ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿ, ಜೀವನ್ಮರಣ ಸ್ಥಿತಿಯಲ್ಲಿದ್ದ ಮೂವರು ಚೀನೀ ನಾಗರಿಕರಿಕರು| ಜೀವನ್ಮರಣ ಸ್ಥಿತಿಯಲ್ಲಿದ್ದ 3 ಚೀನಿ ನಾಗರಿಕರಿಗೆ ಸೇನೆ ನೆರವು
ನವದೆಹಲಿ(ಸೆ.06): ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿ, ಜೀವನ್ಮರಣ ಸ್ಥಿತಿಯಲ್ಲಿದ್ದ ಮೂವರು ಚೀನೀ ನಾಗರಿಕರಿಗೆ ಭಾರತೀಯ ಸೇನೆ ಕೃತಕ ಆಮ್ಲಜನಕ, ಆಹಾರ, ಬೆಚ್ಚಗಿನ ಬಟ್ಟೆಗಳು ಹಾಗೂ ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.
मानवता सर्वोपरि extends help and assistance to stranded citizens at the India - China Border of at altitude of 17,500 feet under extreme climatic conditions.
For is foremost pic.twitter.com/mdW7Tka0wo
ಶೂನ್ಯಕ್ಕಿಂತ ಕಡಿಮೆ ತಾಪಮಾನದ ಮೈ ಕೊರೆಯುವ ಚಳಿಯಲ್ಲಿ ಉತ್ತರ ಸಿಕ್ಕಿಂ ಗಡಿ ಪ್ರದೇಶದಲ್ಲಿ ಓರ್ವ ಮಹಿಳೆ ಸೇರಿ ಮೂವರು ಚೀನಾದ ನಾಗರಿಕರು ದಾರಿ ತಪ್ಪಿಸಿಕೊಂಡು ಪರದಾಡುತ್ತಿದ್ದರು. ಈ ವೇಳೆ ಈ ತತ್‌ಕ್ಷಣ ಸ್ಥಳಕ್ಕೆ ದೌಡಾಯಿಸಿದ ಭಾರತದ ಯೋಧರು, ಅವರಿಗೆ ಅಗತ್ಯವಿರುವ ನೆರವು ನೀಡಿದ್ದಾರೆ.
ಅಲ್ಲದೆ, ಅವರು ಸೇರಬೇಕಾದ ಸ್ಥಳಕ್ಕೆ ತಲುಪಲೂ ನೆರವಾಗಿದ್ದಾರೆ. ಗಡಿ ಬಿಕ್ಕಟ್ಟು ಮುಂದುವರಿದಾಗಲೂ, ಚೀನಿಯರಿಗೆ ನೆರವಾಗಿದ್ದಕ್ಕೆ ಸೇನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.