ಸರ್ಕಾರಿ ಶಾಲೆಯ ಶಿಕ್ಷಕಿ ಚೆಕ್ಕಿಂಗ್ ನೆಪದಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದು, ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾಳೆ.
ಇಂದೋರ್: ಸರ್ಕಾರಿ ಶಾಲೆಯ ಶಿಕ್ಷಕಿ ಮಕ್ಕಳ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಪ್ರಕರಣ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಚೆಕ್ಕಿಂಗ್ ನೆಪದಲ್ಲಿ ವಿದ್ಯಾರ್ಥಿನಿಯರ ಸಂಪೂರ್ಣ ಬಟ್ಟೆಯನ್ನು ಬಿಚ್ಚಿಸಲಾಗಿದೆ. ಈ ವಿಷಯವನ್ನು ಮಕ್ಕಳು ಪೋಷಕರು ಬಳಿ ಹೇಳಿಕೊಂಡಾಗ ಶಾಲೆ ಬಳಿ ಜಮಾಯಿಸಿದ ಜನರು ಶಿಕ್ಷಕಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೋಷಕರು ಶಾಲಾ ಅಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ. ಇದೀಗ ಈ ಪ್ರಕರಣ ಜಿಲ್ಲಾ ಶಿಕ್ಷಣಾಧಿಕಾರಿಗಳವರೆಗೆ ತಲುಪಿದೆ. ಮತ್ತೊಂದೆಡೆ ಜಿಲ್ಲಾಧಿಕಾರಿಗಳು ಪ್ರಕರಣ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶನಿವಾರ ಬೆಳಗ್ಗೆ ಇಂದೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಜಿಲ್ಲಾಧಿಕಾರಿ ಹಾಗೂ ಶಿಕ್ಷಣಾಧಿಕಾರಿಗಳವರೆ ಹೋದಾಗ ಎಫ್‌ಐಆರ್‌ನಲ್ಲಿ ಶಿಕ್ಷಕಿ ಹೆಸರು ಸೇರ್ಪಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಆಶೀಷ್ ಸಿಂಗ್, ದೌರ್ಜನ್ಯಕ್ಕೊಳಗಾದ ಮಕ್ಕಳ ಪೋಷಕರ ದೂರಿನ ಬೆನ್ನಲ್ಲೇ ಶಿಕ್ಷಕಿ ವಿರುದ್ಧ ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.
ಭಾರತದಲ್ಲಿರುವ ರಹಸ್ಯಮಯ ‘Haunted’ ದೇವಸ್ಥಾನ, ಇಲ್ಲಿ ಹೋಗೋ-ಬರೋ ಜನ ಎಸಿತಾರೆ ನೀರಿನ ಬಾಟೆಲ್
ಶುಕ್ರವಾರ ಮಲ್ಹಾರಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆಗಳು ನಡೆಯುತ್ತಿದ್ದವು. ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಯ ಮೊಬೈಲ್ ರಿಂಗ್ ಆಗಿದೆ. ಕೂಡಲೇ ಪರೀಕ್ಷಾ ಕೊಠಡಿಯ ಮೇಲ್ವಿಚಾರಣೆಯ ಶಿಕ್ಷಕಿ ಆತನನ್ನು ಹೊರಗೆ ಹಾಕಿದ್ದಾರೆ. ನಂತರ ಅದೇ ಸಾಲಿನಲ್ಲಿ ಕುಳಿತಿದ್ದ ಏಳು ವಿದ್ಯಾರ್ಥಿಗಳನ್ನು ಹೊರಗೆ ಕರೆಯಲಾಗಿದೆ. ಎಲ್ಲರನ್ನು ಬಾತ್‌ರೂಮ್‌ಗೆ ಕರೆದುಕೊಂಡು ಹೋಗಿ ಪರಿಶೀಲನೆ ನೆಪದಲ್ಲಿ ಎಲ್ಲರ ಬಟ್ಟೆಯನ್ನು ಬಿಚ್ಚಿಸಿ ಅವಮಾನಿಸಲಾಗಿದೆ.
ಮಕ್ಕಳು ಮನೆಗೆ ಹೋಗುತ್ತಿದ್ದಂತೆ ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಪೋಷಕರ ಮುಂದೆ ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶಾಲೆ ಮುಂದೆ ಜಮಾಯಿಸಿದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಪ್ರಿನ್ಸಿಪಾಲ್, ತರಗತಿಯಲ್ಲಿ ವಿದ್ಯಾರ್ಥಿಗಳ ಬಳಿ ಮೊಬೈಲ್ ಸಿಕ್ಕರೆ ಅದನ್ನು ಪೋಷಕರು ಮತ್ತು ಪ್ರಾಂಶುಪಾಲರ ಗಮನಕ್ಕೆ ತರಬೇಕು. ಶಾಲಾ ಕಾನೂನಿನ ಪ್ರಕಾರವೇ ಮಕ್ಕಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸೋದು ಖಂಡನೀಯ. ಇದು ಆ ಶಿಕ್ಷಕಿಯ ಕೊಳಕು ಯೋಚನೆಯನ್ನು ತೋರಿಸುತ್ತದೆ. ಇದು ವಿದ್ಯಾಮಂದಿರವಾಗಿದ್ದು, ಇಂತಹ ವರ್ತನೆಗೆ ಇಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.
700 KG ತೂಕದ ದೈತ್ಯ ಎಮ್ಮೆಯೊಂದಿಗೆ ಹೋರಾಡಿ ಅಮ್ಮನ ಪ್ರಾಣ ಉಳಿಸಿ, ಉಸಿರು ಚೆಲ್ಲಿದ ಮಗ