ಉಧಂಪುರ ಬಳಿ ಸೇನಾ ಹೆಲಿಕಾಪ್ಟರ್‌ ಪತನ, ಮುಂದುವರಿದ ರಕ್ಷಣಾ ಕಾರ್ಯ!

By Suvarna NewsFirst Published Sep 21, 2021, 1:53 PM IST
Highlights

* ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್ ಪತನ

* ಪೈಲಟ್ ಹಾಗೂ ಸಹ ಪೈಲಟ್‌ ಇಬ್ಬರಿಗೂ ಗಾಯ

* ಕೆಟ್ಟ ಹವಾಮಾನದಿಂದ ದುರಂತ ಸಂಭವಿಸಿರುವ ಸಾಧ್ಯತೆ

ಶ್ರೀನಗರ(ಸೆ.21): ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯ ಶಿವ ಗರ್‌ಧಾರ್​​ನಲ್ಲಿ ಮಂಗಳವಾರ ಭಾರತೀಯ ಸೇನೆಯ ಹೆಲಿಕಾಪ್ಟರ್‌ ಪತನಗೊಂಡಿದೆ. ಮಂಜು ಮುಸುಕಿದ ವಾತಾವರಣವಿದ್ದ ಕಾರಣ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಇನ್ನು ಈ ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಕೆಟ್ಟ ಹವಾಮಾನದಿಂದಾಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಅಥವಾ ನೆಲಕ್ಕೆ ಅಪ್ಪಳಿಸಿರಬಹುದೆಂದು ಅಂದಾಜಿಸಲಾಘಿದೆ. ಹೀಗಿದ್ದರೂ ಈ ದುರಂತಕ್ಕೇನು ಕಾರಣ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪೈಲಟ್ ಮತ್ತು ಸಹ ಪೈಲಟ್ ಇಬ್ಬರೂ ಗಾಯಗೊಂಡಿದ್ದು, ಮಾಹಿತಿ ಪಡೆದ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಸದ್ಯ ಇಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

Locals have reported a helicopter going down near Patnitop area of Udhampur. We have rushed the team to the area. Details awaited: J&K Police

— ANI (@ANI)

ಇನ್ನು ದುರಂತದ ಬಗ್ಗೆ ಸ್ಥಳಿಯರಿಂದ ಮಾಹಿತಿ ಕಲೆ ಹಾಕಿರುವ ಸುದ್ದಿಸಂಸ್ಥೆ ಎಎನ್‌ಐ 'ಹೆಲಿಕಾಪ್ಟರ್‌ ಪಟನೀಟಾಪ್‌ ಸಮೀಪ ಭಾರೀ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ಸ್ಥಳೀಯರು ತಿಳಿಸಿರುವುದಾಗಿ ಟ್ವೀಟ್ ಮಾಡಿದೆ. 

click me!