ಆ್ಯಂಬುಲೆನ್ಸ್‌ನಲ್ಲಿ ಮಗುವನ್ನು ಆಸ್ಪತ್ರೆ ಸಾಗಿಸುವ ವೇಳೆ ಭೂಕುಸಿತ, ನೆರವಿಗೆ ಧಾವಿಸಿದ ಭಾರತೀಯ ಸೇನೆ!

By Suvarna NewsFirst Published Jul 29, 2022, 9:38 PM IST
Highlights

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ 20 ದಿನದ ಮಗುವನ್ನು ಆಸ್ಪತ್ರೆ ಸಾಗಿಸುವ ವೇಳೆ ಭೂಕುಸಿತ ಸಂಭಲಿಸಿದೆ. ತುರ್ತು ಚಿಕಿತ್ಸೆಯ ನೆರವಿನಲ್ಲಿದ್ದ ಮಗುವನ್ನು ಆಸ್ಪತ್ರೆ ಸಾಗಿಸಲು ಆ್ಯಂಬುಲೆನ್ಸ್ ಪರದಾಡಿತು. ಈ ಮಾಹಿತಿ ತಿಳಿದ ಭಾರತೀಯ ಸೇನೆ ತಕ್ಷಣ ನೆರವಿಗೆ ಬಂದಿದೆ.

ಶ್ರೀನಗರ(ಜು.29): ತುರ್ತು ಚಿಕಿತ್ಸೆಗಾಗಿ 20 ದಿನವನ್ನು ಆಸ್ಪತ್ರೆ ಸಾಗಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಭಾರತೀಯ ಸೇನೆ ನೆರವು ನೀಡಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ರಂಬನ್ ಜಿಲ್ಲೆಯಲ್ಲಿ ನಡೆದಿದೆ. ಮಗು ಹುಟ್ಟುವಾಗಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಿತ್ತು. 20ನೇ ದಿನ ಮಗುವಿನ ಆರೋಗ್ಯ ಕ್ಷೀಣಸಿತ್ತು. ಹೀಗಾಗಿ ಆ್ಯಂಬುಲೆನ್ಸ್ ಮೂಲಕ ಆಕ್ಸಿಜನ್ ನೆರವಿನೊಂದಿಗೆ ಮಗುವನ್ನು ಆಸ್ಪತ್ರೆ ಸಾಗಿಸಲಾಗುತ್ತಿತ್ತು. ಶ್ರೀನಗರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಭೂಕುಸಿತ ಸಂಭವಿಸಿತ್ತು. ಇದರಿಂದ ಆ್ಯಂಬುಲೆನ್ಸ್ ದಾರಿ ಇಲ್ಲದೆ ಮುಂದೆ ಹೋಗಲು ಸಾಧ್ಯವಾಗಿಲ್ಲ. ಈ ಮಾಹಿತಿ ಪಡೆದ ಭಾರತೀಯ ಸೇನೆ ತಕ್ಷಣ ಸ್ಥಳಕ್ಕೆ ಆಗಮಿಸಿ ಮಗುವನ್ನು ರಸ್ತೆಯ ಮತ್ತೊಂದು ಬದಿಗೆ ಕರೆತಂದು ಆಸ್ಪತ್ರೆ ತೆರಳಲು ನೆರವು ನೀಡಿದೆ.

ಮಗುವಿನಗೆ ತುರ್ತು ಚಿಕಿತ್ಸೆಯ ಅಗತ್ಯವಿತ್ತು. ಆಮ್ಲಜನಕ ನೆರವಿನೊಂದಿಗೆ ಆ್ಯಂಬುಲೆನ್ಸ್‌ನಲ್ಲಿದ್ದ ಮಗುವು ಹೆಚ್ಚು ಹೊತ್ತು ರಸ್ತೆಯಲ್ಲೇ ಕಳೆದರೆ ಆಕ್ಸಿಜನ್ ಕೂಡ ಖಾಲಿಯಾಗಲು ಆರಂಭಿಸಿತ್ತು. ಇತ್ತ ಸೂಕ್ತ ಚಿಕಿತ್ಸೆ ವಿಳಂಬವಾಗುವ ಆತಂಕ ಎದುರಾಗಿತ್ತು. ಆದರೆ ದಿಗ್ದೂಲ್ ಸೇನಾ ಕ್ಯಾಂಪ್‌ನ ತಂಡ ಸ್ಥಳಕ್ಕೆ ಆಗಮಿಸಿತು. ಭೂಕುಸಿತದಿಂದ ರಸ್ತೆ ದಾರಿ ಸಂಪೂರ್ಣ ಕುಸಿತಗೊಂಡಿತ್ತು. ಹೀಗಾಗಿ ಆ್ಯಂಬುಲೆನ್ಸ್‌ನಿಂದ ಮಗುವನ್ನು ರಸ್ತೆಯ ಮತ್ತೊಂದು ಬದಿಗೆ ಕರೆ ತಂದು ಸೇನಾ ವಾಹನದಲ್ಲಿ ರಂಬನ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ 24,000 ಲೀಟರ್ ಆಮ್ಲಜನಕ ವ್ಯವಸ್ಥೆ ಮಾಡಿದ ಭಾರತೀಯ ಸೇನೆ, ಮತ್ತೊಂದು ಆ್ಯಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆ ಸೇರಿಸಲು ಸೇನೆ ವ್ಯವಸ್ಥೆ ಮಾಡಿತ್ತು.

ಯೋಧರ ಕಾಲಿಗೆರಗಿದ ಪುಟಾಣಿ: ವಿಡಿಯೋ ವೈರಲ್‌

ಬನಿಹಾಲ್ ಸುರಂಗ ಮಾರ್ಗ ದಾಟುವ ವರೆಗೆ ಸೇನಾ ವಾಹನ ಆ್ಯಂಬುಲೆನ್ಸ್‌ಗೆ ಎಸ್ಕಾರ್ಟ್ ಮಾಡಿತ್ತು. ಯಾವುದೇ ಅಡೆ ತಡೆ ಇಲ್ಲದ ಆ್ಯಂಬುಲೆನ್ಸ್ ಸಾಗಲು ಸೇನೆ ನೆರವು ನೀಡಿತು. ಈ ಮೂಲಕ ಮಗುವಿನ ತುರ್ತು ಚಿಕಿತ್ಸೆಗೆ ಸೇನೆ ನೆರವು ನೀಡಿತು. 

ಜೀವನ್ಮರಣ ಸ್ಥಿತಿಯಲ್ಲಿದ್ದ 3 ಚೀನಿ ನಾಗರಿಕರಿಗೆ ಸೇನೆ ನೆರವು
ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿ, ಜೀವನ್ಮರಣ ಸ್ಥಿತಿಯಲ್ಲಿದ್ದ ಮೂವರು ಚೀನೀ ನಾಗರಿಕರಿಗೆ ಭಾರತೀಯ ಸೇನೆ ಕೃತಕ ಆಮ್ಲಜನಕ, ಆಹಾರ, ಬೆಚ್ಚಗಿನ ಬಟ್ಟೆಗಳು ಹಾಗೂ ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನದ ಮೈ ಕೊರೆಯುವ ಚಳಿಯಲ್ಲಿ ಉತ್ತರ ಸಿಕ್ಕಿಂ ಗಡಿ ಪ್ರದೇಶದಲ್ಲಿ ಓರ್ವ ಮಹಿಳೆ ಸೇರಿ ಮೂವರು ಚೀನಾದ ನಾಗರಿಕರು ದಾರಿ ತಪ್ಪಿಸಿಕೊಂಡು ಪರದಾಡುತ್ತಿದ್ದರು. ಈ ವೇಳೆ ಈ ತತ್‌ಕ್ಷಣ ಸ್ಥಳಕ್ಕೆ ದೌಡಾಯಿಸಿದ ಭಾರತದ ಯೋಧರು, ಅವರಿಗೆ ಅಗತ್ಯವಿರುವ ನೆರವು ನೀಡಿದ್ದಾರೆ. ಅಲ್ಲದೆ, ಅವರು ಸೇರಬೇಕಾದ ಸ್ಥಳಕ್ಕೆ ತಲುಪಲೂ ನೆರವಾಗಿದ್ದಾರೆ. ಗಡಿ ಬಿಕ್ಕಟ್ಟು ಮುಂದುವರಿದಾಗಲೂ, ಚೀನಿಯರಿಗೆ ನೆರವಾಗಿದ್ದಕ್ಕೆ ಸೇನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
 

click me!