
ನವದೆಹಲಿ ( ಜೂ. 17) ಗ್ಯಾಲ್ವಾನ್ ಪ್ರದೇಶದಲ್ಲಿ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವ ಚೀನಾಕ್ಕೆ ತಕ್ಕ ಬುದ್ಧಿ ಕಲಿಸಲು ಭಾರತ ಸೇನೆಗೆ ಹೆಚ್ಚಿನ ಅಧಿಕಾರ ನೀಡಿದೆ.
ಲೈನ್ ಆಫ್ ಕಂಟ್ರೋಲ್ ನಲ್ಲಿ ಸುರಕ್ಷತೆ ದೃಷ್ಟಿಯಿಂದ ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲು ಸೇನೆಗೆ ಅಧಿಕಾರ ನೀಡಲಾಗಿದೆ. ಹೋರಾಡುತ್ತ 20 ಯೋಧರು ಹುತಾತ್ಮರಾದ ನಂತರ ಕೇಂದ್ರ ಸರ್ಕಾರ ಈ ದಿಟ್ಟ ಕ್ರಮ ತೆಗೆದುಕೊಂಡಿದೆ.
ಒಂದು ತಿಂಗಳಿನಿಂದ ನಡೆಯುತ್ತಿದ್ದ ತಿಕ್ಕಾಟ ಇದೀಗ ವಿಕೋಪಕ್ಕೆ ತಿರುಗಿದ್ದು ಕಾರಣವಿಲ್ಲದೇ ದಾಳಿ ಮಾಡುತ್ತಿರುವ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ.
ಬಲಿದಾನ ಮಾಡಿದ ಇಪ್ಪತ್ತು ಯೋಧರ ಹೆಸರು, ನಿಮಗೊಂದು ಸೆಲ್ಯೂಟ್
ಭಾರತೀಯ ಯೋಧರೆ ಮೊದಲು ತಗಾದೆ ತೆಗೆದರು ಎಂದು ಸುಳ್ಳು ಆರೋಪ ಮಾಡುತ್ತಿರುವ ಚೀನಾ ತಾನು ಎಷ್ಟು ಸೈನಿಕರನ್ನು ಕಳೆದುಕೊಂಡಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ. ತೆಲಂಗಾಣದ ಸಂತೋಷ್ ಬಾಬು, ತಮಿಳುನಾಡಿನ ಆದಿತ್ಯ ಸೇರಿ ಯೋಧರು ಬಲಿದಾನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ