ಮುಂದಿನ ಪೋಪ್ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ ದಲಿತ ಕ್ರಿಶ್ಚಿಯನ್ ಆ್ಯಂಟನಿ ಪೂಲಾ

Published : May 07, 2025, 05:07 PM IST
ಮುಂದಿನ ಪೋಪ್ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ ದಲಿತ ಕ್ರಿಶ್ಚಿಯನ್ ಆ್ಯಂಟನಿ ಪೂಲಾ

ಸಾರಾಂಶ

ಕ್ಯಾಥೋಲಿಕ್ ಚರ್ಚ್‌ನ ಪೋಪ್ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ ದಲಿತ ಮೂಲದ ಕಾರ್ಡಿನಲ್ ಆ್ಯಂಟನಿ ಪೂಲಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆಂಧ್ರದಲ್ಲಿ ಜನಿಸಿದ ಪೂಲಾ, ಕ್ರಿಶ್ಚಿಯನ್ ಮಿಷನರಿಗಳ ಪ್ರಭಾವದಿಂದ ಮತಾಂತರಗೊಂಡು, ಪಾದ್ರಿಯಾಗಿ, ಬಿಷಪ್ ಆಗಿ, ಅಂತಿಮವಾಗಿ ಕಾರ್ಡಿನಲ್ ಆಗಿ ಏರಿದ್ದಾರೆ. ದೈವಿಕ ಇಚ್ಛೆಯಂತೆ ಪೋಪ್ ಆಯ್ಕೆ ನಡೆಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ(ಮೇ.07) : ಕ್ಯಾಥೋಲಿಕ್ ಚರ್ಚ್‌ನ ಅತ್ಯುನ್ನತ ಗುರು ಪೋಪ್ ಇತ್ತೀಚೆಗೆ ನಿಧನರಾಗಿದ್ದಾರೆ. ಇದೀಗ ಮುಂದಿನ ಪೋಪ್ ಆಯ್ಕೆಗೆ ಪ್ರಕ್ರಿಯೆಗಳು ನಡೆಯುತ್ತಿದೆ. ವಿಶ್ವದಲ್ಲಿರುವ ಎಲ್ಲಾ ಕ್ಯಾಥೋಲಿಕ್ ಚರ್ಚ್‌ ಹಾಗೂ ಅನುಯಾಯಿಗಳಿಗೆ ಪೋಪ್ ಗುರುವಾಗಿರುತ್ತಾರೆ. ಇದೀಗ ಫ್ರಾನ್ಸಿಸ್ ಪೋಪ್ ನಿಧನದ ಬಳಿಕ ಮುಂದಿನ ಪೋಪ್ ಆಯ್ಕೆ ಪ್ರಕ್ರಿಯೆಯಲ್ಲಿ ಒಂದು ವಿಶೇಷತೆ ಇದೆ. ಪೋಪ್ ಆಯ್ಕೆ ಸಭೆಯಲ್ಲಿ ದಕ್ಷಿಣ ಭಾರತದ ದಲಿತ ಮೂಲದ ಕಾರ್ಡಿನಲ್ ಆ್ಯಂಟನಿ ಪೂಲಾ ಪ್ರಮುಖ ಸದಸ್ಯರಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ದಲಿತನಾಗಿ ಹುಟ್ಟಿ ಬಳಿಕ ಕ್ರಿಶ್ಚಿಯನ್‌ಗೆ ಮತಾಂತರಗೊಂಡ ಆ್ಯಂಟನಿ ಪೂಲಾ ಹಂತ ಹಂತವಾಗಿ ಪದವಿ ಪಡೆದಿದ್ದಾರೆ. ಇದೀಗ ಆ್ಯಂಟನಿ ಪೂಲಾ ಪೋಪ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಪೋಪ್ ಆಯ್ಕೆ ಸಭೆಯಲ್ಲಿ ಭಾಗವಹಿಸುವ ಭಾರತದ ನಾಲ್ಕು ಕಾರ್ಡಿನಲ್‌ಗಳಲ್ಲಿ ಆಂಟನಿ ಪೂಲ ಕೂಡ ಒಬ್ಬರು. ದಲಿತ ಸಮುದಾಯದ ಪೂಲರನ್ನು ಕಾರ್ಡಿನಲ್ ಆಗಿ ಫ್ರಾನ್ಸಿಸ್ ಮಾರ್ಪಾಪ ನೇಮಿಸಿದ್ದರು. ಮುಂದಿನ ಪೋಪ್ ಆಯ್ಕೆಯಲ್ಲಿ ಮಾನವ ಹಸ್ತಕ್ಷೇಪಕ್ಕಿಂತ ದೈವಿಕ ಇಚ್ಛೆಗೆ ಪ್ರಾಮುಖ್ಯತೆ ಇರಲಿದೆ ಎಂದು ಕಾರ್ಡಿನಲ್ ಪೂಲ ಹೇಳಿದ್ದಾರೆ.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರ : ಪ್ರಧಾನಿ ಮೋದಿ

ಕರ್ನೂಲ್‌ನ ದಲಿತ ಕುಟುಂಬದಲ್ಲಿ ಬಡತನದ ಬಾಲ್ಯವನ್ನು ಕಳೆದ ಆ್ಯಂಟನಿಗೆ ಕ್ರಿಶ್ಚಿಯನ್ ಮಿಷನರಿ ವಿದ್ಯಾಭ್ಯಾಸಕ್ಕೆ ನರೆವು ನೀಡಿತ್ತು. ಬಡತನದಿಂದ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಆ್ಯಂಟನಿಗೆ ವಿಷನರಿ ನೆರವು ನೀಡಿತ್ತು. ತನ್ನ ವಿದ್ಯಾಭ್ಯಾಸಕ್ಕೆ ನೆರವು ನೀಡಿದ ಮಿಷನರಿಗಳಿಂದ ಪ್ರಭಾವಿತನಾಗಿ ಸಣ್ಣ ವಯಸ್ಸಿನಲ್ಲೇ ಆ್ಯಂಟಿನಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡರು. ನಂತರ ಪಾದ್ರಿಯಾಗಿ, ಬಿಷಪ್ ಮತ್ತು ಆರ್ಚ್ ಬಿಷಪ್ ಆಗಿ ಹಂತ ಹಂತವಾಗಿ ಸಾಧನೆ ಮಾಡಿದ್ದರೆ.  2022 ರಲ್ಲಿ ಫ್ರಾನ್ಸಿಸ್ ಮಾರ್ಪಾಪ ಪೋಪ್ ಇದೇ ಆ್ಯಂಟಿಯನ್ನು ಕಾರ್ಡಿನಲ್ ಆಗಿ ನೇಮಕ ಮಾಡಿ ಅಚ್ಚರಿ ಮೂಡಿಸಿದ್ದರು. ಈ ಕುರಿಕು ಪೂಲಾ ಕೂಡ ಅದು ಅಚ್ಚರಿ ನಿರ್ಧಾರವಾಗಿತ್ತು ಎಂದಿದ್ದಾರೆ.

ದೇಶದ ಮೊದಲ ದಲಿತ ಕಾರ್ಡಿನಲ್ ಆಗಿ ತಮ್ಮ ನೇಮಕವು ಫ್ರಾನ್ಸಿಸ್ ಮಾರ್ಪಾಪ ಅವರ ಹೃದಯವಂತಿಕೆಯ ಪ್ರತಿಬಿಂಬ ಎಂದು ಕಾರ್ಡಿನಲ್ ಆ್ಯಂಟನಿ ಹೇಳುತ್ತಾರೆ. ಫ್ರಾನ್ಸಿಸ್ ಮಾರ್ಪಾಪ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವಲ್ಲಿ ಮಾನವ ಹಸ್ತಕ್ಷೇಪಕ್ಕೆ ಮಿತಿ ಇದೆ. ದೈವಿಕವಾಗಿ ಈ ಆಯ್ಕೆ ನಡೆಯಲಿದೆ ಎಂದಿದ್ದಾರೆ.

ಕ್ರಿಶ್ಚಿಯನ್ ಮಿಷಿನರಿಗಳಿಂದ ಪ್ರಭಾವಿತ
ಆ್ಯಂಟನಿ ದಲಿತನಾಗಿ ಹುಟ್ಟಿ ತೀವ್ರ ಅಪಮಾನ, ಹಿಂಸೆ ಅನುಭವಿಸಿದ್ದರು. ಈ ಕುರಿತು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಯಾರೂ ನೀರು ಕುಡಿಯಲು ನೀಡುತ್ತಿರಲಿಲ್ಲ. ಹೊರಗೆ ನಿಲ್ಲಿಸುತ್ತಿದ್ದರು. ನೀರು ಕುಡಿಯಬೇಕಾದರೆ ಕೈಗಳಲ್ಲಿ ಕುಡಿಯಬೇಕಿತ್ತು. ಯಾರ ಗ್ಲಾಸ್, ಪಾತ್ರೆ,ವಸ್ತುಗಳನ್ನು ಮುಟ್ಟುವಂತಿರಲಿಲ್ಲ. ಇದು ದಲಿತನಾಗಿ ಯಾಕೆ ಹುಟ್ಟಿದೆ ಅನ್ನೋ ಪ್ರಶ್ನೆಯನ್ನು ಹಲವು ಬಾರಿ ಕೇಳವಂತೆ ಮಾಡಿತ್ತು ಎಂದು ಆ್ಯಂಟಿನಿ ಹೇಳಿದ್ದರು. ಹಿಂದುವಾಗಿ ಹುಟ್ಟಿ ಈ ರೀತಿ ಹಿಂಸೆ ಅನುಭವಿಸುವುದಕ್ಕಿಂತ ಗೌರವಯುತವಾಗಿ ಬದುಕುವ ಕನಸು ಕಂಡಿದ್ದರು ಎಂದು ಆ್ಯಂಟನಿ 2022ರಲ್ಲಿ ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್