್ಯಸ್ಥಾನದ ಭಗತ್-ಕಿ-ಕೋಠಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತಿವೆ:

ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ನಿಲ್ದಾಣಗಳ ನಡುವೆ 4 ಟ್ರಿಪ್ ವಿಶೇಷ ರೈಲು ಸೇವೆ: ರೈಲು ಸಂಖ್ಯೆ 07363 ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 14 ರಿಂದ ನವೆಂಬರ್ 4, 2024 ರವರೆಗೆ ಪ್ರತಿ ಸೋಮವಾರ ಎಸ್ಎಸ್ಎಸ್ ಹುಬ್ಬಳ್ಳಿಯಿಂದ 20:30 ಗಂಟೆಗೆ ಹೊರಟು,  ಬುಧವಾರ 23:30 ಗಂಟೆಗೆ ಯೋಗ ನಗರಿ ಋಷಿಕೇಶ ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07364 ಯೋಗ ನಗರಿ ಋಷಿಕೇಶ-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 17 ರಿಂದ ನವೆಂಬರ್ 7, 2024 ರವರೆಗೆ ಪ್ರತಿ ಗುರುವಾರ 06:15 ಗಂಟೆಗೆ ಯೋಗ ನಗರಿ ಋಷಿಕೇಶ ನಿಲ್ದಾಣದಿಂದ ಹೊರಟು, ಶನಿವಾರ 06:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.

Tap to resize

Latest Videos

undefined

ಇದನ್ನೂ ಓದಿ: ನಾಲ್ಕು ಹೆಬ್ಬಾವುಗಳೊಂದಿಗೆ ಸರಸವಾಡಲು ಹೋದ ವ್ಯಕ್ತಿ; ಯಾವ ಹಾವಿಗೆ ಆಹಾರವಾದ ಗೊತ್ತಾ?

ಈ ರೈಲು ಎರಡು ದಿಕ್ಕುಗಳಲ್ಲಿ ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಚಾರ್ಡ್ ಲೈನ್, ಅಹ್ಮದ್ ನಗರ, ಕೋಪರ್ ಗಾಂವ್ , ಮನ್ಮಾಡ್ ಜಂ, ಭೂಸಾವಲ್ ಜಂ., ಹರ್ದಾ, ಇಟಾರ್ಸಿ ಜಂ., ರಾಣಿ ಕಮಲಾಪತಿ, ಬೀನಾ ಜಂ., ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ನಿಲ್ದಾಣ, ಗ್ವಾಲಿಯರ್ ಜಂ., ಆಗ್ರಾ ಕ್ಯಾಂಟ್, ಮಥುರಾ ಜಂ., ಹಜರತ್ ನಿಜಾಮುದ್ದೀನ್ ಜಂ., ಘಾಜಿಯಾಬಾದ್ ಜಂ., ಮೀರತ್ ಸಿಟಿ ಜಂ., ಮುಜಾಫರ್ ನಗರ, ಡಿಯೋಬಂದ್, ತಾಪ್ರಿ ಜಂ., ರೂರ್ಕಿ ಮತ್ತು ಹರಿದ್ವಾರ ನಿಲ್ದಾಣಗಲ್ಲಿ ನಿಲುಗಡೆ ಇರಲಿವೆ. 

ಈ ವಿಶೇಷ ರೈಲಿನಲ್ಲಿ 2ನೇ ದರ್ಜೆ ಹವಾನಿಯಂತ್ರಿತ-1, 3ನೇ ದರ್ಜೆ ಹವಾನಿಯಂತ್ರಿತ-4, ಸ್ಲೀಪರ್ ಕ್ಲಾಸ್-9, ಎಸ್ಎಲ್ಆರ್/ಡಿ  ಮತ್ತು ಗಾರ್ಡ್ಸ್ ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರ್ ತಲಾ-1 ಬೋಗಿಗಳು ಸೇರಿದಂತೆ ಒಟ್ಟು 16 ಬೋಗಿಗಳು ಇರಲಿವೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ 2 ಟ್ರಿಪ್ ವಿಶೇಷ ರೈಲು ಸೇವೆ ಇರಲಿದೆ. 

ಇನ್ನು ರೈಲು ಸಂಖ್ಯೆ 06587 ಎಸ್ಎಂವಿಟಿ  ಬೆಂಗಳೂರು-ಭಗತ್ ಕಿ ಕೋಠಿ ವಿಶೇಷ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಸರ್ ಎಂ ವಿಶ್ವೇರಯ್ಯ ಟರ್ಮಿನಲ್ ನಿಲ್ದಾಣದಿಂದ ಅಕ್ಟೋಬರ್ 25 ಮತ್ತು 30, 2024 ರಂದು 17:45 ಗಂಟೆಗೆ ಹೊರಟು, ಮೂರನೇ ದಿನ 12:45 ಗಂಟೆಗೆ ಭಗತ್ ಕಿ ಕೋಠಿ ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06588 ಭಗತ್-ಕಿ-ಕೋಠಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 28 ಮತ್ತು ನವೆಂಬರ್ 2, 2024 ರಂದು ಭಗತ್-ಕಿ-ಕೋಠಿಯಿಂದ 05:00 ಗಂಟೆಗೆ ಹೊರಟು, ಮರುದಿನ 23:30 ಗಂಟೆಗೆ ಎಸ್ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.

ಇದನ್ನೂ ಓದಿ: ಕೇರಳದ 25 ಕೋಟಿ ರೂ. ಓಣಂ ಲಾಟರಿ ಗೆದ್ದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್; ಕೈಗೆ ಸಿಗೋ ಹಣವೆಷ್ಟು?

ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ, ಬಾಣಸವಾಡಿ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಲೋನಾವಲ , ಕಲ್ಯಾಣ್, ವಸಾಯಿ ರೋಡ್, ವಾಪಿ, ಸೂರತ್, ವಡೋದರಾ ಜಂ., ಅಹಮದಾಬಾದ್ ಜಂ., ಮಹೇಶನಾ ಜಂ., ಪಾಲನ್‌ಪುರ್ ಜಂ., ಅಬು ರೋಡ್, ಪಿಂಡ್ವಾರಾ, ಜವಾಯಿ ಬಂದ್, ಫಲ್ನಾ, ಮಾರ್ವಾರ್ ಜಂ., ಪಾಲಿ ಮಾರ್ವಾರ್ ಮತ್ತು ಲುನಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಈ ವಿಶೇಷ ರೈಲು 2ನೇ ದರ್ಜೆ ಹವಾನಿಯಂತ್ರಿತ-4, 3ನೇ ದರ್ಜೆ ಹವಾನಿಯಂತ್ರಿತ-15 ಮತ್ತು ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರಗಳು-2 ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.

ಪ್ರಯಾಣಿಕರು ಅಧಿಕೃತ ವೆಬ್ಸೈಟ್ (www.enquiry.indianrail.gov.in) ಗೆ ಭೇಟಿ ನೀಡಿ,  NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಸಮಯವನ್ನು ಪರಿಶೀಲಿಸಬಹುದು.

click me!