ದೇಶದಲ್ಲಿ 19 ರೂಪಾಂತರಿ ವೈರಸ್‌: ಕರ್ನಾಟಕದಲ್ಲೂ ಹರಡುತ್ತಿದೆ ಈ ಹೊಸ ತಳಿ!

Published : Dec 29, 2020, 08:36 AM IST
ದೇಶದಲ್ಲಿ 19 ರೂಪಾಂತರಿ ವೈರಸ್‌: ಕರ್ನಾಟಕದಲ್ಲೂ ಹರಡುತ್ತಿದೆ ಈ ಹೊಸ ತಳಿ!

ಸಾರಾಂಶ

ದೇಶದಲ್ಲಿ 19 ರೂಪಾಂತರಿ ವೈರಸ್‌| ಆಂಧ್ರಪ್ರದೇಶದ 34% ಸೋಂಕಿತರಲ್ಲಿ ರೂಪಾಂತರಿ ವೈರಾಣು| ಕರ್ನಾಟಕದಲ್ಲೂ ಹರಡುತ್ತಿದೆ ‘ಎನ್‌440ಕೆ’ ಹೆಸರಿನ ಹೊಸ ತಳಿ| ಬ್ರಿಟನ್‌ ರೂಪಾಂತರಿ ವೈರಸ್‌ನ ಬೆನ್ನಲ್ಲೇ ಇನ್ನೊಂದು ಆಘಾತ?

ಹೈದರಾಬಾದ್(ಡಿ.29)‌: ಬ್ರಿಟನ್ನಿನ ಹೊಸ ಮಾದರಿಯ ಕೊರೋನಾ ವೈರಸ್‌ ಎಲ್ಲೆಡೆ ಹರಡುತ್ತಿರುವುದರ ನಡುವೆಯೇ ಭಾರತದಲ್ಲೂ ಕೊರೋನಾದ 19 ಬೇರೆ ಬೇರೆ ತಳಿಯ ವೈರಸ್‌ಗಳು ಹರಡುತ್ತಿರುವುದು ಪತ್ತೆಯಾಗಿದೆ. ಅದರಲ್ಲಿ ‘ಎನ್‌440ಕೆ’ ಹೆಸರಿನ ಹೊಸ ರೂಪಾಂತರಿ ವೈರಸ್‌ ಆಂಧ್ರಪ್ರದೇಶದ ಶೇ.34ರಷ್ಟುಸೋಂಕಿತರಲ್ಲಿ ಪತ್ತೆಯಾಗಿದೆ. ಆತಂಕದ ಸಂಗತಿಯೆಂದರೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದ ಕೆಲ ಕೊರೋನಾ ರೋಗಿಗಳಲ್ಲೂ ಈ ವೈರಸ್‌ ಕಂಡುಬಂದಿದೆ.

ದೆಹಲಿಯಲ್ಲಿರುವ ಸಿಎಸ್‌ಐಆರ್‌ನ ಇನ್‌ಸ್ಟಿಟ್ಯೂಟ್‌ ಫಾರ್‌ ಜೀನಾಮಿಕ್ಸ್‌ ಆ್ಯಂಡ್‌ ಇಂಟಿಗ್ರೇಟಿವ್‌ ಬಯಾಲಜಿ ಸಂಸ್ಥೆಯಲ್ಲಿ ಜಗತ್ತಿನ 2.4 ಲಕ್ಷ ಕೊರೋನಾ ಸೋಂಕಿತರಲ್ಲಿ ಪತ್ತೆಯಾದ ವೈರಸ್ಸನ್ನು ಪರೀಕ್ಷೆಗೊಳಪಡಿಸಲಾಗಿದೆ. ಆಗ ಕೊರೋನಾದ 126 ತಳಿಗಳು ಪತ್ತೆಯಾಗಿದ್ದು, ಇವು ಸಾಮಾನ್ಯ ಸಾರ್ಸ್‌ ಕೋವ್‌-2 ವೈರಸ್‌ ವಿರುದ್ಧ ರೋಗನಿರೋಧಕ ಶಕ್ತಿ ಹೊಂದಿರುವವರಿಗೂ ಸೋಂಕು ಅಂಟಿಸಬಹುದಾದ ಸಾಧ್ಯತೆಯಿದೆ. ಭಾರತದಲ್ಲಿ 19 ತಳಿಗಳು ಪತ್ತೆಯಾಗಿದ್ದು, ಅವುಗಳ ಪೈಕಿ ಎನ್‌440ಕೆ ತಳಿಯ ವೈರಸ್‌ ಆಂಧ್ರದಲ್ಲಿ ವೇಗವಾಗಿ ಹರಡುತ್ತಿದೆ. ಕರ್ನಾಟಕದಲ್ಲೂ ಕೆಲ ಕೊರೋನಾ ಸೋಂಕಿತರಲ್ಲಿ ಈ ತಳಿ ಕಂಡುಬಂದಿದೆ ಎಂದು ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.

ಆದರೆ, ಹೊಸ ತಳಿ ಈಗ ಪತ್ತೆಯಾಗಿರುವುದಲ್ಲ. ಜುಲೈ-ಆಗಸ್ಟ್‌ ವೇಳೆಯಲ್ಲೇ ಇದು ಪತ್ತೆಯಾಗಿದೆ. ದೇಶದ ಶೇ.2ರಷ್ಟುಕೊರೋನಾ ರೋಗಿಗಳಲ್ಲಿ ಈ ತಳಿಯ ವೈರಸ್ಸೇ ಇರಬಹುದು. ಇದು ಬ್ರಿಟನ್ನಿನ ರೂಪಾಂತರಿ ವೈರಸ್‌ನಂತೆ ವೇಗವಾಗಿ ಹರಡುತ್ತದೆಯೇ ಅಥವಾ ಸಾಮಾನ್ಯ ಕೊರೋನಾ ವೈರಸ್‌ಗಿಂತ ಕಡಿಮೆ ವೇಗದಲ್ಲಿ ಹರಡುತ್ತದೆಯೇ ಅಥವಾ ಇದರಿಂದ ಹೆಚ್ಚು ಅನಾರೋಗ್ಯ ಉಂಟಾಗುತ್ತದೆಯೇ ಎಂಬುದೂ ಸೇರಿದಂತೆ ಈ ವೈರಸ್‌ನ ಪರಿಣಾಮಗಳ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಿದೆ. ಸದ್ಯಕ್ಕೆ ಅಂತಹ ಯಾವ ಸಂಗತಿಗಳ ಬಗ್ಗೆಯೂ ನಮಗೆ ಏನೂ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಡಿಗೆದಾರರ ಮನೆಯಿಂದ ಹೊರಹಾಕಲು ಬಂದ ಮಾಲೀಕನಿಗೆ ಆಘಾತ, ತಾಯಿ-ಇಬ್ಬರು ಮಕ್ಕಳ ಶವಪತ್ತೆ
ಕೇರಳ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಭರ್ಜರಿ ಗೆಲುವು, 45 ವರ್ಷದ LDF ಅಧಿಪತ್ಯ ಅಂತ್ಯ