ಸಂಚರಿಸುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರ ಗ್ರೇನೇಡ್ ದಾಳಿ, ನಾಲ್ವರು ಯೋಧರು ಸಜೀವ ದಹನ!

By Suvarna NewsFirst Published Apr 20, 2023, 4:59 PM IST
Highlights

ಭಾರತೀಯ ಯೋಧರನ್ನು ಹೊತ್ತು ಸಾಗುತ್ತಿದ್ದ ಸೇನಾ ವಾಹನ ಅವಘಡಕ್ಕೆ ಸಿಲುಕಿದೆ. ವಾಹನದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಇದರ ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. 

ಪೂಂಚ್(ಏ.20):  ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರರು ಗ್ರೇನೇಡ್ ದಾಳಿ ನಡೆಸಿದ್ದಾರೆ. ಪರಿಣಾಮ. ಭಾರತೀಯ ಸೇನಾ ವಾಹನದಲ್ಲಿದ್ದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಯೋಧರನ್ನು ಹೊತ್ತು ಸಾಗುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರು ಏಕಾಏಕಿ ದಾಳಿ ಮಾಡಿದ್ದಾರೆ. ಗ್ರೇನೇಡ್ ಎಸೆದಿದ್ದಾರೆ. ಗ್ರೇನೇಡ್ ಸ್ಫೋಟಗೊಂಡು ಸೇನಾ ವಾಹನ ಹೊತ್ತಿ ಉರಿದಿದೆ. ಇದರ ಪರಿಣಾಮ ವಾಹನದಲ್ಲಿದ್ದ ನಾಲ್ವರು ಯೋಧರು ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಸೇನಾ ಪಡೆ ಧಾವಿಸಿದ್ದು ಬೆಂಕಿ ನಂದಿಸಿದೆ. ಪ್ರಕರಣ ದಾಖಲಿಸಿಕೊಂಡು ಇದೀಗ ತನಿಖೆ ನಡೆಸಲಾಗುತ್ತಿದೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸೇನಾ ವಾಹನ ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಹನ ಸಂಪೂರ್ಣ ಹೊತ್ತಿ ಉರಿಯುತ್ತಿರುವ ದೃಶ್ಯ ಹಾಗೂ ಜನರು ಆಗಮಿಸುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

Latest Videos

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್‌ ಚೀತಾ ಪತನ, ಇಬ್ಬರು ಪೈಲಟ್‌ಗಳ ಸಾವು!

ಇತ್ತೀಚೆಗೆ ಸೇನಾ ವಾಹನ ಅಪಘಾತಕ್ಕೀಡಾಗುವ ಸಂಖ್ಯೆ ಹೆಚ್ಚಾಗುತ್ತಿದೆ.  2022ರ ಡಿಸೆಂಬರ್ ತಿಂಗಳಲ್ಲಿ ಸೇನಾ ವಾಹನ ಕಂದಕ್ಕೆ ಉರುಳಿ ಬಿದ್ದು 16 ಯೋಧರು ಮೃತಪಟ್ಟಿದ್ದರು. ಈ ದುರ್ಘಟನೆಯಲ್ಲಿ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.  ಚತ್ತನ್‌ನಿಂದ ಥಂಗೂ ಕಡೆಗೆ ಹೊರಟಿದ್ದ ಸೇನಾ ವಾಹನಗಳಲ್ಲಿದ್ದ ಟ್ರಕ್‌ ತಿರುವಿನಲ್ಲಿ ಆಯ ತಪ್ಪಿ ಕಂದಕಕ್ಕೆ ಉರುಳಿದೆ. ಘಟನೆ ನಡೆದ ಕೂಡಲೇ ರಕ್ಷಣಾ ಕಾರಾರ‍ಯಚಾರಣೆಯನ್ನು ಆರಂಭಿಸಲಾಗಿದ್ದು, ಗಾಯಗೊಂಡ ಸ್ಥಿತಿಯಲ್ಲಿದ್ದ ನಾಲ್ವರು ಯೋಧರನ್ನು ಏರ್‌ಲಿಫ್‌್ಟಮಾಡಲಾಗಿದೆ. ಆದರೆ ದುರಂತದಲ್ಲಿ ಮೂವರು ಜೂನಿಯರ್‌ ಕಮಿಷನ್‌್ಡ ಅಧಿಕಾರಿಗಳು ಮತ್ತು 13 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂತಾಪ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌, ‘ಯೋಧರ ಸೇವೆ ಮತ್ತು ಬದ್ಧತೆಗೆ ಇಡೀ ದೇಶ ಆಭಾರಿಯಾಗಿದೆ. ಯೋಧರನ್ನು ಕಳೆದುಕೊಂಡ ಕುಟುಂಬಕ್ಕೆ ನಾನು ಸಂತಾಪ ತಿಳಿಸುತ್ತೇನೆ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ’ ಎಂದು ಹೇಳಿದ್ದಾರೆ.

ಯೋಧನಿಂದಲೇ ಕರ್ನಾಟಕದ ಇಬ್ಬರು ಸೈನಿಕರು ಸೇರಿ ನಾಲ್ವರ ಹತ್ಯೆ: ಕಾರಣ ಬಹಿರಂಗ..

ಕಳೆದ ವರ್ಷ ಲಡಾಖ್‌ನಲ್ಲಿ 26 ಸೈನಿಕರು ಸಾಗುತ್ತಿದ್ದ ವಾಹನವು ರಸ್ತೆಯಿಂದ ಜಾರಿ 50-60 ಅಡಿ ಕೆಳಗೆ ಹರಿಯುತ್ತಿದ್ದ ಶ್ಯೋಕ್‌ ನದಿಗೆ ಉರುಳಿಬಿದಿದ್ದಿತ್ತು. ಈ ಭೀಕರ ದುರ್ಘಟನೆಯಲ್ಲಿ 7 ಸೈನಿಕರು ದುರ್ಮರಣಕ್ಕೀಡಾಗಿದ್ದರು. ‘26 ಯೋಧರ ತಂಡವು ಪಾರ್ತಾಪುರ ಸೇನಾ ಶಿಬಿರದಿಂದ ಲೇಹ್‌ ಜಿಲ್ಲೆಯ ತುರ್ತುಕ್‌ಗೆ ಸಾಗುತ್ತಿದ್ದರು. ಥೋಯಿಸ್‌ನಿಂದ ಸುಮಾರು 25 ಕಿಮೀ ದೂರದಲ್ಲಿ ಮುಂಜಾನೆ ಸುಮಾರು 9 ಗಂಟೆ ವೇಳೆಗೆ ವಾಹನವು ರಸ್ತೆಯಿಂದ ಜಾರಿ 50-60 ಅಡಿ ಆಳವಾಗಿರುವ ಶ್ಯೋಕ್‌ ನದಿ ಕಣಿವೆಗೆ ಬಿದ್ದಿದೆ’ ಎಂದು ಸೇನೆ ತಿಳಿಸಿದೆ.

click me!