
ಅಮೃತಸರ(ಡಿ.06): ದೇಶ ಕಾಯುವ ಯೋಧನ ಮನೆಗೆ ಬಂದ ಸಂಭ್ರಮ ಯುವಕರ ಹುಚ್ಚಾಟಕ್ಕೆ ಅಂತ್ಯವಾಗಿದೆ. ಗೆಳೆಯನ ಮದುವೆಗಾಗಿ ರಜೆಯಲ್ಲಿ ಮನಗೆ ಆಗಮಿಸಿದ ಯೋಧ, ಆಮಂತ್ರಣ ಪತ್ರಿಕೆ ಹಿಡಿದು ಗೆಳೆಯನ ಜೊತೆ ಹೊರಟಿದ್ದಾನೆ. ಬೈಕ್ ರೈಡ್ ಮಾಡುತ್ತಾ ಗೆಳೆಯನ ಸಂಬಂಧಿಕರು, ಆಪ್ತರಿಗೆ ಆಮಂತ್ರಣ ಪತ್ರಿಕೆ ನೀಡಲು ತೆರಳಿದ್ದಾನೆ. ಆದರೆ ಇದೇ ರಸ್ತೆಯಲ್ಲಿ ಯುವಕರ ಕುಂಪು ಸೋಶಿಯಲ್ ಮೀಡಿಯಾಗೆ ವಿಡಿಯೋ ರೆಕಾರ್ಡ್ ಮಾಡಿ ಅತೀ ಹೆಚ್ಚಿನ ಲೈಕ್ಸ್, ಕಮೆಂಟ್ ಪಡೆಯಲು ಅತೀ ವೇಗವಾಗಿ ಕಾರು ಡ್ರೈವ್ ಮಾಡಿಕೊಂಡು ಬಂದಿದ್ದಾರೆ. ನಿಯಂತ್ರಣ ತಪ್ಪಿದ ಕಾರು ನೇರವಾಗಿ ಯೋಧ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಯೋಧ ಹಾಗೂ ಆತನ ಗೆಳೆಯ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಪಂಜಾಬ್‌ನ ಸಂಗ್ರೂರ್ ಬಳಿ ನಡೆದಿದೆ.
ಗಡಿಯಲ್ಲಿ ದೇಶ ಕಾಯುವ ಯೋಧ ಬಿಂದರ್ ಸಿಂಗ್, ಆಪ್ತ ಗೆಳೆಯ ಚಮಾಕೌರ್ ಸಿಂಗ್ ಮದುವೆಗಾಗಿ ರಜೆ ಮೇಲೆ ಊರಿಗೆ ಆಗಮಿಸಿದ್ದಾನೆ. ಎರಡು ದಿನಗಳ ಹಿಂದೆ ಮನಗೆ ಮರಳಿ ಯೋಧ, ಇಂದು(ಡಿ.06) ಚಮಾಕೌರ್ ಸಿಂಗ್ ಜೊತೆ ಬೈಕ್‌ನಲ್ಲಿ ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಿದ್ದಾನೆ. ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಮೇಲೆ ಗೆಳೆಯ ಚಾಮಾಕೌರ್ ಸಿಂಗ್ ಕೂರಿಸಿಕೊಂಡು ಯೋಧ ರೈಡ್ ಮಾಡಿದ್ದಾನೆ.
Mysuru Crime: ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾರು ಹತ್ತಿಸಿದ ತಂದೆ-ಮಗ
ವಿರುದ್ಧ ದಿಕ್ಕಿನಿಂದ ನಾಲ್ವರು ಯುವಕರು ಟೋಯೋಟಾ ಫಾರ್ಚುನರ್ ಕಾರಿನಲ್ಲಿ ಆಗಮಿಸಿದ್ದಾರೆ. ಮದ್ಯ ಸೇವೆನೆ ಮಾಡುತ್ತಾ, ಸೋಶಿಯಲ್ ಮೀಡಿಯಾ ವಿಡಿಯೋ ರೆಕಾರ್ಡ್ ಮಾಡುತ್ತಾ ಅತೀ ವೇಗವಾಗಿ ಕಾರು ಚಲಾಯಿಸಿದ್ದಾರೆ. ಸಣ್ಣ ತಿರುವಿನ ಬಳಿ ಕಾರು ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ತಮ್ಮ ಪಾಡಿಗೆ ಬರುತ್ತಿದ ಯೋಧ ಹಾಗೂ ಆತನ ಗೆಳೆಯನ ಬೈಕ್‌ಗೆ ಕಾರು ಅಪಘಾತವಾಗಿದೆ. ಅತೀ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಜ್ಜುಗುಜ್ಜಾಗಿದೆ. ಯೋಧ ಹಾಗೂ ಆತನ ಗೆಳೆಯ ಚಿಮ್ಮಿ ಹೋಗಿದ್ದಾರೆ. ಮರುಕ್ಷಣದಲ್ಲೇ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ.
ಡಿಕ್ಕಿಯಾದ ರಭಸಕ್ಕೆ ಯೋಧ ಬಿಂದರ್ ಸಿಂಗ್ ಹಾಗೂ ಆತನ ಗೆಳೆಯ ಚಾಮಾಕೌರ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಯುವಕರ ಗುಂಪು ಡಿಕ್ಕಿಯಾದ ಬೆನ್ನಲ್ಲೇ ಪರಾರಿಯಾಗಿದ್ದಾರೆ. ಫಾರ್ಚುನರ್ ಕಾರು ಹಾಗೂ ಕಾರಿನಲ್ಲಿದ್ದ ಯುವಕರ ಗುಂಪಿಗೆ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಹೀಗಾಗಿ ಡಿಕ್ಕಿಯಾದ ಬೆನ್ನಲ್ಲೇ ಕಾರಿನ ಮೂಲಕ ಯುವಕರು ಪರಾರಿಯಾಗಿದ್ದಾರೆ.
ಟೈರ್ ಬಸ್ಟ್: ಬಸ್‌ಸ್ಟ್ಯಾಂಡ್‌ನಲ್ಲಿ ನಿಂತವರಿಗೆ ಗುದ್ದಿದ್ದ ಟ್ರಕ್: ಆರು ಜನರ ಬಲಿ
ಸ್ಥಳೀಯರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆ ದಾಖಲಸಿದ್ದಾರೆ. ಆದರೆ ಅಪಘಾತ ಸ್ಥಳದಲ್ಲೆ ಇವರ ಪ್ರಾಣ ಪಕ್ಷಿ ಹಾರಿಹೋಗಿದೆ. ಯೋಧ ಹಾಗೂ ಚಾಮಾಕೌರ್ ಸಿಂಗ್ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಯೋಧ ರಜೆಯಲ್ಲಿ ಮರಳಿದ ಖುಷಿಯಲ್ಲಿದ್ದ ಪೋಷಕರು ಹಾಗೂ ಕುಟುಂಬ ದುಃಖದ ಮಡುವಿನಲ್ಲಿದೆ. ಯೋಧ ಬಿಂದರ್ ಸಿಂಗ್ ಪತ್ನಿ ಹಾಗೂ ಪುಟ್ಟ ಮಗಳನ್ನು ಅಗಲಿದ್ದಾರೆ. ಇತ್ತ ಮದುವೆಯಾಗಬೇಕಿದ್ದ ಗೆಳೆಯ ಚಾಮಾಕೌರ್ ಸಿಂಗ್ ಮನೆಯಲ್ಲಿ ನೀರವ ಮೌನ ಆವರಿಸಿದೆ. ಎರಡೂ ಕುಟಂಬಸ್ಥರು, ಯುವಕರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ