35 ಸೊಮಾಲಿಯಾ ಕಡಲ್ಗಳ್ಳರನ್ನು ಮುಂಬೈ ಪೊಲೀಸರಿಗೊಪ್ಪಿಸಿದ ಐಎನ್‌ಎಸ್ ಕೋಲ್ಕತಾ!

By Suvarna NewsFirst Published Mar 23, 2024, 3:08 PM IST
Highlights

ಭಾರತೀಯ ನೌಕಾಪಡೆಯ ಐಎನ್‌ಎಸ್ ಕೋಲ್ಕತಾ ಮಾರ್ಚ್ 15 ರಂದು ಸೊಮಾಲಿಯಾ ಕಡಲ್ಗಳರ ದಾಳಿಯಿಂದ ಸರಕು ಹಡಗನ್ನು ರಕ್ಷಿಸಿತ್ತು. ಈ ವೇಳೆ ಈ ಕಡಲ್ಗಳ್ಳರ ಬಂಧಿಸಲಾಗಿತ್ತು. ಇದೀಗ ಬಂಧಿತ ಸೊಮಾಲಿಯಾ ಕಡಲ್ಗಳ್ಳರನ್ನು ನೌಕಾಪಡೆ ಮುಂಬೈ ಪೊಲೀಸರಿಗೆ ಒಪ್ಪಿಸಲಾಗಿದೆ.
 

ಮುಂಬೈ(ಮಾ.23) ಸಮುದ್ರದಲ್ಲಿ ಹದ್ದಿನ ಕಣ್ಣಿಟ್ಟಿರುವ ಭಾರತೀಯ ನೌಕಾಪಡೆ ಇತ್ತೀಚೆಗೆ ಮೇಲಿಂದ ಮೇಲೆ ಕಡಲ್ಗಳ್ಳರ ದಾಳಿಯನ್ನು ವಿಫಲಗೊಳಿಸಿ ಹಲವು ದೇಶಗಳ ಹಡುಗು, ಸರಕು ಹಾಗೂ ಸಿಬ್ಬಂದಿಗಳನ್ನು ಕಾಪಾಡಿದೆ. ಇತ್ತೀಚೆಗೆ ರುಯೆನ್‌ ಹಡಗನ್ನು ಸೊಮಾಲಿಯಾ ಕಳ್ಳರಿಂದ ರಕ್ಷಿಸಿದ ಭಾರತೀಯ ನೌಕಾಪಡೆಯ ಐಎನ್‌ಎಸ್ ಕೋಲ್ಕತಾ, 35 ಕಡಲ್ಗಳರನ್ನು ಬಂಧಿಸಿತ್ತು. ಇದೀಗ ಬಂಧಿತ ಈ ಸೊಮಾಲಿಯಾ ಕಡಲ್ಗಳ್ಳರನ್ನು ಐಎನ್‌ಎಸ್ ಕೋಲ್ಕತಾ ಮುಂಬೈ ಪೊಲೀಸರಿಗೆ ಒಪ್ಪಿಸಿದೆ. 

ಅರೆಬಿಯನ್ ಸಮುದ್ರ, ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾ ಸಾಗರದಲ್ಲಿ ಭಾರತೀಯ ನೌಕಾಪಡೆ ದಿನದ 24 ಗಂಟೆಯೂ ಅಲರ್ಟ್ ಆಗಿದೆ. ಇದರ ಪರಿಣಾಣ ಇತ್ತೀಚೆಗೆ ಸರಕು ಹಡಗುಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ತಡೆದು, ಹಡಗು,ಸಿಬ್ಬಂದಿಗಳನ್ನು ಭಾರತೀಯ ನೌಕಾ ಪಡೆ ರಕ್ಷಿಸುತ್ತಿದೆ. ಮಾರ್ಚ್ 15 ರಂದು ಭಾರತೀಯ ನೌಕಾಪಡೆಯ ಐಎನ್‌ಎಸ್ ಕೋಲ್ಕತಾ ಸೋಮಾಲಿ ಕಡಲ್ಗಳ್ಳರಿಂದ ಅಪಹರಣ ಆಗಿದ್ದ ಹಡಗು ಎಂವಿ-ರುಯೆನ್‌ನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿತ್ತು.

 

ಹೈಜಾಕ್ ಆದ ಹಡಗಿನ ನೆರವಿಗೆ ಹೋದ ಚಾಪರ್ ಮೇಲೆ ಗುಂಡು ಹಾರಿಸಿದ ಕಡಲ್ಗಳ್ಳರು: ಹೆಡೆಮುರಿ ಕಟ್ಟಿದ ಭಾರತೀಯ ನೇವಿ

ಈ ವೇಳೆ ಬಂಧಿಸಿದ 35 ಸೊಮಾಲಿಯಾ ಕಡಲ್ಗಳ್ಳರನ್ನು ಮುಂಬೈ ಕಡಲ ತೀರಕ್ಕೆ ಕರೆತಂದ ಐಎನ್‌ಎಸ್ ಕೋಲ್ಕತಾ ಇಂದು ಮುಂಬೈ ಪೊಲೀಸರಿಗೆ ಒಪ್ಪಿಸಿದೆ. ಮುಂಬೈ ಪೊಲೀಸರು ಸೊಮಾಲಿಯಾ ಕಡಲ್ಗಳ್ಳರನ್ನು ವಶಕ್ಕೆ ಪಡೆದು ಕಾನೂನು ಪ್ರಕ್ರಿಯೆ ಮುಗಿಸಿದ್ದಾರೆ. ಆಪರೇಶನ್ ಸಂಕಲ್ಪ ಅಡಿಯಲ್ಲಿ ಭಾರತೀಯ ನೌಕಾಪಡೆ ಕಾರ್ಯಾಚರಣೆ ನಡೆಸಿ ಈ ಸೋಮಾಲಿಯಾ ಕಡಲ್ಗಳ್ಳರನ್ನು ಬಂಧಿಸಿತ್ತು. 

ಕಾರ್ಯಾಚರಣೆ ಬೆನ್ನಲ್ಲೇ ಭಾರತೀಯ ನೌಕಾಪಡೆ ವಿವರಣೆ ನೀಡಿತ್ತು. ‘ಮಾ.15ರಂದು ರುಯೆನ್‌ ಹಡಗನ್ನು ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಮೊದಲಿಗೆ ನಾವು ಕಡಲ್ಗಳ್ಳರಿಗೆ ಶರಣಾಗುವಂತೆ ತಿಳಿಸಿದಾಗ ಅವರು ನಮ್ಮತ್ತ ಗುಂಡು ಹಾರಿಸಿದರು. ಬಳಿಕ ಅಂತಾರಾಷ್ಟ್ರೀಯ ಕಾನೂನಿನಂತೆ ಆತ್ಮರಕ್ಷಣೆಯ ಪ್ರತೀಕವಾಗಿ ನಾವೂ ಅವರತ್ತ ದಾಳಿ ಮಾಡಬೇಕಾಯಿತು’ ಎಂದು ತಿಳಿಸಿತ್ತು. ಸೋಮಾಲಿಯಾ ಕಡಲ್ಗಳ್ಳರು ರುಯೆನ್‌ ಸರಕು ಸಾಗಾಣೆ ಹಡಗನ್ನು ಡಿ.14 ರಂದು ಅಪಹರಿಸಿ ಅದರ ಮೂಲಕ ಸಮುದ್ರದಲ್ಲಿ ಹಲವು ಹಡಗುಗಳನ್ನು ಹೈಜಾಕ್‌ ಮಾಡುವುದೂ ಸೇರಿದಂತೆ ಹಲವು ಕೃತ್ಯಗಳನ್ನು ಮಾಡುತ್ತಿದ್ದರು.

ಹಡಗುಗಳ ರಕ್ಷಣೆಗೆ ಭಾರತದ 5 ಯುದ್ಧನೌಕೆ ದೌಡು: ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಮತ್ತೆ ಹೌತಿ ದಾಳಿ

ಇತ್ತೀಚೆಗೆ ಗಲ್ಫ್‌ ಆಫ್‌ ಏಡನ್‌ನಲ್ಲಿ ಸೊಮಾಲಿಯಾದ ಕಡಲ್ಗಳ್ಳರ ದಾಳಿಗೆ ತುತ್ತಾಗಿದ್ದ ಇರಾನ್‌ನ ಮೀನುಗಾರಿಕಾ ಹಡಗೊಂದನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿತ್ತು. ಸೊಮಾಲಿಯಾದ ಪೂರ್ವ ತೀರದಲ್ಲಿ ಕಡಲ್ಗಳ್ಳರ ದಾಳಿಗೆ ತುತ್ತಾಗಿದ್ದ ಮೀನುಗಾರಿಕೆ ಹಡಗಿನಲ್ಲಿದ್ದ 19 ಮಂದಿ ಪಾಕಿಸ್ತಾನಿ ಮೀನುಗಾರರನ್ನು ನೌಕಾಪಡೆಯ ಐಎಸ್‌ಎಸ್‌ ಸುಮಿತ್ರಾ ನೌಕೆ ರಕ್ಷಿಸಿತ್ತು.
 

click me!