
ಲಂಡನ್(ಸೆ.06): ದೇಹದ ಜೀವಕೋಶಗಳಿಗೆ ಕೊರೋನಾ ವೈರಸ್ (ಸಾರ್ಸ್-ಕೊವ್-2) ಪ್ರವೇಶ ಮಾಡದಂತೆ ತಡೆಯುವ ನ್ಯಾನೋಕಣವನ್ನು ಸ್ವೀಡನ್ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇದು ಇಲ್ಲಿಯವರೆಗೆ ವಿಜ್ಞಾನಿಗಳು ಹೇಳುತ್ತಿದ್ದ ಆ್ಯಂಟಿಬಾಡಿ (ಪ್ರತಿಕಾಯ)ಗಿಂತ ಹತ್ತಾರು ಪಟ್ಟು ಸಣ್ಣದಾದ ನ್ಯಾನೋಬಾಡಿ ಆಗಿದ್ದು, ಪ್ರಯೋಗ ಇನ್ನಷ್ಟುಯಶಸ್ವಿಯಾದರೆ ಕಡಿಮೆ ಖರ್ಚಿನಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಕಣಗಳನ್ನು ಉತ್ಪಾದಿಸಿ ಕೊರೋನಾಕ್ಕೆ ಔಷಧವಾಗಿ ನೀಡಬಹುದಾಗಿದೆ.
ಒಂದು ಜಾತಿಯ ಒಂಟೆಯಲ್ಲಿ ಈ ನ್ಯಾನೋಬಾಡಿ ನೈಸರ್ಗಿಕವಾಗಿ ಇರುತ್ತದೆ. ಅದನ್ನು ತೆಗೆದು ಇನ್ನೊಂದು ಜಾತಿಯ ಒಂಟೆಗೆ ಕೊರೋನಾ ವೈರಸ್‌ನ ಸ್ಪೈಕ್ ಪ್ರೊಟೀನ್‌ನ ಜೊತೆಗೆ ಸೇರಿಸಿ ಫೆಬ್ರವರಿ ತಿಂಗಳಲ್ಲಿ ವಿಜ್ಞಾನಿಗಳು ಇಂಜೆಕ್ಟ್ ಮಾಡಿದ್ದರು. 60 ದಿನಗಳ ನಂತರ ಆ ಪ್ರಾಣಿಯ ರಕ್ತದ ಮಾದರಿ ತೆಗೆದು ಪರೀಕ್ಷಿಸಲಾಗಿದ್ದು, ಅದರ ದೇಹದಲ್ಲಿ ಕೊರೋನಾ ವಿರುದ್ಧ ಅದ್ಭುತವಾದ ರೋಗನಿರೋಧಕ ಶಕ್ತಿ ರೂಪುಗೊಂಡಿದೆ. ಈ ಕಣವನ್ನು ಟಿವೈ1 ಎಂದು ವಿಜ್ಞಾನಿಗಳು ಕರೆದಿದ್ದಾರೆ.
ಮುಂದಿನ ಹಂತದಲ್ಲಿ ಇದನ್ನು ಬೇರೆ ಬೇರೆ ಪ್ರಾಣಿಗಳ ಮೇಲೆ ವಿಜ್ಞಾನಿಗಳು ಪ್ರಯೋಗಿಸಲಿದ್ದಾರೆ. ಅವುಗಳಲ್ಲೂ ಕೊರೋನಾ ಸೋಂಕನ್ನು ತಡೆಯಲು ಟಿವೈ1 ನ್ಯಾನೋಬಾಡಿಗಳು ಯಶಸ್ವಿಯಾದರೆ ಮನುಷ್ಯರ ಮೇಲೆ ಪ್ರಯೋಗಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ