ಟಿಕ್‌ಟಾಕ್ ಸೇರಿ ಚೀನಾದ 52 ಆ್ಯಪ್ ಬ್ಯಾನ್‌; ಕೇಂದ್ರಕ್ಕೆ ಭಾರತ ಗುಪ್ತಚರ ಇಲಾಖೆ ಸೂಚನೆ!

By Suvarna NewsFirst Published Jun 18, 2020, 6:10 PM IST
Highlights

ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟಿನಿಂದ ಇದೀಗ ಚೀನಾದ ಎಲ್ಲಾ ವಸ್ತುಗಳ ಮೇಲೂ ಬಹಿಷ್ಕಾರಕ್ಕೆ ಕೂಗು ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ, ಪ್ರತಿಭಟನೆಗಳು ಸೇರಿದಂತೆ ಹಲವು ಚಟುವಟಿಕೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಭಾರತೀಯ ಗುಪ್ತಚರ ಇಲಾಖೆ ಟಿಕ್‌ಟಾಕ್ ಸೇರಿದಂತೆ ಚೀನಾ ಮೂಲದ  52 ಆ್ಯಪ್ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ನವದೆಹಲಿ(ಜೂ.18): ಭಾರತೀಯ ಕೇಂದ್ರ ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ ನೀಡಿದೆ. ವ್ಯಾಪಾರ ವಹಿವಾಟಿನ ಹೆಸರಿನಲ್ಲಿ ಚೀನಾ ಭಾರತೀಯರ ಮಾಹಿತಿ ಕದಿಯುತ್ತಿದೆ. ಚೀನಾದ ಬಹುತೇಕ ಆ್ಯಪ್‌ ಸುರಕ್ಷತೆ ಇಲ್ಲ ಎಂದು ವರದಿ ನೀಡಿದೆ. ಟಿಕ್‌ಟಾಕ್ ಸೇರಿದಂತೆ 52 ಮೊಬೈಲ್ ಆ್ಯಪ್ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಗುಪ್ತಚರ ಇಲಾಖೆ ಸೂಚಿಸಿದೆ.

ಲಡಾಖ್ ಲಡಾಯಿ; ಚೀನಾ ಟೆಲಿ ಗೇರ್ ಬಳಕೆ ನಿಷೇಧಿಸಿದ BSNL! 

ಗುಪ್ತಚರ ಇಲಾಖೆ ಚೀನಾ ಮೂಲದ 52 ಆ್ಯಪ್‌ ಕುರಿತು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳವಂತೆ ಸೂಚಿಸಿದೆ. ಸರ್ಕಾರ ಈ ಆ್ಯಪ್‌ಗಳನ್ನು ಬ್ಲಾಕ್ ಮಾಡಬೇಕು ಅಥವಾ ಜನರು ಈ ಆ್ಯಪ್ ಬಳಸದಂತೆ ಆದೇಶ ಹೊರಡಿಸಬೇಕು. ಈ ಆ್ಯಪ್‌ಗಳಲ್ಲಿ ಯಾವುದೇ ಭದ್ರತೆ ಇಲ್ಲ. ಈ ಆ್ಯಪ್‌ಗಳ ಮೂಲಕ ಭಾರತೀಯ ಮಾಹಿತಿ ಕದಿಯಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. 

ಭಾರತ ಯುದ್ಧಕ್ಕೆ ಸನ್ನದ್ಧವಾಗ್ತಿದ್ದಂತೆ ಎಚ್ಚೆತ್ತ ಕುತಂತ್ರಿ ಚೀನಾ!

ಟಿಕ್‌ಟಾಕ್, ಕ್ಸೆಂಡರ್, ಶೇರ್‌ಇಟ್ ಜೊತೆಗೆ ಕ್ಸಿಯೋಮಿ ಸ್ಮಾರ್ಟ್ ಫೋನ್ ಆ್ಯಪ್‌ಗಳಾದ MI ಕಮ್ಯೂನಿಟಿ, mi ಸ್ಟೋರ್, mi ವಿಡಿಯೋ ಕಾಲ್ ಆ್ಯಪ್ ನಿಷೇಧಿಸಲು ಸೂಚಿಸಿದೆ.  ಆ್ಯಪ್ ಮಾತ್ರವಲ್ಲ, ಕ್ಲಾಶ್ ಆಫ್ ಕಿಂಗ್ಸ್, uc ಬ್ರೌಸರ್, ಶೈನ್, APUS ಬ್ರೌಸರ್, ಬೈದು ಮ್ಯಾಪ್, ಬೈದು ಟ್ರಾನ್ಸಲೇಟ್, ಬ್ಯೂಟಿ ಪ್ಲಸ್,   ಬಿಗೋ ಲೈವ್, ಕ್ಯಾಶ್ ಕ್ಲಿಯರ್ du ಆ್ಯಪ್ ಸ್ಟುಡಿಯೋ, ಕ್ಲೀನ್ ಮಾಸ್ಟರ್, ಚೀತಾ, ಕ್ಲಬ್ ಫ್ಯಾಕ್ಟರಿ, cm ಬ್ರೌಸರ್, du ಬ್ರೌಸರ್, DU ಬ್ಯಾಟರಿ ಸೇವರ್, DU ಕ್ಲೀನರ್, DU ರಿಕಾರ್ಡರ್, DU ಪ್ರವೈಸಿ, ES ಫೈಲ್ ಎಕ್ಸಪ್ಲೋರರ್, ಹೆಲೋ, ಕ್ವಾವೈ, ಲೈಕ್, ಮೈಲ್ ಮಾಸ್ಟರ್, ನ್ಯೂಸ್ ಡಾಗ್, ಪ್ಯಾರೆಲ್ ಸ್ಪೇಸ್ ಸೇರಿದಂತೆ 52 ಪ್ರಮುಖ ಆ್ಯಪ್ ಅಪಾಯಕಾರಿ ಎಂದು ಗುಪ್ತಚರ ಇಲಾಖೆ ಹೇಳಿದೆ.

ಜೂಮ್ ವಿಡಿಯೋ ಕಾಲ್ ಕೂಡ ಅಪಾಯಾಕಾರಿ ಎಂದಿದೆ. ಜೂಮ್ ಬಳಸದಂತೆ ಕೇಂದ್ರ ಸರ್ಕಾರವೇ ಸೂಚಿಸಿತ್ತು. ಇತ್ತೀಚೆಗೆ ಫೋರ್ಬ್ಸ್ ಕೂಡ ಕ್ಸಿಯೋಮಿ ಫೋನ್ ಮಾಹಿತಿ ಸೋರಿಕೆ ಮಾಡುತ್ತಿರುವ ಕುರಿತು ವರದಿ ಮಾಡಿತ್ತು. ಆದರೆ ಕ್ಸಿಯೋಮಿ ನಿರಾಕರಿಸಿತ್ತು. ಭಾರತದ ಗ್ರಾಹಕರ ಮಾಹಿತಿಯನ್ನು 2018ರಿಂದ ಭಾರತದ ಸರ್ವರ್‌ನಲ್ಲೇ ಇಡಲಾಗಿದೆ. ಚೀನಾದಲ್ಲಿ ಇಲ್ಲ ಎಂದಿತ್ತು.
 

click me!