ಭಾರತದ ಔಷಧ ತಯಾರಿ ಕಂಪನಿಗಳು ತಮ್ಮ ದೇಶಕ್ಕೆ ಮಾತ್ರವಲ್ಲ ಜಗತ್ತಿಗೇ ಔಷಧ ತಯಾರಿಸಿಕೊಡಬಲ್ಲವು ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ತಿಳಿಸಿದ್ದಾರೆ.
ನವದೆಹಲಿ(ಜು.16): ಭಾರತದ ಔಷಧ ತಯಾರಿ ಕಂಪನಿಗಳು ತಮ್ಮ ದೇಶಕ್ಕೆ ಮಾತ್ರವಲ್ಲ ಜಗತ್ತಿಗೇ ಔಷಧ ತಯಾರಿಸಿಕೊಡಬಲ್ಲವು ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ತಿಳಿಸಿದ್ದಾರೆ.
ಹಲವು ಮುಖ್ಯ ವಿಚಾರಗಳನ್ನು ಭಾರತ ಮಾಡಿದೆ. ಬೇರೆ ರೋಗಗಳಿಗೆ ತಾವು ಬಳಸಿದ ಔಷಧದ ಆಧಾರದಲ್ಲಿ ಕೊರೋನಾಗೂ ಲಸಿಕೆ ಕಂಡು ಹಿಡಿಯಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
undefined
ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!
ಗುರುವಾರ ಸಂಜೆ ಡಿಸ್ಕವರಿ ಪ್ಲಸ್‌ನಲ್ಲಿ ಪ್ರಸಾರವಾಗುವ COVID19- ವೈರಸ್ ವಿರುದ್ಧ ಭಾರತದ ಸಮರ ಎಂಬ ಡಾಕ್ಯುಮೆಂಟರಿಯಲ್ಲಿ ಮಾತನಾಡಿ, ಕೊರೋನಾದಿಂದ ಜನದಟ್ಟಣೆಯ ನಗರಗಳಿಂದ ಭಾರತ ದೊಡ್ಡ ಸವಾಲು ಎದುರಿಸುತ್ತಿದೆ ಎಂದಿದ್ದಾರೆ.
ಭಾರತದ ಫಾರ್ಮಸಿಗಳ ಶಕ್ತಿಯ ಬಗ್ಗೆ ಪ್ರತಿಕ್ರಿಯಿಸಿ, ಭಾರತದಲ್ಲಿ ದೊಡ್ಡ ಮಟ್ಟದ ಸಾಮರ್ಥ್ಯವಿದೆ. ಡ್ರಗ್ಸ್ ಹಾಗೂ ಔಷಧ ಕಂಪನಿಗಳು ಜಗತ್ತಿಗೇ ಔಷಧ ಒದಗಿಸುತ್ತವೆ. ಬೇರೆ ಯಾವುದೇ ದೇಶಕ್ಕಿಂತಲೂ ಭಾರತದಲ್ಲಿಯೇ ಹೆಚ್ಚಿನ ಔಷಧಗಳನ್ನು ಕಂಡು ಹಿಡಿಯಲಾಗಿದೆ. ಸೇರಂ ಸಂಸ್ಥೆ ಹೆಚ್ಚಿನ ಮಟ್ಟದಲ್ಲಿ ಔಷಧ ತಯಾರಿಸುತ್ತದೆ. ಎಂದಿದ್ದಾರೆ.
ಭಾರತೀಯ ಸೋಂಕಿತನ 1.5 ಕೋಟಿ ರೂ ಬಿಲ್ ಮನ್ನಾ ಮಾಡಿದ ದುಬೈ ಆಸ್ಪತ್ರೆ!
ಬಯೋ ಇ, ಬಯೋಟೆಕ್ ಸೇರಿ ಹಲವು ಇವೆ. ಅವರೂ ಕೊರೋನಾ ಔಷಧ ಕಂಡು ಹಿಡಿಯಲು ನೆರವಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಸಾಂಕ್ರಾಮಿಕ ರೋಗಕ್ಕೆ ಸಂಶೋಧನಾ ಒಕ್ಕೂಟದಲ್ಲಿ ಭಾರತ ಸೇರಿಕೊಂಡಿರುವುದನ್ನು ಪ್ರಸ್ತಾಪಿಸಿದ ಅವರು, ಫಾರ್ಮಸಿ ಕಂಪನಿಗಳು ಭಾರತಕ್ಕೆ ಮಾತ್ರವಲ್ಲದೆ, ಜಗತ್ತಿಗೇ ಔಷಧ ಒದಗಿಸಬಲ್ಲವು ಎಂದಿದ್ದಾರೆ.