
ಪೋರ್ಟ್ ಬ್ಲೇರ್(ಡಿ.03): ಪೋರ್ಟ್ ಬ್ಲೇರ್ ಬಳಿ ಸಮುದ್ರದಲ್ಲಿ ಶಂಕಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಚೀನಾದ ಹಡಗೊಂದನ್ನು ಭಾರತೀಯ ನೌಕಾ ಪಡೆ ಓಡಿಸಿದ ಘಟನೆ ನಡೆದಿದೆ.
ಚೀನಾದ ಸಂಶೋಧನಾ ಹಡಗು ಶಿ- ಯಾನ್ 1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದ ಭಾರತೀಯ ಸಮುದ್ರ ಗಡಿಯಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿತ್ತು ಎನ್ನಲಾಗಿದೆ.
ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ!
ಶಿ-ಯಾನ್1 ಹಡಗನ್ನು ಕಡಲು ಕಣ್ಗಾವಲು ವಿಮಾನದಿಂದ ಪತ್ತೆ ಹಚ್ಚಿದ ನೌಕಾಸೇನೆ, ಅದನ್ನು ಮರಳಿ ಚೀನಿ ಸಮುದ್ರ ಗಡಿ ಸೇರುವಂತೆ ಮಾಡಿದೆ.
ಪಾಕ್‌ನಿಂದ ಸಮುಂದರಿ ಜಿಹಾದ್?: ಯಾವುದೇ ದಾಳಿ ಎದುರಿಸಲು ನೌಕಾ ಪಡೆ ಸಜ್ಜು
ಆಗ್ನೇಯ ಏಷ್ಯಾ ವಲಯದಲ್ಲಿ ಕಣ್ಗಾವಲು ಇಟ್ಟಿರುವಂತೆ, ಈ ಭಾಗದಲ್ಲೂ ಭಾರತದ ಚಟುವಟಿಕೆಗಳ ಮೇಲೆ ನಿಗಾ ಇಡಲು ಶಿ-ಯಾನ್1 ಹಡಗನ್ನು ಚೀನಾ ಬಳಸುತ್ತಿತ್ತು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ