ತಿರುವನಂತಪುರಕ್ಕೆ ಬಿಎಸ್‌ಸಿ ವಿದ್ಯಾರ್ಥಿನಿ ಮೇಯರ್

By Suvarna NewsFirst Published Dec 28, 2020, 11:09 PM IST
Highlights

ಬಿಎಸ್‌ ಸಿ ವಿದ್ಯಾರ್ಥಿ ದಾಖಲೆ/ ಅತಿ ಕಿರಿಯ ವಯಸ್ಸಿನ ಮೇಯರ್/ ಕೇರಳದ ತಿರುವನಂತಪುರದಲ್ಲಿ ದಾಖಲೆ/  ಯಾವುದೇ  ರಾಜಕೀಯ  ಹಿನ್ನೆಲೆ ಇಲ್ಲ/  ಒಂದು ಗುಡ್ ಲಕ್ ಹೇಳೋಣ

ತಿರುವನಂತಪುರಂ( ಡಿ. 28)  21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ಅವರು ತಿರುವನಂತಪುರಂನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದು ರಾಜ್ಯ ಹಾಗೂ ದೇಶದ ಅತ್ಯಂತ ಕಿರಿಯ ಮೇಯರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ 100 ಸದಸ್ಯರಲ್ಲಿ  54 ಮತ ಪಡೆದು ಆಯ್ಕೆಯಾಗಿದ್ದಾರೆ.

ಮುದವನ್ಮುಗಲ್ ವಾರ್ಡ್‌ನ ಎಲ್ ಡಿಎಫ್ ಕೌನ್ಸಿಲರ್ ಆರ್ಯ ಮೇಯರ್ ಆಗಿದ್ದಾರೆ. ಪಕ್ಷ ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಆರ್ಯ ಹೇಳಿದ್ದಾರೆ.  ಹೇಳಿದ್ದು ಮಾದರಿ ನಗರವನ್ನಾಗಿ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ಡಿಕೆಶಿ ವರ್ಸಸ್ ಎಚ್‌ಡಿಕೆ.. ಏನಾಗ್ತಿದೆ ಕರ್ನಾಟಕದಲ್ಲಿ?

ಆರ್ಯ ಗೆ ಯಾವುದೇ ರಾಜಕೀಯ ಕುಟುಂಬದ  ಹಿನ್ನೆಲೆ ಇಲ್ಲ. ಅವರ ತಂದೆ ರಾಜೇಂದ್ರನ್ ಅವರು ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಶ್ರೀಲತಾ ಅವರು ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡು ಬಂದವರು.

 ಆರ್ಯ ಅವರು ತಿರುವನಂತಪುರಂನಲ್ಲಿರುವ ಆಲ್ ಸೇಂಟ್ಸ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು, ಬಾಲಾ ಸಂಘದ ರಾಜ್ಯಾಧ್ಯಕ್ಷೆ ಮತ್ತು ಸಿಪಿಎಂನ ವಿದ್ಯಾರ್ಥಿ ವಿಭಾಗವಾದ ಎಸ್‌ಎಫ್‌ಐನ ರಾಜ್ಯ ಪದಾಧಿಕಾರಿಯಾಗಿದ್ದು  ಸಿಪಿಎಂ ಶಾಖಾ ಸಮಿತಿ ಸದಸ್ಯೆ ಆಗಿ ಕೆಲಸ ಮಾಡಿಕೊಂಡು ಬಂದವರು. ಕಿರಿಯ ವಯಸ್ಸಿನಲ್ಲಿಯೇ ಅವರಿಗೆ ಅಧಿಕಾರ ಸಿಕ್ಕಿದ್ದು ಗುಡ್ ಲಕ್ ಹೇಳೋಣ..

click me!