Electic Vehicle ಭಾರತೀಯ ಸೇನೆಗೆ ಎಲೆಕ್ಟ್ರಿಕ್ ವಾಹನ ಸೇರ್ಪಡೆಗೆ ಮಾರ್ಗಸೂಚಿ!

By Suvarna NewsFirst Published Apr 21, 2022, 8:52 PM IST
Highlights
  • 12 ಯೋಧರನ್ನು ಹೊಂದಿರುವ ಪ್ರಬಲ ಸೇನೆ ಭಾರತ
  • ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಭಾರತೀಯ ಸೇನೆ ಚರ್ಚೆ
  • ಮಾಲಿನ್ಯ ತಗ್ಗಿಸಲು, ಇಂಧನ ಬಳಕೆ ಕಡಿಮೆ ಮಾಡಲು ದಿಟ್ಟ ಹೆಜ್ಜೆ

ನವದೆಹಲಿ(ಏ.21): ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ  ಭಾರತೀಯ ಸೇನೆಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತೀಯ ಸೇನೆಯ ಮೂಲಭೂತ ಸೌಕರ್ಯ ಕುರಿತು ಮಹತ್ವದ ಸೆಮಿನಾರ್‌ನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಮಾರ್ಗಸೂಚಿ ಕುರಿತು ಚರ್ಚಿಸಲಾಗಿದ್ದು,ಆರಂಭಿಕ ಹಂತದಲ್ಲಿ ಕಚೇರಿಗಳಲ್ಲಿ ಬಳಕೆ ಮಾಡಲು ನಿರ್ಧರಿಸಲಾಗಿದೆ.

ಸೇನಾ ಮುಖ್ಯಸ್ಥ ಎಂಎಂ ನರವಾನೆ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕಾನ್ಫೆರೆನ್ಸ್‌ನಲ್ಲಿ ಸೇನೆಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಕುರಿತು ಚರ್ಚಿಸಲಾಗಿದೆ. ಎಪ್ರಿಲ್ 18 ರಿಂದ ನಡೆಯುತ್ತಿರುವ ಈ ಸೆಮಿನಾರ್ 22ರವರೆಗೆ ನಡೆಯಲಿದೆ. 3.488 ಕಿಲೋಮೀಟರ್ ಉದ್ದದ ಭಾರತ ಚೀನಾ ಗಡಿಯಲ್ಲಿ ಮೂಲಭೂತ ಸೌಕರ್ಯ ಹೆಚ್ಚಳ ಸೇರಿದಂತೆ ಹಲವು ವಿಚಾರಗಳು ಈ ಸಭೆಯಲ್ಲಿ ಚರ್ಚಿಸಲಾಗಿದೆ.

ಬೆಳಗಾವಿಯಲ್ಲಿ ಇಂಡೋ-ಜಪಾನ್‌ ಜಂಟಿ ಸಮರಾಭ್ಯಾಸ: ಮೈನವಿರೇಳಿಸುವ ಫೋಟೋಸ್‌

ಭಾರತೀಯ ಸೇನೆ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತು ಅಧ್ಯಯನ ನಡೆಸಿದೆ. ಸೇನೆಯಲ್ಲಿ ಇವಿ ಬಳಕೆಯಿಂದ ಎದುರಾಗುವ ಸವಲಾಗಳು, ಆತಂಕ ಸೇರಿದಂತೆ ಹಲವು ವಿಚಾರಗಳ ಕುರಿತು ಅಧ್ಯಯನ ನಡೆಸಲಾಗಿದೆ. ಗಡಿ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಸದ್ಯಕ್ಕೆ ಅಸಾಧ್ಯವಾಗಿದೆ. ಆದರೆ ಸೇನಾ ಹೆಡ್‌ಕ್ವಾರ್ಟರ್ಸ್, ಕಚೇರಿ, ಸೇನಾಧಿಕಾರಿಗಳ ಪ್ರಯಾಣ ಸೇರಿದಂತೆ ಇತರ ಕಾರ್ಯಗಳಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸೇನೆ ಮುಂದಾಗಿದೆ.

ಇಂಧನ ಬಳಕೆ ಕಡಿಮೆ ಮಾಡಲು ಹಾಗೂ ಪರಿಸರಕ್ಕೆ ಪೂರಕವಾದ ವಾಹನ ಬಳಕೆಗೆ ಭಾರತೀಯ ಸೇನೆ ಆಸಕ್ತಿ ತೋರಿದೆ. ಆದರೆ ಗಡಿ ಪ್ರದೇಶಗಳಲ್ಲಿನ ರಸ್ತೆ, ಚಾರ್ಜಿಂಗ್, ಸಮಯದ ಅಭಾವ ಸೇರಿದಂತೆ ಹಲವು ಸವಾಲುಗಳಿವೆ. ಹೀಗಾಗಿ ಸದ್ಯದ ಮಟ್ಟಿಗೆ ಗಡಿ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ನಿಯೋಜನೆ ಅಸಾಧ್ಯವಾಗಿದೆ. ಆದರೆ ಹಂತ ಹಂತವಾಗಿ ಸೇನೆಯಲ್ಲಿ ಇವಿ ಆಗಮಿಸುವ ಸುಳಿವನ್ನು ಭಾರತೀಯ ಸೇನಾ ಆಯೋಜಿಸಿದ ಸಭೆ ಸುಳಿವು ನೀಡಿದೆ.

ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆ.ಜನರಲ್ ಮನೋಜ್ ಪಾಂಡೆ ನೇಮಕ!

ಉಕ್ರೇನ್‌ ಯುದ್ಧ ಬಗ್ಗೆ ಭಾರತ ಸೇನೆ ಅಧ್ಯಯನ
ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ಸಮರದ ಕುರಿತು ಭಾರತೀಯ ಸೇನೆ ಅಧ್ಯಯನ ನಡೆಸಲು ಮುಂದಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಮರದಲ್ಲಿನ ತಂತ್ರಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಈ ಅಧ್ಯಯನ ನಡೆಯಲಿದೆ. ರಷ್ಯಾ ಯುದ್ಧ ಕುರಿತು ಅಧ್ಯಯನ ನಡೆಸುವಂತೆ ರಾಷ್ಟ್ರೀಯ ಭದ್ರತಾ ಯೋಜನೆಗಾರರು ಈಗಾಗಲೇ ಸೇನೆಯ ವಿವಿಧ ಘಟಕಗಳಿಗೆ ಸೂಚನೆ ನೀಡಿದ್ದಾರೆ ಎಂದು ರಾಷ್ಟ್ರೀಯ ಆಂಗ್ಲದೈನಿಕವೊಂದು ವರದಿ ಮಾಡಿದೆ.

ಭಾರತಕ್ಕೆ ಕಲಿಕೆ ಏಕೆ ಮಹತ್ವದ್ದು?:
ಉಕ್ರೇನ್‌ ಯುದ್ಧದಲ್ಲಿ ರಷ್ಯಾ ಸೇನೆ 476 ಟ್ಯಾಂಕ್‌ಗಳನ್ನು ಕಳೆದುಕೊಂಡಿದೆ. ಹೆಗಲ ಮೇಲೆ ಇಟ್ಟು ಟ್ಯಾಂಕ್‌ಗಳನ್ನು ಹೊಡೆದುರುಳಿಸಬಹುದಾದ ಶಸ್ತ್ರಾಸ್ತ್ರಗಳು ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯೂ ಈ ವಿಚಾರದಲ್ಲಿ ತನ್ನ ತಂತ್ರವನ್ನು ಪರಿಷ್ಕರಿಸಬೇಕಾಗಿದೆ ಎಂದು ಹೇಳಲಾಗಿದೆ. ಗಮನಾರ್ಹ ಎಂದರೆ, ಭಾರತದ ಬತ್ತಳಿಕೆಯಲ್ಲಿ ರಷ್ಯಾದ ಟ್ಯಾಂಕ್‌, ಆರ್ಟಿಲರಿ, ರಾಕೆಟ್‌ ಹಾಗೂ ಶಸ್ತ್ರಾಸ್ತ್ರಗಳು ಅಪಾರ ಪ್ರಮಾಣದಲ್ಲಿವೆ. ವಾಯುಪಡೆಯಲ್ಲಿ ರಷ್ಯಾ ನಿರ್ಮಿತ ಸುಖೋಯ್‌-30 ಎಂಕೆಐ ಯುದ್ಧ ವಿಮಾನ ಬೆನ್ನೆಲುಬಿನಂತಿದೆ. ಹೀಗಾಗಿ ಈ ಯುದ್ಧ ಭಾರತಕ್ಕೆ ಕಲಿಕೆ ದೃಷ್ಟಿಯಿಂದ ಮಹತ್ವದ್ದಾಗಿದೆ.

ಅತ್ಯಂತ ಕಡಿಮೆ ತಂತ್ರಜ್ಞಾನ ಬಳಸಿ ಎರಡನೇ ಮಹಾಯುದ್ಧವನ್ನು ಎದುರಿಸಲಾಗಿತ್ತು. ಆ ಕಾಲ ಮುಗಿದಿದೆ. ಇನ್ನೇನಿದ್ದರೂ ದೀರ್ಘ ಯುದ್ಧಗಳು ನಡೆಯುತ್ತವೆ. ಯಾರು ಗೆದ್ದರು ಎಂಬುದು ಸ್ಪಷ್ಟವಾಗದೇ ಇದ್ದರೂ ಅಮಾಯಕರು ಸಾವಿಗೀಡಾಗುತ್ತಾರೆ ಎಂಬುದನ್ನು ಉಕ್ರೇನ್‌ ಯುದ್ಧ ತೋರಿಸಿದೆ ಎಂದು ಪತ್ರಿಕೆ ಹೇಳಿದೆ.
 

click me!