ಲಡಾಖ್ ಸಂಘರ್ಷದ ಬೆನ್ನಲ್ಲೇ ಭಾರತೀಯ ಸೇನೆ ಸೇರಿಕೊಂಡ ಅಪಾಚೆ, ಚಿನೊಕ್ ಮಿಲಿಟರ್ ಹೆಲಿಕಾಪ್ಟರ್!

By Suvarna News  |  First Published Jul 10, 2020, 6:55 PM IST

ಭಾರತ ಹಾಗೂ ಚೀನಾ ಗಡಿ ಸಂಘರ್ಷ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಚೀನಾ ಗಡಿಯಿಂದ ಹಿಂದೆ ಸರಿಯುವ ಮಾತುಗಳನ್ನಾಡಿದ್ದರೂ, ಹಿಂಬಾಗಿಲ ಮೂಲಕ ದಾಳಿ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಇದೀಗ ಗಡಿ ಸಂಘರ್ಷದ ಬೆನ್ನಲ್ಲೇ ಭಾರತೀಯ ವಾಯು ಸೇನೆ ಬಲ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಕಾರಣ 5 ಅಪಾಚೆ ಹಾಗೂ ಚಿನೂಕ್ ಮಿಲಿಟರ್ ಹೆಲಿಕಾಪ್ಟರ್.


ನವದೆಹಲಿ(ಜು.10): ಭಾರತೀಯ ವಾಯಸೇನೆ ಬಲ ಮತ್ತಷ್ಟು ಹೆಚ್ಚಾಗಿದೆ. ಕಾರಣ AH-64E ಅಪಾಚೆ ಹಾಗೂ CH-47F(I)ಚಿನೂಕ್ ಮಿಲಿಟರಿ ಹೆಲಿಕಾಪ್ಟರ್ ಭಾರತೀಯ ವಾಯುಸೇನೆಗೆ ಹಸ್ತಾಂತರಿಸಲಾಗಿದೆ. ಬೊಯಿಂಗ್ ಜೊತೆ ಭಾರತ 22 ಅಪಾಚೆ ಯುದ್ದ ಹೆಲಿಕಾಪ್ಟರ್ ಒಪ್ಪಂದ ಮಾಡಿಕೊಂಡಿತ್ತು. ಈಗಾಗಲೇ 17 ಅಟ್ಯಾಕ್ ಹೆಲಿಕಾಪ್ಟರ್ ಹಸ್ತಾಂತರಿಸಿದ ಬೋಯಿಂಗ್ ಇದೀಗ ಅಂತಿಮ  5 ಹೆಲಿಕಾಪ್ಟರ್ ಹಸ್ತಾಂತರ ಮಾಡಿದೆ.

ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ಸೇನೆ ಸೇರಿಕೊಳ್ಳುತ್ತಿದೆ 6 ರಾಫೆಲ್ ಯುದ್ಧವಿಮಾನ ಹಾಗೂ ಮಿಸೈಲ್!..

Latest Videos

undefined

ಅಪಾಚೆ ಹಾಗೂ ಚಿನೂಕ್ ಅ್ಯಟಾಕ್ ಹೆಲಿಕಾಪ್ಟರ್ ಹೊಂದಿದ 17 ದೇಶಗಳಲ್ಲಿ ಇದೀಗ ಭಾರತವೂ ಸೇರಿಕೊಂಡಿದೆ. ಅಪಾಚೆ ಹಾಗೂ ಚಿನೂಕ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಯಾವುದೇ ವಾತಾವರಣದಲ್ಲಿ ಎದುರಾಳಿಗಳ ಮೇಲೆ ಆಕ್ರಮಣ ಮಾಡಲು ಸಾಮರ್ಥ್ಯ ಹೊಂದಿದೆ. ಇಷ್ಟೇ ಅಲ್ಲ ಅತೀ ಎತ್ತರ ಸೂಕ್ಷ್ಮ ಪ್ರದೇಶದಲ್ಲೂ ಈ ಹೆಲಿಕಾಪ್ಟರ್ ಸಲೀಸಲಾಗಿ ಆಕ್ರಮಣ ಮಾಡಲಿದೆ.

ಚೀನಾಗೆ ಖಡಕ್ ವಾರ್ನಿಂಗ್ ನೀಡಿದ ಭಾರತೀಯ ವಾಯುಸೇನೆ ಮುಖ್ಯಸ್ಥ!.

2015ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಬೊಯಿಂಗ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇಷ್ಟೇ ತರಬೇತಿಯನ್ನು ಆರಂಭಿಸಿತು. ಡೋನಾಲ್ಡ್ ಟ್ರಂಪ್ ನವದೆಹಲಿ ಪ್ರವಾಸದ ವೇಳೆ ಅಪಾಚೆ ಆ್ಯಟಾಕ್ ಹೆಲಿಕಾಪ್ಟರ್ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಭಾರತ-ಚೀನಾ ಗಡಿ ಸಂಘರ್ಷದ ಬೆನ್ನಲ್ಲೇ ಅಪಾಚೆ ಹಾಗೂ ಚಿನೂಕ್ ಹೆಲಿಕಾಪ್ಟರ್ ಭಾರತೀಯ ವಾಯು ಸೇನೆ ಸೇರಿಕೊಂಡಿದ್ದು ಮತ್ತಷ್ಟು ಬಲ ಹೆಚ್ಚಿಸಿದೆ. ಇದೀಗ ಸೇನೆ ಕೈಸೇರಿರುವ ಅ್ಯಟಾಕ್ ಹೆಲಿಕಾಪ್ಟರ್‌ಗಳನ್ನು ಲಡಾಖ್‌ನಲ್ಲಿ ನಿಯೋಜಿಸಲಾಗುತ್ತಿದೆ.
 

click me!