ನೆಟ್ಟಗಿದ್ರೆ ಒಕೆ, ಇಲ್ಲಾ ಅಂದ್ರೆ ನಕ್ಷೆಯಿಂದ ಅಳಿಸಿ ಹಾಕ್ತೇವೆ, ಪಾಕ್‌ಗೆ ಭಾರತೀಯ ಸೇನಾ ಮುಖ್ಯಸ್ಥ ಎಚ್ಚರಿಕೆ

Published : Oct 03, 2025, 05:37 PM IST
General Upendra Dwivedi

ಸಾರಾಂಶ

ನೆಟ್ಟಗಿದ್ರೆ ಒಕೆ, ಇಲ್ಲಾ ಅಂದ್ರೆ ನಕ್ಷೆಯಿಂದ ಅಳಿಸಿ ಹಾಕ್ತೇವೆ, ಪಾಕ್‌ಗೆ ಭಾರತೀಯ ಸೇನಾ ಮುಖ್ಯಸ್ಥ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದನೆ ನಿಲ್ಲಿಸದಿದ್ದರೆ, ನಿಮ್ಮ ಅಸ್ತಿತ್ವವೇ ಇಲ್ಲವಾಗುತ್ತದೆ ಎಂದು ಉಪೇಂದ್ರ ದ್ವೇವೇದಿ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ (ಅ.03) ಪಾಕಿಸ್ತಾನ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಸೌದಿ ಸೇರಿದಂತೆ ಕೆಲ ರಾಷ್ಟ್ರಗಳ ಜೊತೆ ಸೇರಿಕೊಂಡು ಬಾಲ ಬಿಚ್ಚು ದುಸ್ಸಾಹಸ ಮಾಡುತ್ತಿದೆ. ಪಾಕಿಸ್ತಾನ ನರಿ ಬುದ್ದಿ ಮೊದಲೇ ಊಹಿಸಿರುವ ಭಾರತ ಈಗಾಗಲೇ ಖಡಕ್ ಎಚ್ಚರಿಕೆ ನೀಡದೆ. ರಕ್ಷಣಾ ರಚಿವ ರಾಜನಾಥ್ ಸಿಂಗ್ ಈಗಾಗಲೇ ವಾರ್ನಿಂಗ್ ನೀಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ನೀಡಿದ ಖಡಕ್ ಎಚ್ಚರಿಕೆಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಭೂಪಟದಲ್ಲಿ ಪಾಕಿಸ್ತಾನ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದರೆ ಭಯೋತ್ಪಾದನೆ ನಿಲ್ಲಿಸಿ ಶಾಂತಿಯಿಂದ ಇರಿ, ಇಲ್ಲದಿದ್ದರೆ, ನಕ್ಷೆಯಿಂದ ಅಳಿಸಿ ಹಾಕುತ್ತೇವೆ ಎಂದು ಉಪೇಂದ್ರ ದ್ವಿವೇದಿ ಎಚ್ಚರಿಸಿದ್ದಾರೆ.

ರಾಜಸ್ಥಾನದ ಅನೂಪಘಡ ಸೇನಾ ಪೋಸ್ಟ್‌ನಿಂದ ಎಚ್ಚರಿಕೆ

ರಾಜಸ್ಥಾನದ ಅನೂಪಘಡ ಸೇನಾ ಪೋಸ್ಟ್‌ಗೆ ಬೇಟಿ ನೀಡಿದ್ದ ಉಪೇಂದ್ರ ದ್ವಿವೇದಿ, ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಆಪರೇಶನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಸಂಯಮ ಪಾಲಿಸಿದ್ದೇವೆ. ಆದರೆ ಪ್ರತಿ ಭಾರಿ ಇದನ್ೇ ನಿರೀಕ್ಷೆ ಮಾಡಬೇಡಿ. ಈ ಬಾರಿ ಸಂಯಮ, ತಾಳ್ಮೆ ಯಾವುದು ಇರುವುದಿಲ್ಲ. ಈಗಲೂ ಭಯೋತ್ಪಾದನೆ, ಉಗ್ರರ ಪೋಷಣೆ, ಭಾರತದೊಳಗೆ ಉಗ್ರರ ನುಸುಳಿಸುವ ಪ್ರಯತ್ನ ನಿಲ್ಲಿಸದಿದ್ದರೆ, ಎರಡನೇ ಆಪರೇಶನ್ ಸಿಂದೂರ್ ಕಾರ್ಯಾಚರಣೆ ದೂರವಿಲ್ಲ ಎಂದು ಉಪೇಂದ್ರ ದ್ವಿವೇದಿ ಎಚ್ಚರಿಸಿದ್ದಾರೆ.

ದೇವರ ಇಚ್ಚೆಯಂತೆ ಯೋಧರೇ ನಿಮಗೊಂದು ಅದ್ಭುತ ಅವಕಾಶವಿದೆ

ದೇವರ ಇಚ್ಚೆಯಂತೆ ಭಾರತೀಯ ಯೋಧರಿಗೆ ಅತ್ಯುತ್ತಮ ಅವಕಾಶ ಬರಲಿದೆ. ಭಾರತೀಯ ಯೋಧರು ಸರ್ವ ಸನ್ನದ್ಧರಾಗಿರಿ ಎಂದು ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಈ ಮಾತು ಪಾಕಿಸ್ತಾನಕ್ಕೆ ತೀವ್ರ ಆತಂಕ ತರಿಸಿದೆ. ಕಾರಣ ಭಾರತ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ ಅನ್ನೋ ಆತಂಕ ಪಾಕಿಸ್ತಾನಕ್ಕೆ ಎದುರಾಗಿದೆ.

ಪಾಕಿಸ್ತಾನ ನೂರು ಸಲ ಯೋಚಿಸಬೇಕು

ಉಗ್ರರ ಪೋಷಣೆ ಮಾಡಿ ಭಾರತದ ವಿರುದ್ಧ ರಣತಂತ್ರದ ಯುದ್ಧಕ್ಕೆ ನಿಂತರೆ ಪರಿಣಾಮ ನೆಟ್ಟಗಿರುವುದಿಲ್ಲ. ಭಾರತ ಸಂಪೂರ್ಣವಾಗಿ ಭಯೋತ್ಪಾದನೆ ನಿಲ್ಲಿಸಲು ಆಗ್ರಹಿಸುತ್ತಿದೆ. ಈ ಹಿಂದಿಂತೆ ಪಾಕಿಸ್ತಾನ ತನ್ನ ಬಾಲ ಬಿಚ್ಚಿದರೆ ಮತ್ತೆ ಯೋಚಿಸಲು ಅವಕಾಶ ನೀಡುವುದಿಲ್ಲ. ಈ ನಕ್ಷೆಯಲ್ಲಿ ಪಾಕಿಸ್ತಾನ ಅನ್ನೋ ದೇಶ ಇತ್ತು ಅನ್ನೋದು ಇತಿಹಾಸ ಮಾಡುತ್ತೇವೆ. ಹೀಗಾಗಿ ನೂರು ಬಾರಿ ಯೋಚಿಸಿ ಎಂದು ಉಪೇಂದ್ರ ದ್ವಿವೇದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಭಾರತದಿಂದ ಸತತ ಎಚ್ಚರಿಕೆ, ಸರ್ವ ಸನ್ನದ್ಧಗೊಂಡ ಸೇನೆ

ಪಾಕಿಸ್ತಾನಕ್ಕೆ ಕಳೆದೆರಡು ದಿನಗಳಲ್ಲಿ ಭಾರತ ಸತತ ಎಚ್ಚರಿಕೆ ನೀಡಿದೆ. ರಕ್ಷಣಾ ಸಚಿವರ ಎಚ್ಚರಿಕೆ ಬೆನ್ನಲ್ಲೇ ಭಾರತೀಯ ವಾಯುಪಡೆಯ ಮುಖ್ಯಸ್ಥ ಎಪಿ ಸಿಂಗ್, ಆಪರೇಶನ್ ಸಿಂದೂರ್ ಕಾರ್ಯಾಚರಣೆ ಕುರಿತು ಮಹತ್ವದ ಹೇಳಿಕೆ ನೀಡಿದ್ದರು. ಪಾಕಿಸ್ತಾನದ ಎಫ್16, ಜೆಎಫ್ 17 ಸೇರಿದಂತೆ ನಾಲ್ಕರಿಂದ 5 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟಿಗರು ಭಾರತದ ರಫೆಲ್ ಯುದ್ದ ವಿಮಾನ ಹೊಡೆದುರುಳಿಸಿದ್ದೇವೆ ಎಂದು ಸನ್ನೆ ಮಾಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಏರ್ ಚೀಫ್ ಮಾರ್ಶನ್ ಆಪರೇಶನ್ ಸಿಂದೂರ್ ನೆನಪಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉತ್ತರದ ಮಹಿಳೆಯರು ಬರೀ ಮನೆಗೆಲಸಕ್ಕೆ ಸೀಮಿತ : ದಯಾನಿಧಿ
India Latest News Live: ಶೀಘ್ರ ಇರಾನ್‌ ತೊರೆಯಿರಿ: ಯುದ್ಧಭೀತಿ ಬೆನ್ನಲ್ಲೇ ಭಾರತದಿಂದ ಮುಂಜಾಗ್ರತೆ