ತಿರುಪತಿಗೆ ಹೋಗೋ ಭಕ್ತರಿಗೊಂದು ಗುಡ್‌ ನ್ಯೂಸ್!

By Suvarna NewsFirst Published Sep 21, 2021, 9:34 AM IST
Highlights

* ದೇವರ ದರ್ಶನದ ಅವಧಿಯನ್ನು ರಾತ್ರಿ 11.30ರವ​ರೆಗೆ ಹೆಚ್ಚಳ

* ಈವರೆ​ಗೆ 10 ಗಂಟೆಗೆ ದರ್ಶನದ ಅವಧಿ ಮುಕ್ತಾಯವಾಗುತ್ತಿತ್ತು

* ನಂತರ ಏಕಾಂತ ಸೇವೆ ನಡೆ​ಯ​ಲಿ​ದ್ದು, ರಾತ್ರಿ 12 ಗಂಟೆಗೆ ದೇಗು​ಲದ ಬಾಗಿಲು ಮುಚ್ಚ​ಲಾ​ಗು​ತ್ತದೆ

ತಿರುಪತಿ(ಸೆ.21): ತಿರುಮಲ ತಿರುಪತಿ ದೇವಸ್ಥಾನಮ್‌ ಸಮಿತಿ (ಟಿ​ಟಿ​ಡಿ​) ​ವೆಂಕ​ಟೇ​ಶ್ವ​ರ ದೇವಸ್ಥಾನದಲ್ಲಿ ದೇವರ ದರ್ಶನದ ಅವಧಿಯನ್ನು ರಾತ್ರಿ 11.30ರವ​ರೆಗೆ ಹೆಚ್ಚಿಸಿದೆ.

ಈವರೆ​ಗೆ 10 ಗಂಟೆಗೆ ದರ್ಶನದ ಅವಧಿ ಮುಕ್ತಾಯವಾಗುತ್ತಿತ್ತು. ಇನ್ನು 11.30ರವ​ರೆಗೆ ದರ್ಶನ ಭಾಗ್ಯ ಭಕ್ತಾ​ದಿ​ಗ​ಳಿಗೆ ಲಭಿ​ಸ​ಲಿದೆ. ನಂತರ ಏಕಾಂತ ಸೇವೆ ನಡೆ​ಯ​ಲಿ​ದ್ದು, ರಾತ್ರಿ 12 ಗಂಟೆಗೆ ದೇಗು​ಲದ ಬಾಗಿಲು ಮುಚ್ಚ​ಲಾ​ಗು​ತ್ತದೆ ಎಂದು ತಿಳಿ​ಸ​ಲಾ​ಗಿ​ದೆ.

ತಿರುಪತಿ ತಿರುಮಲ ಟ್ರಸ್ಟ್​ ಸದಸ್ಯರಾಗಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇಮಕ

ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಟಿಟಿಡಿ ದರ್ಶನದ ಅವಧಿಯನ್ನು ಹೆಚ್ಚಿಸಿದೆ. ತಿರುಪತಿ ದೇವಸ್ಥಾನದಲ್ಲಿ ನೀಡುವ ಉಚಿತ ದರ್ಶನದ ಟೋಕನ್‌ಗಳ ಪ್ರಮಾಣವನ್ನು ಹೆಚ್ಚಿಸುವುದಾಗಿ ಟಿಟಿಡಿಯ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.

ತಿಮ್ಮಪ್ಪನಿಗೆ ಕೊಟ್ಟ ಹೂ ಬಳಸಿ ತಯಾರಿಸಿದ ಅಗರಬತ್ತಿ ಬಿಡುಗಡೆ!

ಈಗ ಪ್ರತಿದಿನ ಸರಾಸರಿ 25 ಸಾವಿರ ಭಕ್ತಾದಿಗಳು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ಶನಿವಾರ 29 ಸಾವಿರ ಭಕ್ತರು ಭೇಟಿ ಕೊಟ್ಟಿದ್ದರು. ಹುಂಡಿಯಿಂದ 2.30 ಕೋಟಿ ರು. ಆದಾಯ ಸಂಗ್ರ​ಹ​ವಾ​ಗಿ​ದೆ.

click me!